April 24, 2024

Bhavana Tv

Its Your Channel

ಹೊನ್ನಾವರದಲ್ಲಿ ಆತಂಕ ಮೂಡಿಸಿದ ಸೋಂಕಿತರ ಸಂಖ್ಯೆ, ಸೋಮವಾರ ನಾಲ್ಕು ಸಾವು, ೨೦೪ ಸೋಂಕಿತರು ಪತ್ತೆ

ಹೊನ್ನಾವರ: ತಾಲ್ಲೂಕಿನಾದ್ಯಂತ ಸೋಮವಾರ ೨೦೪ ಕರೋನಾ ಸೋಂಕಿತರು ಪತ್ತೆಯಾಗಿದ್ದು ನಾಲ್ಕು ಸಾವು ದಾಖಲಾಗಿದೆ. ಕರೋನಾ ಮಹಾಮಾರಿಯ ಎರಡನೇ ಅಲೆಯಲ್ಲಿ ಸೋಂಕಿತರ ಗರಿಷ್ಠ ಸಂಖ್ಯೆ ಇದಾಗಿದ್ದು ಸಕ್ರಿಯ ಸೋಂಕಿತರ ಸಂಖ್ಯೆ ೫೨೪ಕ್ಕೇರಿದೆ.
ಸಾಮಾನ್ಯವಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೊಸ ಸೋಂಕಿತರು ಪತ್ತೆಯಾಗಿದ್ದು ಸಾಲಕೋಡ ಮೂಲದ ವ್ಯಕ್ತಿ ಯೋರ್ವರು ಕುಮಟಾ ಹೈಟೆಕ್ ಆಸ್ಪತ್ರೆಯಲ್ಲಿ ಸಾವನ್ನೊಪ್ಪಿದ್ದು, ಕರ್ಕಿ ಮೂಲದ ೪೨ ವರ್ಷದ ಮಹಿಳೆಯೊರ್ವಳು ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಳಾಗಿದ್ದಾಳೆ. ಮಂಗಳೂರು ಫಾದರ ಮುಲ್ಲಾ ಹಾಗೂ ಎನ್ನಪೋಯ್ ಆಸ್ಪತ್ರೆ ಯಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.


ತಾಲೂಕಾ ಆರೋಗ್ಯಾಧಿಕಾರಿ ಉಷಾ ಹಾಸ್ಯಗಾರ ಮಾತನಾಡಿ ಕೋವಿಡ್ ೨ ಅಲೆ ಮಾರ್ಚ ಕೊನೆವಾರದಿಂದ ನಮ್ಮ ತಾಲ್ಲೂಕಿನಲ್ಲಿ ಕಾಣಿಸಿಕೋಳ್ಳುತ್ತಾ ಇದೆ. ಈಗ ನಿರಂತರವಾಗಿ ಕೇಸ್ ಹೆಚ್ಚಾಗುತ್ತಿದೆ.
ವ್ಯಾಕ್ಸಿನೇಷನ್ ೨ ರೀತಿ ಇದೆ ಒಂದು ನಾಳೆಯಿಂದ ೧೮-೪೪ ವರ್ಷದವರೆಗೂ ವ್ಯಾಕ್ಸಿನೇಷನ್ ಕೊಡುವಂತಹ ವ್ಯವಸ್ಥೆ ಮಾಡಿದ್ದು, ನಮ್ಮ ತಾಲ್ಲೂಕಾ ಆಸ್ಪತ್ರೆಯಲ್ಲಿ ಮಾತ್ರ ವ್ಯಾಕ್ಸಿನೇಷನ್ ಇರುತ್ತೆ. ಆನ್ ಲೈನ್ ನೋಂದಣಿ ಇರುತ್ತದೆ, ಆಫ್ ಲೈನ್ ನೋಂದಣಿ ಇರುವುದಿಲ್ಲ ಎಲ್ಲರೂ ತಮ್ಮ ತಮ್ಮ ಹೆಸರಿನಲ್ಲಿ ನೋಂದಾಹಿಸಿಕೊAಡು ಆ ದಿವಸ ವ್ಯಾಕ್ಸಿನೇಷನ್ ನೀಡುತ್ತೇವೆ. ೪೫ ಮೇಲ್ಪಟ್ಟವರಿಗೆ ಈ ಹಿಂದೆ ವ್ಯಾಕ್ಸಿನೇಷನ್ ತೆಗೆದುಕೊಂಡುವರಿಗೆ ೬ವಾರ ಕಂಪ್ಲೀಟ್ ಆದವರಿಗೆ ೨ ನೇ ಡೋಸ್ ನೀಡಲಾಗುವುದು. ಈ ಹಿಂದೆ ಕೋವ್ಯಾಕ್ಸಿನ್ ತೆಗೆದುಕೋಂಡವರಿಗೆ ಕೋವ್ಯಾಕ್ಸಿನ್, ಕೋವಿಶೀಲ್ಡ್ ತೆಗೆದುಕೋಂಡವರಿಗೆ ಕೋವಿಶೀಲ್ಡ್ ನೀಡಲಾಗುವುದು. ತಾಲ್ಲೂಕಾ ಆಸ್ಪತ್ರೆ ಮಟ್ಟದಲ್ಲಿ ಪೂರೈಕೆ ಇದೆ. ಇನ್ನು ೨ ವಾರಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಈ ಹಿಂದೆ ಕೊಡುತ್ತಿದ್ದ ಹಾಗೆ ಸರಬರಾಜು ಆಗುತ್ತದೆ ಎಂದು ಮೇಲಾಧಿಕಾರಿ ಹೇಳಿದ್ದಾರೆ. ಅಲ್ಲಿಯ ವರೆಗೆ ತಾಲೂಕ ಆಸ್ಪತ್ರೆಗೆ ಬಂದು ವ್ಯಾಕ್ಸಿನೇಷನ್ ಪಡೆದುಕೊಳ್ಳತಕ್ಕದ್ದು ಎಂದರು.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರು ಮದುವೆ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಹೋಮ್ ಐಸೋಲೇಷನ್ ನಲ್ಲಿದ್ದ ಸೋಂಕಿತರು ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ ಎಂಬುದು ಹಲವರ ಆತಂಕವಾಗಿದೆ. ೪೫ ವರ್ಷ ಮೇಲ್ಪಟ್ಟವರಿಗೆ ಪ್ರಾಥಮಿಕ ಕೇಂದ್ರ ವ್ಯಾಪ್ತಿಯಲ್ಲಿ ವ್ಯಾಕ್ಸಿನೇಶನ್ ಎರಡನೆಯ ಡೋಸ್ ದೊರೆಯದೆ ಪರದಾಡುವಂತಾಗಿದ್ದು ಹೊನ್ನಾವರ ತಾಲ್ಲೂಕು ಆಸ್ಪತ್ರೆಗೆ ಹೋಗಬೇಕಾಗಿರುವುದು ಗ್ರಾಮಾಂತರ ಪ್ರದೇಶದವರಿಗೆ ತಲೆನೋವಾಗಿ ಪರಿಣಮಿಸಿದೆ.

error: