April 25, 2024

Bhavana Tv

Its Your Channel

ಹೆಗ್ಗಾರಿನಲ್ಲಿ ಅಗಲಿದ ಹಿರಿಯ ರಾಜಕಾರಣಿ ಎಸ್ ಎಂ ವೈದ್ಯ ರವರಿಗೆ ಶ್ರದ್ಧಾಂಜಲಿ.

ವರದಿ: ವೇಣುಗೋಪಾಲ ಮದ್ಗುಣಿ

ಅಂಕೋಲಾ: ಅಂಕೋಲಾ ತಾಲೂಕಿನ ಗಡಿ ಭಾಗವಾದ ಹೆಗ್ಗಾರ ಬಲಮುರಿ ಮಹಾಗಣಪತಿ ದೇವಸ್ಥಾನದಲ್ಲಿ ಅಕ್ಟೋಬರ ೧೫ ರ ವಿಜಯದಶಮಿಯಂದು, ಇತ್ತೀಚೆಗೆ ಅಗಲಿದ ಹಿರಿಯ ಚೇತನ, ಹಿರಿಯ ತಾಳಮದ್ದಳೆ ಕಲಾವಿದರಾದ ಎಸ್ ಎಂ ವೈದ್ಯ ರವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಊರಿನ ನಾಗರಿಕರು ಹಮ್ಮಿಕೊಂಡ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಿರಿಯ ತಾಳಮದ್ದಳೆ ಕಲಾವಿದರಾದ ವೆಂಕಟ್ರಮಣ ಭಟ್ಟ, ಗುರುಜೀಮನೆ ರವರು ಮಾತನಾಡಿ, ಈ ಭಾಗದ ತಾಳಮದ್ದಳೆಯ ಮೇರು ಕಲಾವಿದನನ್ನು ಕಳೆದುಕೊಂಡಿದ್ದೇವೆ,


ಅನಾದಿಯಿಂದಲೂ ಎಸ್ ಎಂ ವೈದ್ಯರವರ ಮನೆಯಲ್ಲಿ ನಡೆಯುತ್ತಿದ್ದ ಅನಂತನೋಪಿ ತಾಳಮದ್ದಳೆಯಲ್ಲಿ ಅನೇಕ ಸಲ ಭಾಗವಹಿಸಿದ್ದೇನೆ, ಅನೇಕ ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿ ಎಸ್ ಎಂ ವೈದ್ಯರವರು ಕೆಲಸಮಾಡಿದ್ದರು, ಎಂದಿಗೂ ಸಹಾ ಪದ್ಯದ ಚೌಕಟ್ಟನ್ನು ಮೀರದೇ ಅರ್ಥಹೇಳುವುದು ಹಾಗೂ ಅದರಲ್ಲೇ ಸೂಕ್ಷ್ಮವನ್ನು ತಿಳಿಸುವುದು ಎಸ್ ಎಂ ವೈದ್ಯರ ವಿಶಿಷ್ಟತೆಯಾಗಿತ್ತು, ಈ ಭಾಗ ಸಾಂಸ್ಕೃತಿಕವಾಗಿ ಮುನ್ನಡೆಯಲು ಎಸ್ ಎಂ ವೈದ್ಯರ ಕೊಡುಗೆ ಅಪಾರ ಎಂದರು. ಹಿರಿಯ ಹಾಗು ಹಳೆ ಮಟ್ಟಿನ ಯಕ್ಷಗಾನ ಭಾಗವತರಾದ ಪ್ರಭಾಕರ ಕಲಗಾರೆ ರವರು ಮಾತನಾಡಿ ,ಯಕ್ಷಗಾನ ರಂಗದ ಹಿರಿಯ ಕೊಂಡಿ ಕಳಚಿದೆ, ಅನೇಕ ಕಲಾವಿದರಿಗೆ ಆಶ್ರಯನೀಡಿ ,ಕಲಾ ಪ್ರೋತ್ಸಾಹಕ್ಕೆ ನೆರವಾದ ಎಸ್ ಎಂ ವೈದ್ಯರು ಇನ್ನಿಲ್ಲವೆಂಬುದು ಕಲಾ ಪ್ರಪಂಚಕ್ಕೇ ಹಾನಿ ಎಂದು ಶೋಕ ವ್ಯಕ್ತಪಡಿಸಿದರು. ಮೃತರ ಗೌರವಾರ್ಥ ಒಂದು ನಿಮಿಷದ ಮೌನವನ್ನು ಆಚರಣೆ ಮಾಡಲಾಯಿತು. ಅದೇ ರೀತಿ ತಾಳಮದ್ದಳೆ ಕಲಾವಿದರಾಗಿದ್ದ ಎಸ್ ಎಂ ವೈದ್ಯರಿಗೆ ಅರ್ಪಣೆಯಾಗಿ ರಾಮನಿರ್ಯಾಣ ತಾಳಮದ್ದಳೆಯನ್ನು ಹಮ್ಮಿಕೊಳ್ಳಲಾಗಿತ್ತು. ಹಿಮ್ಮೇಳದಲ್ಲಿ ಭಾಗವತರಾಗಿ ,ಪ್ರಭಾಕರ ಕಲಗಾರೆ, ಮದ್ದಲೆಯಲ್ಲಿ ಅಶೋಕ ಗಾಂವ್ಕರ ಸಹಕರಿಸಿದರು. ಮುಮ್ಮೇಳದಲ್ಲಿ ಕಲಾವಿದರಾಗಿ ವೆಂಕಟ್ರಮಣ ಭಟ್ಟ, ವಿಶ್ವೇಶ್ವರ ಭಟ್ಟ, ರಾಮಕೃಷ್ಣ ಎಂ ಭಟ್ಟ, ಶಿವರಾಂ ಎನ್ ಭಟ್ಟ ಗುಡ್ಡೆ, ಕಮಲಾಕರ ಭಟ್ಟ ಗುಡ್ಡೆ, ಅನಂತ ವೆಂ ಗಾಂವ್ಕರ, ಭಾಗವಹಿಸಿದ್ದರು. ಶೃಧ್ದಾಂಜಲಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ನಾರಾಯಣ ಭಟ್ಟ ಹಾಗು ಅರ್ಚಕರಾದ ಗೋಪಾಲಕೃಷ್ಣ ಭಟ್ಟ ಭಾಗವಹಿಸಿದ್ದರು.ಸ್ಥಳೀಯ ನಾಗರಿಕರು ಹಾಗೂ ಯುವಕ ಸಂಘದ ಸದಸ್ಯರುಗಳು ಸಂಘಟನೆಯಲ್ಲಿ ಸಹಕರಿಸಿ ಶೃದ್ಧಾಂಜಲಿ ಅರ್ಪಿಸಿದರು.

error: