April 25, 2024

Bhavana Tv

Its Your Channel

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ್ ನಾಯ್ಕ ಚಾಲನೆ

ಭಟ್ಕಳ ; ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ್ ನಾಯ್ಕ ಗುರುವಾರ ಚಾಲನೆ ನೀಡಿದರು.
ಭಟ್ಕಳ ತಾಲೂಕಿನ ಬೈಲೂರು ಪಂಚಾಯತ್ ಶೇರುಗಾರಕೇರಿ ಕುಡಿಯುವ ನೀರಿನ ಯೋಜನೆ. ೩೪ ಲಕ್ಷ,
ಹೊನ್ನಾವರ ತಾಲೂಕಿನ ಗುಳದಕೇರಿ ಪಂಚಾಯತ್ ಮಾದರಿ ಶಾಲೆಯಿಂದ ಪರಿಶಿಷ್ಟ ಜಾತಿ ಕೇರಿಯವರೆಗೆ ರಸ್ತೆ ನಿರ್ಮಾಣ. ೧೦ ಲಕ್ಷ, ಹಾಗೂ ಹೊನ್ನಾವರ ತಾಲೂಕಿನ ಮಂಕಿ ಗುಳದಕೇರಿ ಪಂಚಾಯತ್ ಸಾರಸ್ವತಕೇರಿ ಸಿ. ಸಿ ರಸ್ತೆ ನಿರ್ಮಾಣ. ೧೫ ಲಕ್ಷ ರೂಪಾಯಿಯ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

error: