April 18, 2024

Bhavana Tv

Its Your Channel

ರಾಜ್ಯಧ್ಯಕ್ಷರ ಸೂಚನೆಯ ಮೇರೆಗೆ ಜಿಲ್ಲಾಧ್ಯಕ್ಷರ ಆಯ್ಕೆ ಹಾಗೂ ಜಿಲ್ಲಾ ಪದಾದಿಕಾರಿಗಳ ಆಯ್ಕೆ ಮಾಡಲು ತಿರ್ಮಾನ – ಜೆಡಿಎಸ್ ರಾಜ್ಯದ ಮುಖಂಡರಾದ ಎನ್.ಎಚ್ ಕೊನರೆಡ್ಡಿ

ಕುಮಟಾ: ಅವರು ಕುಮಟಾದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅತೀ ಶೀಘ್ರವೇ ಪಕ್ಷವನ್ನು ಸಂಘಟನೆ ಮಾಡುವಂತಹ ಯೊಗ್ಯ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ನಮ್ಮ ಪಕ್ಷದಿಂದ ಕೆಲವೊಂದು ನಮ್ಮ ತಪ್ಪುಗಳಿಂದ ಹಾಗೂ ನಮ್ಮ ಪಕ್ಷದ ಮುಖಂಡರು ಅಧಿಕಾರದ ಆಸೆಯಿಂದ ಬೇರೆ ಪಕ್ಷದತ್ತ ಮುಖ ಮಾಡಿರಬಹುದು, ನಮ್ಮ ಪಕ್ಷ ಮುಖಂಡರನ್ನು ತಯಾರಿ ಮಾಡುವಂತಹ ಕಾರ್ಖಾನೆಯಾಗಿ ಬಿಟ್ಟಿದೆ, ರಾಜ್ಯದಲ್ಲಿ ಬೇರೆ ಬೇರೆ ಪಕ್ಷದಲ್ಲಿ ಇರುವಂತಹ ಬಹುತೇಕ ಮುಖಂಡರು ಜೆಡಿಎಸ್‌ನಿಂದ ರಾಜಕೀಯ ಕಲಿತು ಬೇರೆ ಪಕ್ಷದಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ ಎಂದರು ಈ ಸಂದರ್ಬದಲ್ಲಿ ಮಾದ್ಯಮದವರು ಜಿಲ್ಲೆಯಲ್ಲಿ ಪಕ್ಷವನ್ನು ಹೇಗೆ ಸಂಘಟನೆ ಮಾಡುತ್ತಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆಯಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಬೇಕು ಎನ್ನುವ ತಿರ್ಮಾನವನ್ನು ಕೈಗೊಂಡಿದ್ದೇವೆ. ಜೆಡಿಎಸ್ ಪಕ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯಕರ್ತರ ದೊಡ್ಡ ಶಕ್ತಿ ಇದೆ ಜಿಲ್ಲೆಯಲ್ಲೂ ಸಹ ಬೇರೆ ಪಕ್ಷದಿಂದ ಮುಖಂಡರು ನಮ್ಮ ಪಕ್ಷಕ್ಕೆ ಸೆರ್ಪಡೆಯಾಗುವವರು ಎಂದು ಹೇಳಿದರು.
ಕುಮಟಾ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾರದ ಸೂರಜ್ ನಾಯ್ಕ ಸೋನಿ ಮಾತನಾಡಿ ಶಾಸಕ ದಿನಕರ ಶೆಟ್ಟಿ ಜೆಡಿಎಸ್ ಬಿಟ್ಟು ಹೊದರು ಕೂಡಾ ಕುಮಟಾದಲ್ಲಿ ಜೆಡಿಎಸ್ ಶಕ್ತಿ ಕಳೆಗುಂದಿಲ್ಲ. ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕುಮಟಾದಲ್ಲಿ ೪ ಗ್ರಾಮ ಪಂಚಾಯತ ಅಧ್ಯಕ್ಷರು ಜೆಡಿಎಸ್ ಪಕ್ಷದವರು ಇದ್ದರೆ ಶಾಸಕರು ಗ್ರಾಮ ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಕುಮಟಾದಲ್ಲಿ ೧೮ ಗ್ರಾ.ಪಂದಲ್ಲಿ ಅಧಿಕಾರ ಹಿಡಿಯುತ್ತದೆ ಎಂದು ಭವಿಷ್ಯ ನುಡಿದ್ದರು. ನಂತರ ಅಧ್ಯಕ್ಷರ ಆಯ್ಕೆ ನಡೆದ ಅಂತರ ಅವರ ಲೆಕ್ಕಾಚಾರ ತಲೆಕೆಳಗಾಗಿದೆ ಎಂದು ಹೇಳಿದರು

ಕೆ.ಎಸ್.ಆರ್.ಟಿ.ಸಿ ನೌಕರರು ತಮ್ಮ ವಿವಿಧ ಬೇಡಿಕೆಗಳಿಗೆ ಸರಕಾರ ಸರಿಯಾಗಿ ಸ್ಪಂದನೆ ನಿಡುತ್ತಿಲ್ಲ ಈ ಬಗ್ಗೆ ಜೆಡಿಎಸ್ ಪಕ್ಷವು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರ ಸ್ವಾಮಿಯವರು ನಮ್ಮ ಕೆಎಸ್‌ಆರಟಿಸಿ ನೌಕರರ ಸಮಸ್ಯೆಗೆ ದ್ವನಿಯಾಗಬೇಕು ಎಂದು ಜೆಡಿಎಸ್ ರಾಜ್ಯ ಮುಖಂಡರಾದ ಎನ್.ಎಚ್ ಕೊನರೆಡ್ಡಿಯವರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಎನ್.ಎಚ್ ಕೊನರೆಡ್ಡಿ ಸುಖಾಸುಮ್ಮನೆ ನೌಕರರ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡಬೇಡಿ. ಅವರಿಗೆ ವರ್ಗಾವಣೆಯನ್ನು ಮಾಡಿ ಸುಮ್ಮನೆ ಅವರಿಗೆ ತೊಂದರೆ ಕೊಡಬೇಡಿ ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ತಾಯಿ ಹೃದಯ ಇದ್ದರೆ ನೌಕರರನ್ನು ಕರೆದು ಅವರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಶಿಭೂಷಣ ಹೆಗಡೆ, ಬಾಸ್ಕರ ಪಟಗಾರ, ಜಿ.ಕೆ.ಪಟಗಾರ, ಇನಾಯಿತುಲ್ಲಾ ಶಾಬಂದ್ರಿ, ಕುಮಟಾ ಜೆಡಿಎಸ್ ಘಟಕದ ತಾಲೂಕಾದ್ಯಕ್ಷರಾದ ಸಿ.ಜಿ.ಹೆಗಡೆ

error: