April 20, 2024

Bhavana Tv

Its Your Channel

ಗಾಂಜಾ ಮಾರಾಟ, ಆರೋಪಿ ಬಂಧನ, ೮೪.೪೫೦ಗ್ರಾಂ ಗಾಂಜಾ ವಶ

ಭಟ್ಕಳ : ತಾಲೂಕಿನ ಸಾಗರ ರಸ್ತೆಯ ಗುಲ್ಮಿ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿ ಸೈಯದ್ ಅಕ್ರಮ ಎಂದು ತಿಳಿದು ಬಂದಿದೆ.ಆರೋಪಿ ಶನಿವಾರದಂದು
ಭಟ್ಕಳದ ಸಾಗರ ರಸ್ತೆಯ ಗುಲ್ಮಿ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸುಮಾರು ೮೪.೪೫೦ ಗ್ರಾಂ ತೂಕದ ಒಣಗಿದ ಗಾಂಜಾವನ್ನು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಮಾದಕ ವಸ್ತುವಾದ ಗಾಂಜಾವನ್ನು ತಮ್ಮ ವಶದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದನು.

ಆರೋಪಿಗಳಿಂದ ಒಟ್ಟು ೮೪.೪೫೦ಗ್ರಾಂ ಗಾಂಜಾ, ೧೨೦೦ ರೂಪಾಯಿ ನಗದನ್ನು ವಶಪಡಿಸಿಕೊಂದಿದ್ದಾರೆ.

error: