April 25, 2024

Bhavana Tv

Its Your Channel

ರಾಜ್ಯ ಸರ್ಕಾರದಿಂದ ನ್ಯಾಯಾಂಗ ನಿಂದನೆ, ರವೀಂದ್ರ ನಾಯ್ಕರಿಂದ ಆರೋಪ

ಶಿರಸಿ: ರಾಜ್ಯ ಸರಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಅವರು ಸುಪ್ರೀಂ ಕೋರ್ಟನಲ್ಲಿ ಸಲ್ಲಿಸಿದ ಅಫೀಡಾವಿಟ್‌ನಂತೆ ೧೮ ತಿಂಗಳಿನಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿನ ಅರ್ಜಿ ವಿಲೇವಾರಿ ಮಾಡಲು ವಿಫಲವಾಗಿ, ಸುಪ್ರೀಂ ಕೋರ್ಟಿನ ನಿರ್ದೇಶನ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗಳು ಸುಪ್ರೀಂ ಕೋರ್ಟಿನ ಆದೇಶ ಅಮಾನ್ಯ ಮಾಡಿರುವುದರಿಂದ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆರೋಪಿಸಿದ್ದಾರೆ. ಅರಣ್ಯ ಹಕ್ಕು ಕಾಯಿದೆಯಲ್ಲಿ ತೀರಸ್ಕಾರವಾಗಿರುವ ಅತಿಕ್ರಮಣದಾರರನ್ನ ಹೋರಹಾಕಬೇಕೆಂಬ ಪರಿಹಾರ ಕೇಳಿ ಸುಪ್ರೀಂ ಕೋರ್ಟ ಡೆಲ್ಲಿಯಲ್ಲಿ ಪರಿಸರ ವಾದಿಗಳು ೨೦೦೮ ರಲ್ಲಿ ಸಲ್ಲಿಸಿದ ಸಾರ್ವಜನಿಕ
ಹಿತಾಸಕ್ತಿಯ ಅರ್ಜಿಗೆ ಸಂಬAಧಿಸಿ ಮಧ್ಯಂತರ ತಡೆ ಆಜ್ಞೆಗೆ ನೀಡಿದ ನಿರ್ಧೇಶನದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗಳು ಜುಲ್ಯೆ ೯, ೨೦೧೯ ರಂದು ಸುಪ್ರೀಂ ಕೊರ್ಟಿಗೆ ಅರ್ಜಿಗಳ ವಿಲೇವಾರಿಗೆ ೧೮ ತಿಂಗಳುಗಳ ಕಾಲಾವಕಾಶ ಕೋರಿ ಅಫಿಡಾವಿಟ್ ಸಲ್ಲಿಸಿದ್ದರು. ಸರಕಾರವು ತಾವೇ ಸಲ್ಲಿಸಿದ ಅಫಿಡಾವಿಟ್‌ನಂತೆ ಸುಪ್ರೀಂ ಕೋರ್ಟಿನ ನಿರ್ದೇಶನ ಮೀರಿರುವುದರಿಂದ ನ್ಯಾಯಾಲಯ ನಿಂದನೆಗೆ ಕಾರಣವಾಗುವುದೆಂದು ಅವರು ವಿಶ್ಲೇಷಿಸುತ್ತಾ, ರಾಜ್ಯಾದ್ಯಂತ ಇಂದಿನವರೆಗೆ ಶೇ ೫ ರಷ್ಟು ಅರ್ಜಿಗಳು ವಿಲೇವಾರಿ ಆಗದಿರುವುದಿಲ್ಲವೆಂದು ಈ ಸಂದರ್ಭದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರು ಸರಕಾರದ ಕ್ರಮವನ್ನು ಟೀಕಿಸಿದ್ದಾರೆ. ಅರ್ಜಿಗಳನ್ನು ಪುನರ್ ಪರಿಶೀಲಿಸುವಾಗ ತೀರಸ್ಕರಿಸಿರುವ ಎಲ್ಲಾ ಅರ್ಜಿಗಳನ್ನು ತೀರಸ್ಕರಿಸಿದ
ಸಮಿತಿಯೇ ಪುನರ್ ಪರಿಶೀಲನೆ ಮಾಡತಕ್ಕದ್ದು, ಅರ್ಜಿದಾರರಿಗೆ ಸಾಕ್ಷö್ಯಗಳ ಬಗ್ಗೆ ಮಾರ್ಗದರ್ಶನ ಮತ್ತು ಅವಹಾಲು ಸಲ್ಲಿಸಲು ಸಾಕಷ್ಟು ಅವಕಾಶ ಕಲ್ಪಿಸುವುದು, ತೀರಸ್ಕರಿಸಲ್ಪಟ್ಟ ಅರ್ಜಿಗಳನ್ನ ಪುನಃ ನೈಸರ್ಗಿಕ ನ್ಯಾಯ ನಿಯಮಗಳನ್ವಯ ಅಂತಹ ಅರ್ಜಿಗಳನ್ನು ಪುನರ್ ಪರಿಶೀಲಿಸುವುದು, ಮನೆ ನಿರ್ಮಿಸಿಕೊಂಡು ವಾಸವಿರುವ ಪ್ರಕರಣಗಳಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಪರಿಶೀಲಿಸುವುದು, ಮುಂತಾದ ನಿಯಮಗಳನ್ನು
ನಿರ್ಧರಿಸಲ್ಪಟ್ಟು ಸದ್ರಿ ನಿಯಮಾವಳಿಯ ಅಡಿಯಲ್ಲಿಯೇ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಅರಣ್ಯ ಹಕ್ಕು ಸಮಿತಿಗಳಿಗೆ ಕೇಂದ್ರ ಬುಡಕಟ್ಟು ಮಂತ್ರಾಲಯ ನಿರ್ಧೇಶನ ನೀಡಿತ್ತು ಎಂಬುದನ್ನು ಇಲಾಖೆಯ ಪತ್ರದ ದಾಖಲೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಆದರೆ, ರಾಜ್ಯಸರಕಾರವು ಸುಪ್ರೀಂ ಕೋರ್ಟಿನ ನಿರ್ದೇಶನ ಪಾಲಿಸದೇ ಇರುವುದರಿಂದ ನ್ಯಾಯಾಂಗ ನಿಂದನೆ ಮಾಡಿದಂತೆ ಆಗಿದೆ ಎಂದು ಅವರು ತಿಳಿಸಿದ್ದಾರೆ..

ರಾಜ್ಯ ಸರಕಾರದ ಅಂಕೆ – ಸಂಖ್ಯೆ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳು ೧೬,೫೭೯ ಹಾಗೂ ಪುನರ್ ಪರಿಶೀಲಿಸಬೇಕಾದ ಅರ್ಜಿಗಳ ಸಂಖ್ಯೆ ೬೭,೩೦೮ – ಹೀಗೆ ಒಟ್ಟು ೮೩,೮೮೭ ಅರ್ಜಿಗಳು ಸರ್ವೋಚ್ಛ ನ್ಯಾಯಾಲಯದ ನಿರ್ಧೇಶನದಂತೆ ವಿಚಾರಣೆಗೆ ಬಾಕಿ ಉಳಿದಿದೆ. ಅಲ್ಲದೇ, ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ೧೫ ವರ್ಷ, ನಿಯಮಾವಳಿ ೧೩ ವರ್ಷವಾದರೂ ಜಿಲ್ಲೆಯಲ್ಲಿ ಶೇ. ೫ ರಷ್ಟು ಪ್ರಗತಿ ಆಗದಿರುವದು ವಿಷಾದಕರ. ಸುಪ್ರೀಂ ಕೋರ್ಟ ರಾಜ್ಯ ಸರಕಾರ ಜನವರಿ ೨೦೨೧ ರ ಒಳಗೆ ಅರ್ಜಿ ವಿಲೇವಾರಿ ಮಾಡುತ್ತೇವೆಂದು ಅಫಿಡಾವಿಟ್ ಸಲ್ಲಿಸಿ, ಈಗ ಮಾತು ತಪ್ಪಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.


error: