April 20, 2024

Bhavana Tv

Its Your Channel

ವೆಂಕಟಸುಬ್ಬಯ್ಯ ಅವರ ಬದುಕು ಶ್ರೀಗಂಧದ0ತೆ : ಅರವಿಂದ ಕರ್ಕಿಕೊಡಿ

ಕಾರವಾರ: ನಾಡಿನ ಹಿರಿಯ ಭಾಷಾಶಾಸ್ತçಜ್ಞ ಜಿ.ವೆಂಕಟಸುಬ್ಬಯ್ಯ ಅವರ ನಿಧನರಾಗಿದ್ದರಿಂದ ಕನ್ನಡಕ್ಕೆ ಬಹು ದೊಡ್ಡ ನಷ್ಟವಾಗಿದೆ. ೧೦೮ ವರ್ಷ ಬಾಳಿದ ಜಿವಿ ಅವರ ಬದುಕು ನಿಜದಲ್ಲಿ ಶ್ರೀಗಂಧದ ಕೊರಡಿನಂತೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಜನ ಸಾಮಾನ್ಯರಿಗೂ ಕನ್ನಡದ ಸೊಗಸನ್ನು ಪರಿಚಯಿಸಿದ ವೆಂಕಟಸುಬ್ಬಯ್ಯ ಹೊಸ ತಲೆಮಾರಿಗೆ ಕನ್ನಡ ಬಾಷೆಯನ್ನು ಪರಿಣಾಮಕಾರಿಯಾಗಿ ದಾಟಿಸುವಲ್ಲಿ ಶ್ರಮ ಪಟ್ಟ ರೀತಿ ಸಣ್ಣ ಸಂಗತಿಯಲ್ಲಿ ಅವರು ನೀಡಿದ ನಿಘಂಟುಗಳು, ‘ಇಗೋ ಕನ್ನಡ’ ಸಾಮಾಜಿಕ ನಿಘಂಟುಗಳು ಮುಂತಾದವುಗಳು ಬಹು ಅಮೂಲ್ಯ ಕೊಡುಗೆಗಳಾಗಿವೆ. ಯಾರೇ ಅಂಚೆ ಕಾರ್ಡಿನಲ್ಲಿ, ದೂರವಾಣಿಯಲ್ಲಿ ಕನ್ನಡ ವ್ಯಾಕರಣ, ಶಬ್ಧಗಳ ಬಗ್ಗೆ ಮಾಹಿತಿ ಕೇಳಿದರು ಅಷ್ಟೇ ಉತ್ಸಾಹದಿಂದ ತಿಳಿ ಹೇಳುತ್ತಿದ್ದ ಅವರು ಕನ್ನಡವನ್ನು ತಪಸ್ಸಿನಂತೆ ಆರಾಧಿಸಿದರು. ಜಿವಿ ಅವರನ್ನು ಇನ್ನಷ್ಟು ಗಂಬೀರವಾಗಿ ಓದುವುದರ ಮೂಲಕ ಕನ್ನಡಿಗರು ಗೌರವಿಸಬೇಕಾಗಿದೆ. ಈ ನೆಲ ಅವರನ್ನು ಸದಾ ಸ್ಮರಿಸುತ್ತದೆ ಎಂದು ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

error: