April 26, 2024

Bhavana Tv

Its Your Channel

ದೇಶಪಾಂಡೆ ವಿರುದ್ಧ ಮತ್ತೋಮ್ಮೆ ಹರಿಹಾಯ್ದ ಶಾಸಕ ಸುನಿಲ ನಾಯ್ಕ

ಭಟ್ಕಳ ಸೇರಿದಂತೆ ಉ.ಕ. ಜಿಲ್ಲೆಯಲ್ಲಿ ತಲೆದೋರಿರುವ ರಾ.ಹೆ.೬೬ ರ ಚತುಷ್ಪಥ ಸಮಸ್ಯೆಗಳಿಗೆ ಕಾಂಗ್ರೇಸ್ ನ ಹಳೆ ಹುಲಿ ಮಾಜಿ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಯೇ ಕಾರಣವಾಗಿದ್ದಾರೆ ಎಂದು ಪದೇ ಪದೇ ಆರೋಪಿಸುತ್ತಿರುವ ಶಾಸಕ ಸುನಿಲ ನಾಯ್ಕ öತ್ರೆöÊಮಾಸಿಕ ಕೆ.ಡಿಪಿ ಸಭೆಯ ನಂತರ ಮತ್ತೊಮ್ಮೆ ದೇಶಪಾಂಡೆ ವಿರುದ್ಧ ಹರಿಹಾಯ್ದಿದ್ದಾರೆ.

ಭಟ್ಕಳ: ಕಳೆದ ೩೦ ವರ್ಷಗಳಿಂದ ಜಿಲ್ಲೆಯಲ್ಲಿ ರಾಜಕೀಯ ಮಾಡುತ್ತ ಬಂದಿರುವ ದೇಶಪಾಂಡೆ ಭಟ್ಕಳಕ್ಕೇನು ಕೊಟ್ಟಿದ್ದಾರೆ? ಅವರಿಂದ ಯಾವ ಹೊಸ ಯೋಜನೆ ಬಂದಿದೆ? ಅವರ ಸಾಧನೆಗಳೇನು ಎಂದೆಲ್ಲ ಪ್ರಶ್ನಿಸಿದ್ದಾರೆ.
ಹೆದ್ದಾರಿ ಅಗಲೀಕರಣ ಸಮಸ್ಯೆ ಪರಿಹಾರವಿಲ್ಲದ ಸಮಸ್ಯೆಯಾಗಿದ್ದು ಅನೇಕ ಕಡೆಗಳಲ್ಲಿ ವಾಹನ ದಟ್ಟಣೆ ಇರುವಲ್ಲಿ ಸರ್ವಿಸ್ ರಸ್ತೆಯೇ ಇಲ್ಲದೇ ಇರುವುದರಿಂದಾಗಿ ಇಂದು ಅನೇಕ ಅಪಘಾತಗಳು ಸಂಭವಿಸುತ್ತಿದೆ. ಅನೇಕ ಕಡೆಗಳಲ್ಲಿ ರಸ್ತೆ ತಿರುವು ಇಲ್ಲದೇ ಜನರು ಕಿ.ಮಿ. ಗಟ್ಟೆಲೆ ಹೋಗಿ ವಾಪಾಸು ಬರುವ ಪ್ರಸಂಗ ಎದುರಾಗಿದೆ ಎಂದ ಅವರು ಶಿರಾಲಿಯಲ್ಲಿ ಚತುಸ್ಪಥ ಹೆದ್ದಾರಿಯನ್ನು ೩೦ ಮೀಟರ್‌ಗೆ ಸೀಮಿತಗೊಳಿಸಿರುವುದರಿಂದ ಸರ್ವಿಸ್ ರಸ್ತೆಯೇ ಇಲ್ಲವಾಗಿದೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಮೂಡಭಟ್ಕಳದ ಬಳಿ ಅಂಡರಪಾಸ್ ನಿರ್ಮಾಣ ಅಗತ್ಯವಾಗಿದ್ದರೂ ಸಹ ನಿರ್ಲಕ್ಷ ಮಾಡಲಾಗಿದೆ. ಹೆದ್ದಾರಿ ಅಗಲೀಕರಣದ ಮೊದಲಿದ್ದ ನಕ್ಷೆ ಬದಲಾವಣೆಗೆ ಒತ್ತಡ ತಂದಿದ್ದರಿAದ ಕೆಲವು ಕಡೆ ೪೫ ಮೀಟರ್ ಬದಲಾಗಿ ರಸ್ತೆ ೩೦ ಮೀಟರಿಗೆ ಸೀಮಿತವಾಗಿದೆ. ಮಾಜಿ ಉಸ್ತುವಾರಿ ಸಚಿವರು ರಾಜ್ಯ ಸರಕಾರದ ಮೂಲಕ ಒತ್ತಡ ಹಾಕಿದ್ದು ಪುರವರ್ಗದಲ್ಲಿ ನಕ್ಷೆಯನ್ನೇ ಬದಲಾಯಿಸಲಾಗಿದೆ. ಇದು ಬರೀ ಭಟ್ಕಳ ತಾಲ್ಲೂಕಿನಲ್ಲಷ್ಟೇ ಆಗಿಲ್ಲ, ಹೊನ್ನಾವರ-ಕುಮಟಾ ಕ್ಷೇತ್ರದಲ್ಲೂ ಇದೇ ರೀತಿ ಗೊಂದಲವಾಗಿದೆ ಎಂದರು.
ಶಿರಾಲಿಯಲ್ಲಿ ಸರ್ವಿಸ್ ರಸ್ತೆ, ಮೂಡಭಟ್ಕಳ ಮತ್ತಿತರ ಕಡೆ ಅಂಡರಪಾಸ್ ನಿರ್ಮಾಣದ ಬಗ್ಗೆ ಸಂಸದರ ಮೂಲಕ ಪ್ರಯತ್ನ ಮಾಡಲಾಗುತ್ತಿದ್ದು, ನಮ್ಮ ಬೇಡಿಕೆ ಈಡೇರುವ ಎಲ್ಲಾ ಲಕ್ಷಣ ಇದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ಕೊಡಲಾಗಿದ್ದು, ಹೊನ್ನಾವರದ ಹೆರೆಂಗಡಿಯ ಅಳ್ಳಂಕಿಯಲ್ಲಿ ೨೦ ಕೋಟಿ ವೆಚ್ಚದಲ್ಲಿ ಅಂಬೇಡಕರ ವಸತಿ ಶಾಲೆ ಮಂಜೂರಿಯಾಗಿದೆ. ಹೊನ್ನಾವರದ ಮಂಕಿಯ ಏತ ನೀರಾವರಿ ಸರ್ವೆಗೆ ೫೦ ಲಕ್ಷ ಬಿಡುಗಡೆಯಾಗಿದೆ. ಪಿಎಂಜಿವೈ ಯೋಜನೆಯಡಿಯಲ್ಲಿ ಸಂಸದರ ಸಹಕಾರದಿಂದ ಬೆಳಕೆ ಗೊರ್ಟೆ ಕಿರುಹೊಳೆ ರಸ್ತೆಗೆ ೫ ಕೋಟಿ ಹಾಗೂ ಹೊನ್ನಾವರದ ಆಸೀಕೇರಿಗೆ ೭ ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಂಜೂರಿಯಾಗಿದೆ ಎಂದ ಅವರು ಕ್ಷೇತ್ರದಲ್ಲಿ ರಸ್ತೆ, ಸೇತುವೆ, ಕುಡಿಯುವ ನೀರು ಸೇರಿದಂತೆ ಮುಂತಾದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಸರಕಾರದಿಂದಲೂ ಅನುದಾನ ಬರುತ್ತಿದೆ. ಕಡವಿನಕಟ್ಟೆ ಡ್ಯಾಂನಲ್ಲಿ ನೀರು ಕಡಿಮೆಯಾದರೆ ಶೇಖರಣೆಯಾಗಿರುವ ಹೂಳನ್ನು ತೆಗೆಯಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

error: