April 25, 2024

Bhavana Tv

Its Your Channel

ಅಂಕೋಲೆಯ ಗೆಳೆಯರ ಬಳಗದಿಂದ ಸಾಹಿತಿ ಡಾ|| ಎನ್.ಆರ್. ನಾಯಕರಿಗೆ ಸನ್ಮಾನ

ಅಂಕೋಲಾ: ಸಾಹಿತಿಗಳು ರಚಿಸುವ ಕೃತಿಗಳನ್ನು ನಾವು ಓದುವದೆ ಅವರಿಗೆ ನಾವು ಸಲ್ಲಿಸುವ ಬಹುದೊಡ್ಡ ಗೌರವ. ಹಾರ ಶಾಲುಗಳನ್ನು ಹಾಕಿದಾಗ ಆಗುವ ಸಂತೋಷಕ್ಕಿAತ ನಮ್ಮ ಕೃತಿಗಳು ಹೆಚ್ಚು ಹೆಚ್ಚು ಜನರಿಗೆ ತಲುಪಿದಾಗ ಆಗುವ ಸಂತೃಪ್ತಿಯ ಹೆಚ್ಚು ಎಂದು ಜಿಲ್ಲೆಯ ಹಿರಿಯ ಸಾಹಿತಿ ಜಾನಪದ ದಿಗ್ಗಜ ಡಾ|| ಎನ್.ಆರ್. ನಾಯಕ ಅಭಿಪ್ರಾಯಪಟ್ಟರು. ಅವರು ಅಂಕೋಲೆಯ ಗೆಳೆಯರ ಬಳಗ ಎನ್.ಆರ್. ನಾಯಕರ ಹೊನ್ನಾವರ ಅವರ ಮನೆಗೆ ಸೌಹಾರ್ದ ಭೇಟಿಯಾಗಿ ಅವರನ್ನು ಆತ್ಮೀಯವಾಗಿ ಗೌರವಿಸಿದ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ಕಳೆದ ಏಳು ದಶಕಗಳಿಂದ ವೈವಿಧ್ಯಮಯ ಸಾಹಿತ್ಯ ಕೃತಿಗಳನ್ನು ರಚಿಸುವ ಮೂಲಕ ಗುರುತಿಸಿಕೊಂಡವರು ಡಾ|| ಎನ್.ಆರ್. ನಾಯಕ. ಜಾನಪದ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದವರು. ಅವರ ಮನೆಯೇ ಒಂದು ಜಾನಪದ ವಸ್ತು ಸಂಗ್ರಹಾಲಯದAತಿದೆ. ಇಂದಿಗೂ ಅಧ್ಯಯನದಲ್ಲಿ ನಿರತರಾಗಿ ೮೭ರ ಹರೆಯದಲ್ಲಿ, ಸಾಹಿತಿ, ಸಹಧರ್ಮಿಣಿ ಶಾಂತಿ ಅವರೊಂದಿಗೆ ಸುಹಾಸ (ಮನೆ)ದಲ್ಲಿ ಉಲ್ಲಾಸ, ಉತ್ಸಾಹದಿಂದ ಸಾರ್ಥಕ ಬದುಕನ್ನು ಬದುಕುತ್ತಿದ್ದಾರೆ. ಅವರು ಹುಟ್ಟು ಹಾಕಿದ ಜಾನಪದ ಆರಾಧನೆ ವಿಶಿಷ್ಟ ಕಾರ್ಯಕ್ರಮ ಜನಮನ ಸೆಳೆದಿದೆ. ಸಾಹಿತ್ಯ ಕ್ಷೇತ್ರದ ಹಲವು ಹತ್ತು ಪ್ರಕಾರಗಳಲ್ಲಿ ಸಾಕಷ್ಟು ಸಾಧನೆ ಮಾಡಿದರೂ ತಮ್ಮನ್ನು ಜಾನಪದ ವಿದ್ವಾಂಸ ಮಾತ್ರ ಎಂದು ಗುರುತಿಸಿರುವುದರ ಬಗ್ಗೆ ಅವರಿಗೆ ಅಸಮಾಧಾನವಿದೆ. ಅವರ ಕೃತಿಗಳಿಗೆ ಉತ್ತಮ ವಿಮರ್ಶೆ ಹೊರಹೊರಮ್ಮದಿರುವ ಬಗ್ಗೆ ಬೇಸರವಿದೆ. ತಮ್ಮ ಕಾವ್ಯದ ಅನುಸಂಧಾನ ನಡೆಯಬೇಕೆಂಬ ಆಶಯವಿದೆ. ತಮಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗಿಂತ ಜನರ ಹೃದಯ ಸಿಂಹಾಸನದ ಸ್ಥಾನ ದೊಡ್ಡದು ಎಂದು ಅಂಕೋಲೆಯ ಗೆಳೆಯರ ಬಳಗದವರೊಂದಿಗೆ ಅನೌಪಚಾರಿಕ ಮಾತನಾಡುವಾಗ ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಮೋಹನ ಹಬ್ಬು ಮಾತನಾಡಿ, ಡಾ|| ಎನ್.ಆರ್. ನಾಯಕರ ಬದುಕು, ಬರಹ ಕುರಿತು ಜಿಲ್ಲೆಯಾದ್ಯಂತ ವಿಚಾರ ಸಂಕಿರಣ ಏರ್ಪಡಿಸುವ ಅವಶ್ಯಕತೆಯಿದ್ದು, ಕಸಾಪದಂತಹ ಸಂಸ್ಥೆಗಳು ಗಮನ ಹರಿಸಬೇಕೆಂದರು. ಶಿಕ್ಷಕ ಮಂಜುನಾಥ ಬರ್ಗಿ ಮಾತನಾಡಿ, ನಾಯಕರ ಸಾಹಿತ್ಯಕ್ಕೆ ತಾಳಿಕೆ, ಬಾಳಿಕೆ ಗುಣವಿದೆಯೆಂದರು. ನಾಯಕರು ಒಂದು ಇಡೀ ವಿಶ್ವವಿದ್ಯಾಲಯ ಮಾಡುವಷ್ಟು ಕಾರ್ಯವನ್ನು ಮಾಡಿದ್ದರೆಂದು ಡಾ|| ಗುಂದಿ ಅಭಿಪ್ರಾಯಪಟ್ಟರು. ಅಂಕೋಲೆಯ ಗೆಳೆಯರ ಬಳಗದ ಗೋಪಾಲಕೃಷ್ಣ ನಾಯಕ, ಜಗದೀಶ ನಾಯಕ, ನಾಗೇಂದ್ರ ತೊರ್ಕೆ, ನಿವೃತ್ತ ಪ್ರಾಚಾರ್ಯ ವಿ.ಎಸ್. ವೆರ್ಣೇಕರ, ಸುಮುಖಾನಂದ ಜಲವಳ್ಳಿ ಹಾಗೂ ಮಹಾಂತೇಶ ರೇವಡಿ ಉಪಸ್ಥಿತರಿದ್ದರು.

ವರದಿ ; ವೇಣುಗೋಪಾಲ ಮದ್ಗುಣಿ

error: