June 22, 2021

Bhavana Tv

Its Your Channel

ಕೋವಿಡ್ ಸೋಂಕಿತರ ಉಚಿತ ಸೇವೆಗಾಗಿ ಅಂಬುಲೇನ್ಸ್ ನೀಡಿದ ಶಾಸಕ ಸುನೀಲ್ ನಾಯ್ಕ

ಹೊನ್ನಾವರ : ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊನ್ನಾವರ ತಾಲ್ಲೂಕಿನ ಜನತೆಯ ಉಚಿತ ಸೇವೆಗಾಗಿ ಆಕ್ಸಿಜನ್ ವ್ಯವಸ್ಥೆ ಇರುವ ಅಂಬುಲೆನ್ಸ್ ಶಾಸಕ ಸುನೀಲ್ ನಾಯ್ಕ
ನೀಡಿದ್ದಾರೆ. ರವಿವಾರ ಬೆಳಿಗ್ಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆ ಯಲ್ಲಿ ಸಾಂಕೇತಿಕವಾಗಿ ಸೇವೆಗಾಗಿ ಉದ್ಘಾಟಿಸಿದ ಅವರು ನಿತ್ಯವು ಕೋವಿಡ್ ಸೋಂಕಿತರು ವಾಹನ ವ್ಯವಸ್ಥೆಗಾಗಿ ತನ್ನನ್ನು ಸಂಪರ್ಕಿಸುತ್ತಲೇ ಇರುತ್ತಾರೆ. ಆದ್ದರಿಂದ ಅಂತವರ ಅನುಕೂಲತೆಗಾಗಿ ಉಚಿತವಾಗಿ ಅಂಬುಲೇನ್ಸ್ ನೀಡಿದ್ದೇನೆ ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಕೋವಿಡ್ ಎರಡನೇ ಅಲೆಯನ್ನು ನಾವೆಲ್ಲರೂ ಒಟ್ಟಾಗಿ ಹಿಮ್ಮೆಟಿಸಬೇಕಾಗಿದೆ. ಕಡ್ಡಾಯವಾಗಿ ಮಾಸ್ಕ ಧರಸಿ,ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದರು.

ಹೊನ್ನಾವರ ಬಿಜೆಪಿ ಮಂಡಲ ಅಧ್ಯಕ್ಷ ರಾಜು ಭಂಡಾರಿಯವರು ಮಾತನಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಶಾಸಕರು ಅಂಬುಲೇನ್ಸ್ ನೀಡಿದ್ದಾರೆ ಅದರ ಸದುಪಯೋಗ ಪಡೆಯಿರಿ ಎಂದರು.ಈ ಸಂದರ್ಬದಲ್ಲಿ ಆಸ್ಪತ್ರೆಯ ಸರ್ಜನ್ ಡಾ ಮಂಜುನಾಥ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಪ್ರಕಾಶ ನಾಯ್ಕ, ಡಾ ರಾಜೇಶ ಕಿಣಿ ಬಿಜೆಪಿ ಉಪಾಧ್ಯಕ್ಷ ಬಿ.ಟಿ ನಾಯ್ಕ ಬಳ್ಕೂರ ಮುಂತಾದವರು ಉಪಸ್ಥಿತರಿದ್ದರು.
ವರದಿ ; ವೆಂಕಟೇಶ ಮೇಸ್ತ, ಹೊನ್ನಾವರ

error: