April 25, 2024

Bhavana Tv

Its Your Channel

ಕೋವಿಡ್ ೧೯ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರನ್ನು ಭಾದಿಸುವ ಸಂಕೆ ಇದ್ದು ಈ ಕುರಿತು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವದು ಅಗತ್ಯವಾಗಿದೆ-ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್

ಭಟ್ಕಳ: ಅವರು ಭಟ್ಕಳದಲ್ಲಿ ಶನಿವಾರ ನಡೆದ ಅಧಿಕಾರಿಗಳು, ಭಟ್ಕಳದ ಮುಖಂಡರು ಜೊತೆ ಸರಣಿ ಸಭೆ ನಡೆಸಿ ಮಾತನಾಡಿದರು. ತಾಲೂಕಿನಲ್ಲಿ ಸದ್ಯದ ಪರಿಸ್ಥಿತಿ ಉತ್ತಮವಾಗಿದೆ. ಆದರೂ ಮುಂದೆ ಮಹಾಮಾರಿ ಹೇಗೆ ಅಪ್ಪಳಿಸಲಿದೆ ಎನ್ನುವದು ತಿಳಿದಿಲ್ಲ. ಕೋವೀಡ್ ಯಾವುದೆ ಪರಿಸ್ಥಿತಿ ಎದುರಿಸಲು, ಜಿಲ್ಲಾಡಳಿತ, ತಾಲೂಕಾಡಳಿತ ಸನ್ನಧ್ಧವಾಗಿದೆ. ಔಷಧ ವಿತರಣೆ, ಆಮ್ಲಜನಕ ಪೊರೈಕೆ ಅಥವಾ ಯಾವುದೆ ಮೂಲಭೂತ ಅವಶ್ಯಕತೆಗಳಿಗೆ ಕೊರತೆಯಾಗದಂತೆ ಈಗಾಗಲೆ ಹಿರಿಯ ಅಧಿಕರಿಗಳೊಡನೆ ಚರ್ಚೆ ನಡೆಸಲಾಗಿದೆ.


ಕುಮಟಾ, ಹೊನ್ನಾವರ, ಭಟ್ಕಳದ ಬಹುತೇಕ ಮಂದಿ ವೈದ್ಯಕೀಯ ಸೌಲಭ್ಯಕ್ಕಾಗಿ ಪಕ್ಕದ ಜಿಲ್ಲೆಯನ್ನು ಆಶ್ರಯಿಸಿದ್ದಾರೆ. ಆದರೆ ಪರಿಸ್ಥಿತಿ ಈಗ ಮುಂಚಿನ ಹಾಗೆ ಇಲ್ಲ. ಸಾದ್ಯವಾದಷ್ಟು ಅನಗತ್ಯ ತಿರುಗಾಟ, ಸಣ್ಣಪುಟ್ಟ ವೈದ್ಯಕೀಯ ತಪಾಸಣೆ, ಜಿಲ್ಲೆಯ ಆಸ್ಪತ್ರೆಯಲ್ಲಿ ಲಭ್ಯವಿರುವಂತ ಚಿಕಿತ್ಸೆಗಳನ್ನು ಇಲ್ಲಿಯೆ ಪಡೆಯಬೇಕು. ತೀರಾ ಅನಿವಾರ್ಯವಾದರೆ ಮಾತ್ರ ಅಲ್ಲಿಗೆ ತೆರಳಿ. ದಿನಗಳು ಕಳೆದಂತೆ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದು ಪರಸ್ಪರ ಅಂತರವನ್ನು ಕಾಪಾಡಲು ಸಾರ್ವಜನಿಕರು ಮುಂದೆ ಬರಬೇಕು. ಪೊಲೀಸರು, ಪುರಸಭೆ, ಪಟ್ಟಣ ಪಂಚಾಯಿತಿ, ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ ಎಂದು ನಿಯಮ ಪಾಲಿಸುತ್ತಾರೆ. ಹೀಗೆ ಮಾಡಿದರೆ ಇದರಿಂದ ಹಾನಿಯಾಗುವದು, ಅಥವಾ ಅನುಭವಿಸುವದು ನೀವೆ ಹೀಗೆ ಆಗದಂತೆ ಎಚ್ಚರವಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಉತ್ತರಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ಮಾತನಾಡಿ ಸರ್ಕಾರ ಹೊಸ ಲಾಕ್‌ಡೌನ್ ನಿಯಮಗಳನ್ನು ಬಿಡುಗಡೆಗೊಳಿಸಿದೆ. ಕೆಲವೊಂದು ನಿಯಮಗಳನ್ನು ಬಿಗಿಯಾಗಿಸಿದೆ. ಸಾರ್ವಜನಿಕರು ಸರ್ಕಾರ ನಿಯಮಗಳನ್ನು ಪಾಲಿಸದರೆ ಸದಸ್ಯದಲ್ಲೆ ಲಾಕ್ ಡೌನ್ ಅಂತ್ಯಗೊಳ್ಳಲಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ದಿನಗಳು ಬರಬಹುದು, ಸರ್ಕಾರವೂ ಜನರಿಗೆ ತೊಂದರೆಯಾಗಬಾರದು ಎಂದು ಕೊಂಚಕೊಚವಾಗಿ ನಿಯಮಗಳನ್ನು ಬಿಗಿಗೊಳಿಸುತ್ತಿದೆ ದಯವಿಟ್ಟು ಪಾಲಿಸಿ ಎಂದರು. ಈ ಸಂದರ್ಬದಲ್ಲಿ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್, ಡಿವೈಎಸ್‌ಪಿ ಬೆಳ್ಳಿಯಪ್ಪ, ತಹಸೀಲ್ದಾರ ರವಿಚಂದ್ರ ಎಸ್, ಸಿಪಿಐ ದಿವಾಕರ ಎಂ, ಟಿಎಚ್‌ಒ ಬಾಲಕೃಷ್ಣ ಮೇಸ್ತ ಸೇರಿ ಇತರ ಅಧಿಕಾರಿಗಳು ಇದ್ದರು.

error: