April 20, 2024

Bhavana Tv

Its Your Channel

ಬನವಾಸಿಯಲ್ಲಿ ತುರ್ತು ಸೇವೆ 100 ರ ಬದಲು 112 ರ ಸೇವೆಗೆ ಚಾಲನೆ

ಬನವಾಸಿ: ಕೇಂದ್ರ ಸರ್ಕಾರದ ಒಂದು ಭಾರತ. ಒಂದು ತುರ್ತು ಕರೆ ಸಂಖ್ಯೆ ಪರಿಕಲ್ಪನೆಯಾಡಿ ದೇಶದ್ಯಾಂತ Emergency Response Support System -112 (ERSS) ಎಂಬ ಯೋಜನೆ ಜಾರಿಗೊಳಿಸಿದೆ

ಜಿಲ್ಲೆಯ ಜನರು ಎಲ್ಲ ರೀತಿಯ ತುರ್ತು ಸೇವೆಗಳಿಗೆ ಇನ್ನು ಮುಂದೆ 100 ಸಂಖ್ಯೆಯ ಬದಲು 112 ಸಂಖ್ಯೆಗೆ ಸಂಪರ್ಕಿಸಿ ಅಗತ್ಯ ಸೇವೆಗಳನ್ನು ಪಡೆಯಬಹುದು ಎಂದು ಬನವಾಸಿ ಪಿ ಎಸ್ ಐ ಹಣಮಂತ ಬಿರಾದಾರ್ ಅವರು ತಿಳಿಸಿದರು

ಕದಂಬ ಸರ್ಕಲ್ ಬಳಿ 112 ವಾಹನ ಚಾಲನೆ ಗೆ ಹಸಿರು ನಿಶಾನೆ ತೋರಿಸುವ ಮೂಲಕ ಸಾರ್ವಜನಿಕರ ಸೇವೆಗೆ ನಿಯೋಜನೆಗೊಳಿಸಲಾಗಿದೆ ಇದು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ

ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ತುರ್ತು ಸೇವೆ ಯ ಸಂಖ್ಯೆಗಳನ್ನು ಈ ಯೋಜನೆಯಡಿ ಸಾರ್ವಜನಿಕರಿಗೆ ಎಲ ರೀತಿಯ ತುರ್ತು ಸೇವೆಗಳನ್ನು ಅತೀ ಶೀಘ್ರದಲ್ಲಿ ಒದಗಿಸುವ ಗುರಿಯೊಂದಿಗೆ ದೇಶದ್ಯಂತ ಏಕರೂಪಡಲ್ಲಿ ಏಕಿಕೃತಗೊಳಿಸಲಾಗಿದೆ ಎಂದರು
ಈ ವಾಹನಗಳನ್ನು ಈ ಹಿಂದೆ 100 ಸಂಖ್ಯೆ ಗೆ ಬರುತಿದ ಕರೆಗಳು ಮತ್ತು ಅಪರಾಧ ನಡೆದ ಸ್ಥಳಗಳ ಆಧಾರದ ಮೇಲೆ ನಿಯೋಜಿಸಲಾಗಿದೆ

ಕೇಂದ್ರ ಸರ್ಕಾರ ಏಕೀಕೃತ ತುರ್ತು ಸಂಖ್ಯೆ -112 ನು ನಿಗದಿಪಡಿಸಿದ್ದು Pablic safety answering point (PASP) ರಾಜ್ಯದ್ಯಂತ ಸಾರ್ವಜನಿಕರಿಂದ ಬರುವ ಫೋನ್ call SMS Email Panic Signal ಮೂಲಕ ಅಗತ್ಯ ಮಾಹಿತಿ ಕಲೆ ಹಾಕಿ ಶೀಘ್ರ ವಾಗಿ ಕಾರ್ಯ ನಿರ್ವಹಿಸ ಲಾಗುವುದು ಎಂದರು ಜಿಲ್ಲೆಯ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯ ಮೂಲಕ ತುರ್ತು ಸೇವೆ ಅಗತ್ಯವಿರುವ ವ್ಯಕ್ತಿಯ ಅತೀ ಹತ್ತಿರ ಲಭ್ಯವಿರುವ ತುರ್ತು ಸೇವಾ ವಾಹನಕ್ಕೆೆಸೂಚನೆ ನೀಡಲಾಗುವುದು
ಅತೀ ವೇಗವಾಗಿ ಸ್ಪಂದಿಸುವ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆ ಗಳನ್ನು ಅಳವಡಿಕೆ ಮಾಡಲಾಗಿದ್ದು 24*7 ಸೇವೆ ಲಭ್ಯವಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಪಿ ಎಸ್ ಐ ಹಣಮಂತ ಬಿರಾದಾರ್ ಎ ಎಸ್ ಐ ಕಾಂಬಳೆ ಪೊಲೀಸ್ ಅಧಿಕಾರಿ ಗಳು ಹಾಗೂ ಸಿಬ್ಬಂದಿಗಳು ಉಪಸಿತ್ತರಿದ್ದರು

ವರದಿ : ನಾಗರಾಜ ಎಸ್ ನಾಯಕ್

error: