April 25, 2024

Bhavana Tv

Its Your Channel

ಜಿಲ್ಲಾಧಿಕಾರಿ ಮುಲ್ಲೆö ಮುಗಿಲನ್ ಭಟ್ಕಳ ತಾಲೂಕಾಸ್ಪತ್ರೆಗೆ ಬೇಟಿ

ಭಟ್ಕಳ: ಕೋವಿಡ ರೋಗಿಗಳ ಜೊತೆಗೆ ನಾನ್ ಕೋವಿಡ್ ರೋಗಿಗಳು ಆಸ್ಪತ್ರೆಗೆ ಬಂದರೆ ಯಾವ ಕ್ರಮ ಕೈಗೊಂಡಿದ್ದಿರಿ, ಪೂರಕ ವ್ಯವಸ್ಥೆ ಹೇಗೆ ಮಾಡಿದ್ದಿರಿ ಎಂದು ಜಿಲ್ಲಾಧಿಕಾರಿ ಮುಲ್ಲೆö ಮುಗಿಲನ್ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕರಿ ಡಾ. ಸವಿತಾ ಕಾಮತ ಅವರಿಗೆ ವಿಚಾರಿಸಿದರು.


ಅವರು ಶನಿವಾರ ಭಟ್ಕಳ ತಾಲೂಕಾಸ್ಪತ್ರೆಗೆ ಬೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರೀಶೀಲನೆ ನಡೆಸಿ ಮಾತನಾಡಿದರು. ಸಂಪೂರ್ಣ ಸರ್ಕಾರಿ ಆಸ್ಪತ್ರೆಯನ್ನು ಸುತ್ತು ಹೊಡೆದ ಅವರು ಕೆಲವೊಂದು ಬದಲಾವಣೆ ಮಾಡುವಂತೆ ಸೂಚಿಸಿದರು. ಮೇಲ್ ವಾರ್ಡನ್ನು ಸಂಪೂರ್ಣ ಬಂದ್ ಮಾಡಿ ಅದನ್ನು ಕೋವಿಡ್ ವಾರ್ಡನ್ನಾಗಿ ಪರಿವರ್ತಿಸಬೇಕು. ತುರ್ತು ಸೇವೆ ಅಗತ್ಯವಿದ್ದವರಿಗೆ, ನಿಯಮಿತ ತಪಾಸಣೆಗೆ ಬಂದವರಿಗೆ ಕಲ್ಪಿಸಲಾದ ಅನುಕೂಲ, ಆಮ್ಲಜನಕ ಶೇಖರಣೆ, ನಾನ್ ಕೋವಿಡ್ ರೋಗಿಗಳ ತೊಂದರೆಯಾಗದAತೆ ಕೈಗೊಂಡ ಕ್ರಮ, ಒಪಿಡಿ ಸೇರಿ ಆಸ್ಪತ್ರೆಯಲ್ಲಿ ಯಾವುದಾದರೂ ಕುಂದುಕೊರತೆಗಳು ಇದೆಯೆ ಎಂದು ಮಾಹಿತಿ ಪಡೆದರು.
ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ ಕರೊನಾ ಎರಡನೆ ಅಲೆ ಜನರಲ್ಲಿ ಭೀತಿಯ ಅಲೆ ಸೃಷ್ಟಿಸಿದ್ದು ಜನರು ಸ್ವಯಂ ಪ್ರೇರಿತರಾಗಿ ತಮ್ಮನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಅವರಿಗೆ ನಿಜವಾಗಿ ಅವಶ್ಯಕತೆ ಇದೆ ಎಂದಾದರೆ ತಾವು ಅವರನ್ನು ದಾಖಲು ಮಾಡಿಕೊಳ್ಳುತ್ತೇವೆ. ಆದರೆ ಭೀತಿಯ ಕಾರಣದಿಂದ ಫಲ್ಸ್ ರೇಟ್ ಸರಿಯಾಗಿದ್ದರು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಿ ಎಂದು ಒತ್ತಾಯಿಸುತ್ತಾರೆ. ಅಂತವರಿಗೆ ಮುರಾರ್ಜಿ ಶಾಲೆಯಲ್ಲಿ ಬೆಡ್‌ಗಳ ಅವಶ್ಯಕತೆ ಕಲ್ಪಿಸಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಭಟ್ಕಳ ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಬದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ತಾ.ಪಂ ಇ.ಒ ಪ್ರಭಾಕರ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ಟಿ. ದೇವರಾಜು, ಜಾಲಿ ಪ.ಪಂ ಮುಖ್ಯಾಧಿಕಾರಿ ಅಜೆಯ ಭಂಡಾರಕರ, ಪಿಎಸ್‌ಐ ಸುಮಾ ಆಚಾರ್ಯ, ಪಿಎಸ್‌ಐ ಎಚ್ ಕುಡಗಂಟಿ ಇತರರು ಇದ್ದರು.

error: