April 25, 2024

Bhavana Tv

Its Your Channel

ಭಟ್ಕಳದ ಸರ್ಕಾರಿ ಅಸ್ಪತ್ರೆಗೆ ಭೇಟಿ ನೀಡಿದ ಜಿ.ಪಂ ಸಿ.ಇ.ಒ ಪ್ರಿಯಾಂಗ ಎಂ

ಭಟ್ಕಳ: ಇತ್ತೀಚಿಗೆ ರೋಗಿಗಳೆ ಬಂದು ತನಗೆ ಆಕ್ಷಿಜನ್ ಬೆಡ್ ನೀಡಿ, ತನಗೆ ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಪೀಡಿಸುತ್ತಾರೆ. ದಯವಿಟ್ಟು ಇಂತಹ ವರ್ತನೆ ಮಾಡಬೇಡಿ. ಇದರಿಂದ ನಿಜವಾಗಿ ಅವಶ್ಯಕತೆ ಇದ್ದವರಿಗೆ ತೊಂದರೆಯಾಗುತ್ತದೆ ಎಂದು ಜಿ.ಪಂ ಸಿ.ಇ.ಒ ಪ್ರಿಯಾಂಗ ಎಂ ಹೇಳಿದರು.

ಗುರುವಾರ ಭಟ್ಕಳದ ಸರ್ಕಾರಿ ಅಸ್ಪತ್ರೆಗೆ ಭೇಟಿ ನೀಡಿ ಅಮ್ಲಜನಕ ಸಂಗ್ರಹ, ಸೊಂಕೀತರ ಚಿಕಿತ್ಸೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಸಾವಿರದ ಗಡಿದಾಟುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲಾ. ಮುಂದಿನ ಕ್ರಮಕ್ಕೆ ಜಿಲ್ಲಾಡಳಿತ, ತಾಲೂಕಾಡಳಿತ ಅಣಿಯಾಗುತ್ತಿದ್ದು ಯಾರು ಭಯಬೀಳುವ ಅವಶ್ಯಕತೆ ಇಲ್ಲ. ಎಲ್ಲರೂ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಪಡೆಯಲು ಬೇಡಿಕೆ ಇಡುತ್ತಿರುವದು ಗಮನಕ್ಕೆ ಬಂದಿದೆ. ಯಾರು ಎಲ್ಲಿ ಇರಬೇಕು? ಯಾರಿಗೆ ಎಷ್ಟು ಆಮ್ಲಜನಕ, ಚಿಕಿತ್ಸೆ ನೀಡಬೇಕು ಎಂದು ವೈದ್ಯರು ನಿರ್ಣಯಿಸುತ್ತಾರೆ. ಅವರ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದರು.
ಮುAದಿನ ದಿನಗಳಲ್ಲಿ ಜಿಲ್ಲಾಡಳಿತ ಸೊಂಕಿತರಿಗೆ ಅವಶ್ಯವಿರುವ ಬೆಡ್, ಅಮ್ಲಜನಿಕ ಹಾಗೂ ಇನ್ನಿತರ ಸೌಲಭ್ಯಗಳ ಕೊರತೆಯಾಗದೇ ಹಾಗೆ ವ್ಯವಸ್ಥೆ ಮಾಡಿದೆ. ಖಾಸಗಿ ಅಸ್ಪತ್ರೆಗಳು ಕೋವಿಡ್ ಲಕ್ಷಣವುಳ್ಳ ರೋಗಿಗಳ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಸಂಗತಿ ತಿಳಿದು ಬಂದಿದ್ದು ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ಅಧಿಕಾರಿಗಳ ಜೊತೆ ಸಭೆ ನಡೆಸಿ ತಾಲೂಕಿನ ಕೋವಿಡ ಪ್ರಕರಣಗಳ ಬಗ್ಹೆ ವಿವರ ಪಡೆದಕೊಂಡಿದ್ದೇವೆ.ಮುAದಿನದಿನಗಳಲ್ಲಿ ತಾಲೂಕಿಗೆ ಅವಶ್ಯವಿರುವ ಹೆಚ್ಚುವರಿ ಬೆಡ್ ಗಳು ಹಾಗೂ ಅಮ್ಲಜನಕದ ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಜನಸಾಮಾನ್ಯರು ಕೋವಿಡ್ ೨ನೇ ಅಲೆ ಜಾಗೃತರಾಗಿರಬೇಕು.ಅನಾವಶ್ಯಕವಾಗಿ ಯಾರು ಮನೆಯಿಂದ ಹೋರಗೆ ಬರಬಾರದು. ಕೋವಿಡ ನಿಯಂತ್ರಣಕ್ಕೆ ಅಧಿಕಾರಿಗಳ ಪ್ರಯತ್ನಕ್ಕಿಂತ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು. ಭಟ್ಕಳ ಸರ್ಕಾರಿ ಅಸ್ಪತ್ರೆ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಾಅಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸವಿತಾ ಕಾಮತ, ಪ್ರಭಾರೆ ಟಿಎಚ್‌ಒ ಡಾ ಬಾಲಚಂದ್ರ ಮೇಸ್ತ, ತಾ.ಪಂ ಆಡಳಿತಾಧಿಕಾರಿ ರವೀಂದ್ರ ಬಾಡಕರ, ತಾ.ಪಂ. ಸಿಇಓ ಪ್ರಭಾಕರ ಚಿಕ್ಕಣಮನೆ ಇದ್ದರು.

error: