March 29, 2024

Bhavana Tv

Its Your Channel

ಮೇ.೯ರಂದು ನಡೆಯಲಿರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಚುಣಾವಣೆಯಲ್ಲಿ ನಾನು ಸ್ಪರ್ಧಿಯಾಗಿ ಕಣಕಿಳಿಯಲಿಲ್ಲ. ಬದಲಾಗಿ ಕನ್ನಡ ನಾಡಿನ ಸೇವಾಕಾಂಕ್ಷಿ- ಚಂದನ ವಾಹಿನಿಯ ವಿಶ್ರಾಂತ ಮಹಾನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ

ಭಟ್ಕಳ :; ಮೇ.೯ರಂದು ನಡೆಯಲಿರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಚುಣಾವಣೆಯಲ್ಲಿ ನಾನು ಸ್ಪರ್ಧಿಯಾಗಿ ಕಣಕಿಳಿಯಲಿಲ್ಲ. ಬದಲಾಗಿ ಕನ್ನಡ ನಾಡಿನ ಸೇವಾಕಾಂಕ್ಷಿಯಾಗಿ ಸ್ಪರ್ಧಿಸಿದ್ದು ಜನರು ನನಗೆ ಕೆಲಸ ಮಾಡಲು ಅವಕಾಶ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಚಂದನ ವಾಹಿನಿಯ ವಿಶ್ರಾಂತ ಮಹಾನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ಅವರು ಬುಧವಾರ ಭಟ್ಕಳ ಪ್ರವಾಸಿ ಮಂದಿರದಲ್ಲಿ ಚುಣಾವಣೆಗೆ ಸಂಬAದಪಟ್ಟAತೆ ಸುದ್ದಿಗಾರರ ಜೊತೆ ಮಾತನಾಡಿಸಮಗ್ರ ಕರ್ನಾಟಕ ಪ್ರತಿನಿಧಿಯಾಗಿ ನಾನು ಸ್ಫರ್ಧೆಯಲ್ಲಿದ್ದೇನೆ. ಇಂದು ಕರ್ನಾಟಕವನ್ನು ಬಾವನಾತ್ಮಕವಾಗಿ ಎಕೀಕರಣಗೊಳಿಸಬೇಕಾಗಿದೆ. ನಾನು ಆಯ್ಕೆಯಾದಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ ಹಾಗೂ ಪ್ರತಿಭಾ ನ್ಯಾಯಗಳನ್ನು ಸ್ಥಾಪಿಸಿ ಅದರ ಮೂಲಕ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತೇನೆ ಎಂದರು. ಸ್ಥಳೀಯ ಉದಯೋನ್ಮುಖ ಕಲಾವಿದರರನ್ನು ಗುರುತಿಸಿ ಸ್ಥಳೀಯವಾಗಿ ಅವರಿಗೆ ಗೌರವ ಸೀಗುವ ಹಾಗೇ ಮಾಡುತ್ತೇನೆ. ಕನ್ನಡ ಶಾಲೆಗಳಲ್ಲಿ ಮಕ್ಕಳಿರದ ಕಾರಣ ನೀಡಿ ಶಾಲೆಗಳನ್ನು ಮುಚ್ಚಲಾಗುತ್ತದೆ. ಆದಕ್ಕೆ ನಾನು ಅವಕಾಶ ನೀಡುವುದಿಲ್ಲ. ಕನ್ನಡರಿಗೆ ಉದ್ಯೋಗ ಮೀಸಲಾತಿ, ಮಹಿಳಾ ಸಾಹಿತಿಗಳಿಗೆ ಗೌರವ ಹಾಗೂ ಪ್ರತಿ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ ನನ್ನ ಪ್ರಾಣಾಳಿಕೆಯಲ್ಲಿದೆ ಎಂದು ತಿಳಿಸಿದರು. ರಾಜಕೀಯವಾಗಿ ಯಾವುದೇ ಪಕ್ಷದ ಜೊತೆ ನಾನು ಗುರುತಿಸಿಕೊಂಡಿಲ್ಲ. ಹಾಗೇ ಎಡಪಂಥೀಯ ಸಾಹಿತಿಗಳ ಜೊತೆನೂ ನಾನು ಸಂಪರ್ಕ ಹೊಂದಿಲ್ಲ. ಯಾವುದೇ ಪಂಥಕ್ಕೆ ಸೇರದ ನಾನು ಕನ್ನಡ ಪಂಥದವನಾಗಿ ಕೆಲಸಮಾಡಲು ಬಯಸುತ್ತಿದ್ದೇನೆ ಎಂದರು. ರಾಜ್ಯ ಸಾಹಿತ್ಯ ಪರಿಷತ್‌ನಲ್ಲಿ ಪಾರದರ್ಶಕ ಆಡಳಿತದ ಅವಶ್ಯಕತೆ ಇದೆ. ರಾಜ್ಯ ಸಾಹಿತ್ಯ ಪರಿಷತ್ ಸಾರಥಿಯಾಗಲು ಜನರು ನನಗೆ ಅವಕಾಶ ನೀಡಿದಲ್ಲಿ ಎಲ್ಲವನ್ನೂ ಡಿಜಿಟಲೀಕರಗೊಳಿಸಿ ಪಾರದರ್ಶಕ ಆಡಳಿತ ನಡೆಸುವುದಾಗಿ ತಿಳಿಸಿದರು.
ಹೈಕೊರ್ಟ ನಿವೃತ್ತ ನ್ಯಾಯದೀಶ ಅರಳಿ ನಾಗರಾಜ, ಸಾಹಿತಿ ಜಮೀರುಲ್ಲಾ ಷರೀಪ ಮಾತನಾಡಿದರು. ಪ್ರಚಾರ ಸಮಿತಿ ಅಧ್ಯಕ್ಷ ನವೀದ ಸಾಬ್ ಕುಷ್ಠಗಿ ಇದ್ದರು.

error: