May 11, 2021

Bhavana Tv

Its Your Channel

ಹೊನ್ನಾವರದಲ್ಲಿ ಆತಂಕ ಸೃಷ್ಟಿsಸಿ ಹೆಚ್ಚುತ್ತಿರುವ ಕೋರೊನಾ ಸೊಂಕಿತರ ಸಂಖ್ಯೆ

ಹೊನ್ನಾವರ- ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖೈ ಹೆಚ್ಚಾದಂತೆ ಹೊನ್ನಾವರ ತಾಲ್ಲೂಕಿನಲ್ಲೂ ದಿನದಿಂದ ದಿನಕ್ಕೆ ಸೊಂಕಿತರು ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರದ ವರೆಗೆ ೯೮ ಸೊಂಕಿತರಿದ್ದು ಶನಿವಾರ ೨೨ ಸೋಂಕಿತರು ಪತ್ತೆಯಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ೧೭ ಹಾಗೂ ಬೇರೆ ಆಸ್ಪತ್ರೆಗಳಲ್ಲಿ ಇಬ್ಬರು ಚಿಕಿತಸೆ ಪಡೆಯುತ್ತಿದ್ದಾರೆ. ಹಾಗು ಹೋಮ ೧೦೨ಮಂದಿ ಆಸ್ಸೋಲೇಶನಲ್ಲಿದ್ದಾರೆ.


ಪ್ರಾರಂಭದಲ್ಲಿ ಕೆಲವೆ ಸೋಂಕಿತರನ್ನು ಹೊಂದಿದ್ದ ಹೊನ್ನಾವರ ತಾಲ್ಲೂಕು ಬೆಂಗಳೂರು ಹಾಗೂ ಬೇರೆ ಕಡೆಗಳಿಂದ ಬಂದ ಜನರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೊನ್ನಾವರ ತಾಲ್ಲೂಕಾ ಆಸ್ಪತ್ರೆಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹಳದೀಪುರ ೨೪, ಸಾಲ್ಕೋಡ ೨೫, ಕಡತೋಕಾ ೧೪, ಸಂಶಿ ೭, ಹೊಸಾಡ ೬, ಮಂಕಿ ೪, ಬಳ್ಕೂರು ೩, ಕರ್ವಾ ೩, ಗೇರಸಪ್ಪಾ ೨ ಹಾಗೂ ಹೊನ್ನಾವರದಲ್ಲಿ ನಗರದಲ್ಲಿ ೧೧ ಸೊಂಕಿತರಿದ್ದು ಶನಿವಾರ ೨೨ ಸೊಂಕಿತರು ಪತ್ತೆಯಾಗಿದ್ದಾರೆ.ಇದರೊಂದಿಗೆ ಸೊಂಕಿತರ ಸಂಖ್ಯೆ ಶತಕದ ಗಡಿ ದಾಟಿದ್ದು ಒಟ್ಟು ೧೨೩ ಸೊಂಕಿತರಾಗಿದ್ದಾರೆ,

ಬೆಂಗಳೂರು ಹಾಗೂ ಬೇರೆ ಊರುಗಳಿಂದ ಬಂದ ನಾಗರೀಕರು ತಾಲ್ಲೂಕಾ ಆಡಳಿತಕ್ಕೆ ಯಾವುದೇ ಮಾಹಿತಿ ನೀಡುತ್ತಿಲ್ಲ. ತಮಷ್ಟಕ್ಕೆ ತಾವೂ ಓಡಾಡುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರದ ಲೋಕಡೌನ್ ಆದೇಶ ಮಾಡಿದ್ದರು ಸೋಂಕಿತರ ಸಂಖ್ಯೆಯಲ್ಲಿ ಎರುವಿಕೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಯಾಕೆಂದರೆ ಹೋಮ ಆಯಸೋಲೇಶನ್ ಆದವರು ಸುಕ್ಷತೆಯ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿರುವುದರಿಂದ ಇಡಿ ಕುಂಟುAಬವೇ ಕರೋನಾ ಸೊಂಕಿಗೆ ತುತ್ತಾಗುತ್ತಿದೆ. ಇದು ವೈದ್ಯರಿಗೆ ತಲೆ ನೋವಾಗಿ ಪರಿಣಮಿಸಿದೆ. ಹೊನ್ನಾವರದಂತಹ ತಾಲ್ಲೂಕು ಪ್ರದೇಶದಲ್ಲಿ ಗ್ರಾಮೀಣ ಭಾಗವೆ ಹೆಚ್ಚಾಗಿದ್ದು ಜನಸಂಖ್ಯೆಗೆ ತಕ್ಕಂತೆ ವೈದ್ಯಕೀಯ ಸೌಲಭ್ಯ ನೀಡುವುದು ಅಸಾಧ್ಯವಾಗಿದೆ, ಆದರಿಂದ ಸೊಂಕಿತರು ಈ ಬಗ್ಗೆ ಹೆಚ್ಚಿನ ಗಮನಹರಿಸಿ ಜನಸಾಮಾನ್ಯರು ಕರೋನಾ ಮಹಾಮಾರಿಗೆ ತುತ್ತಾಗ ಹಾಗೆ ಎಚ್ಚರಿಕೆವಹಿಸಬೇಕಾಗಿದೆ . ಇಲ್ಲದಿದ್ದಲ್ಲಿ ಹೊನ್ನಾವರ ತಾಲ್ಲೂಕ್ಕಿಗೂ ಕೂಡ ಗಂಡಾAತರ ತಪ್ಪಿದ್ದಲ್ಲ ಎಂಬುದು ನಾಗರೀಕರ ಆತಂಕವಾಗಿದೆ.

error: