April 24, 2024

Bhavana Tv

Its Your Channel

ನಮ್ಮನ್ನು ಕಾಪಾಡಿಕೊಳ್ಳುವುದರ ಜೊತೆಗೆ ಬೇರೆಯವರ ಜೀವದ ರಕ್ಷಣೆಯ ಜವಾಬ್ದಾರಿ ನಮ್ಮದು- ಸಂತೋಷ ನಾಯ್ಕ್

ಭಟ್ಕಳ: ನಾಡಿನ ಮಹಾ ಜನತೆಯಲ್ಲಿ ಮನವಿ, ನಿಮಗೆಲ್ಲಾ ತಿಳಿದಿರುವಂತೆ ಕೊರೋನ ಮಹಾಮಾರಿ ಸೊಂಕಿನ ಮೊದಲನೇ ಅಲೆಯ ತೀವ್ರತೆಗಿಂತ ೨ ನೇ ಅಲೆಯ ತೀವ್ರತೆಯು ತೀರಾ ಗಂಭೀರ ಹಾಗೂ
ಅಪಾಯಕಾರಿಯಾಗಿದೆ.

ಕೋವಿಡ್ ಸೊಂಕಿನಿAದ ಸಾವು ನೋವುಗಳೂ ಹೆಚ್ಚಾಗಿವೆ. ಇದಕ್ಕೆ ಕಾರಣ ಜನರ ಬೇಜವಾಬ್ದಾರಿತನ. ಹಾಗಾಗಿ ಇದು ಆಡಳಿತ ವರ್ಗದವರನ್ನ, ಸರಕಾರದವರನ್ನು ಮತ್ತು ಪಕ್ಷದ ಭಿನ್ನತೆಯಿಂದ ಒಬ್ಬರಿಗೊಬ್ಬರು ದೂರುತ್ತಾ ಕೂಳುವ ಸಮಯವಲ್ಲ. ಬದಲಾಗಿ ನಮ್ಮ ನಮ್ಮ ವಯಕ್ತಿಕ ಹಾಗೂ ಸಾಮಾಜಿಕ ಜವಾಬ್ದಾರಿ, ಕರ್ತವ್ಯಪ್ರಜ್ಞೆಯಿಂದ ಕಾರ್ಯಪ್ರವರ್ತರಾಗುವ ಸಮಯ ಭಟ್ಕಳ ತಾಲೂಕಿನಲ್ಲಿ ವಿಶೇಷವಾಗಿ ಬೆಂಗಳೂರು, ಮುಂಬಯಿ, ಪುಣೆ, ಹಾಗೂ ಇತರ ನಗರದಿಂದ ಬಂದವರಿದಲೇ ಈ ಬಾರಿಯ ಕೊರೊನ ಸೋಂಕು ಹರಡಿದೆ.

ಹಾಗಾಗಿ ಮಹಾ ಜನಗಳೇ ತಮ್ಮಲ್ಲಿ ವಿನಂತಿ ಏನೆಂದರೆ, ಯಾರಾದರೂ ದೂರದ ಊರುಗಳಿಂದ ಬರುವುದಾದಲ್ಲಿ ದಯವಿಟ್ಟು ಕೊರೊನ ಪರೀಕ್ಷೆಗೆ ಒಳಪಟ್ಟೆ ಬನ್ನಿ. ಊರಿಗೆ ಬಂದ ನಂತರ ಜಾಗ್ರತರಾಗಿ ಕನಿಷ್ಠ ೧೦ ದಿನಗಳ ಕಾಲ ಹೋಂ ಕ್ವಾರಂಟೈನ್ ದಲ್ಲಿದ್ದು ನಿಮ್ಮ ಮನೆಯವರಿಂದ, ಹಾಗೂ ಇತರರಿಂದ ದೂರವಿದ್ದು ಜಾಗ್ರತೆ ವಹಿಸಿ ನಿಮ್ಮನ್ನ ಹಾಗೂ ನಿಮ್ಮ ಕುಟುಂಬದವರನ್ನ ಕಾಪಾಡಿಕೊಳ್ಳಿ.

ಯಾಕೆಂದರೆ ನಾವು ನಮ್ಮನ್ನು ಕಾಪಾಡಿಕೊಳ್ಳುವುದರ ಜೊತೆಗೆ ಬೇರೆಯವರ ಜೀವದ ರಕ್ಷಣೆಯ ಜವಾಬ್ದಾರಿಯೂ ನಮ್ಮ ಮೇಲಿದೆ. ಹಾಗಾಗಿ ಯಾವುದೇ ಜನರಿರಲಿ, ಸಂಘ ಸಂಸ್ಥೆಗಳಿರಲಿ ಅವರವರ ಭಾಗದಲ್ಲಿ ಯಾವುದೇ ಒಬ್ಬ ವ್ಯಕ್ತಿ ಬೇರೆ ಬೇರೆ ಊರುಗಳಾದ ಬೆಂಗಳೂರು, ಮುಂಬಯಿ ಇತರ ಕೊರೊನ ಪೀಡಿತ ಪ್ರದೇಶಗಳಿಂದ ಬಂದಲ್ಲಿ ತಕ್ಷಣ ಅಂತವರನ್ನು ಸಂಪರ್ಕಿಸಿ ( ಅವರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ) ಅವ್ರಿಗೆ ಕೊರೊನ ಪರೀಕ್ಷೆಗೋಳಪಾಡುವಂತೆ ಸಮಾಜಯಿಸಿ ತಿಳಿಸಿ ಕೆಲವು ದಿನಗಳವರೆಗೆ ಮನೆಯಲ್ಲಿಯೇ ಇರುವಂತೆ ಮಾಡಬೇಕಾಗಿ ವಿನಂತಿ.

ತಾಲೂಕಿನ ಆಡಳಿತ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಅತೀ ಉತ್ತಮವಾಗಿ ತಮ್ಮ ತಮ್ಮ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಆದಾಗಿಯೂ ತಾಲೂಕು ಆಡಳಿತವು ಪರ ಊರುಗಳಿಂದ ಬರುವವರ ಕುರಿತು ಮಾಹಿತಿ ಪಡೆದು ಅಂತವರಿಗೆ ಜಾಗ್ರತೆ ಹೇಳಬೇಕಾಗಿರುವುದು ತೀರಾ ಅವಶ್ಯವಿದೆ.

ಸಂತೋಷ ನಾಯ್ಕ್
ಅಧ್ಯಕ್ಷರು ಭಟ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ.

error: