June 22, 2021

Bhavana Tv

Its Your Channel

ರಸ್ತೆಯ ಅನಾವಶ್ಯಕವಾಗಿ ಓಡಾಟಮಾಡಿದವರಿಗೆ ಪೋಲೀಸರಿಂದ ದಂಡದ ಉಪಚಾರ ಹಾಗೂ ಕರೋನಾ ಮುಂಜಾಗ್ರತೆಯ ಪಾಠ.

ಹೊನ್ನಾವರ : ಜಿಲ್ಲೆಯಾದ್ಯಂತ ಕರೋನಾ ಮಹಾಮಾರಿ ಅಬ್ಬರ ಹೆಚ್ಚಾಗುತ್ತಿದಚದರೂ ಯಾವುದನ್ನೂ ಗಂಭೀರವಾಗಿ ಪರಿಗಣಿಸದೆ ರಸ್ತೆಯ ಮೇಲೇ ಓಡಾಡುತ್ತಿದ್ದ ತಾಲ್ಲೂಕಿನಾದ್ಯಂತ 93 ಬೈಕ್ ಸವಾರರಿಗೆ ಪೋಲೀಸರು ದಂಡ ಹಾಕಿ ಕರೋನಾ ಮುಜಾಗ್ರತೆಯ ಪಾಠ ಮಾಡಿದ್ದಾರೆ. ಮತ್ತೆ ಅನಾವಶ್ಯಕವಾಗಿ ರಸ್ತೆಯ ಮೇಲೆ ಓಡಾಡಿದರೆ ವಾಹನಗಳನ್ನು ಸೀಸ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.


ನಿನ್ನೆ ಸರ್ಕಾರದಿಂದ ಮೇ 10ರಿಂದ ಕಠಿಣ ನಿಯಮಗಳ ಲಾಕ ಡೌನ್ ಕುರಿತು ಘೋಷಣೆ ಮಾಡಿದ್ದರು ಸಾರ್ವಜನಿಕರು ಬೆಳಿಗ್ಗೆ 10ಗಂಟೆಯ ನಂತರವು ರಸ್ತೆಯ ಮೇಲೆ ಓಡಾಟ ನಡೆಸಿದ್ದರು. ಆದ್ದರಿಂದ ಪೋಲಿಸರು ಎಲ್ಲಾ ಬೈಕುಗಳನ್ನು ಪೋಲಿಸ್ ಗ್ರೌಂಡಿಗೆ ತೆಗೆದುಕೊಂಡು ಸುಮಾರು ಅರ್ಧಗಂಟೆಯವರೆಗೆ ನಿಲ್ಲಿಸಿಡಲಾಗಿತ್ತು. ಆನಂತರ ದಂಡ ಹಾಕಿ ಕಳಿಸಿಕೊಡಲಾಗಿದೆ.

error: