March 29, 2024

Bhavana Tv

Its Your Channel

ಯಶಸ್ವಿಯಾದ “ಉಚಿತ ಆರೋಗ್ಯ ಕಾರ್ಡ್” ವಿತರಣಾ ಶಿಬಿರ

ವರದಿ: ವೇಣುಗೋಪಾಲ ಮದ್ಗುಣಿ

ಅಂಕೋಲಾ : ಜನಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವು ಸಾಕಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಬೇಸರದ ಸಂಗತಿಯೆoದರೆ ಬಹುತೇಕ ಜನರಿಗೆ ಈ ಕಾರ್ಯಕ್ರಮಗಳ ಪ್ರಯೋಜನಗಳ ಬಗ್ಗೆ ತಿಳಿಯದಿರುವುದು. ‘ಅಂಕೋಲಾ ಲಾಯನ್ಸ್ ಕ್ಲಬ್ ಕರಾವಳಿ’ ಯು ಅಂಕೋಲೆಯ ಜನತೆಗೆ ಬಹು ಉಪಯೋಗಿ “ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಕಾರ್ಡ್” ವಿತರಣಾ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸಾರ್ಥಕ ಕಾರ್ಯ ಮಾಡಿದೆಯೆಂದು ಜಿಲ್ಲಾ ಆರೋಗ್ಯ ಕಲ್ಯಾಣ ಇಲಾಖೆಯ ಡಿ.ಎಲ್.ಓ ಶಂಕರರಾವ್ ಹೇಳಿದರು.

ಅವರು ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ರವರ ಸಹಯೋಗದಲ್ಲಿ ಆಯೋಜಿಸಿದ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎ.ಬಿ.ಆರ್.ಕೆ ಯ ಜಿಲ್ಲಾ ಸಂಯೋಜಕರಾದ ಡಾ. ರಾಘವೇಂದ್ರ ಮಾತನಾಡಿ, ಆರೋಗ್ಯ ಸೇವೆ ತುಂಬಾ ದುಬಾರಿಯಾಗಿರುವ ಕಾಲದಲ್ಲಿ ಆರೋಗ್ಯ ಕಾರ್ಡ್ ಆಪತ್ ಕಾಲದಲ್ಲಿ ಜನಸಾಮಾನ್ಯರಿಗೆ ವರದಾನದಂತೆ ಉಪಯೋಗಕ್ಕೆ ಬರುತ್ತದೆಯೆಂದರು. ಬಿ.ಪಿ.ಎಲ್. ಕಾಡ್ ðನವರಿಗೆ 5 ಲಕ್ಷದವರೆಗೆ, ಎಪಿಲ್ ಕಾರ್ಡನವರಿಗೆ ಶೇ. 30 ರಷ್ಟು ಒಟ್ಟು 1 ವರೆ ಲಕ್ಷದಷ್ಟು ಉಚಿತ ಚಿಕಿತ್ಸಾ ಸೌಲಭ್ಯ ಸಿಗಲಿದೆಯೆಂದರು. ಆರೋಗ್ಯ ಕಾರ್ಡ್ ಪಡೆಯುವ ವಿಧಾನ, ಪ್ರಯೋಜನಗಳ ಬಗ್ಗೆ ವಿವರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ ಲಾಯನ್ಸ್ ಅಧ್ಯಕ್ಷ ಡಾ. ಕರುಣಾಕರ ಮಾತನಾಡಿ, ಮಾನವ ಜನಾಂಗದ ಸೇವೆಯೇ ನಮ್ಮ ಲಾಯನ್ಸ್ ಕ್ಲಬ್‌ನ ಉದ್ದೇಶವಾಗಿದೆ. ಈ ಆರೋಗ್ಯ ಕಾರ್ಡ್ ವಿತರಣಾ ಶಿಬಿರ ತುಂಬಾ ಯಶಸ್ವಿಯಾಗಿದ್ದು ನಮ್ಮ ಕ್ಲಬ್‌ನ ಸದಸ್ಯರ ಶ್ರಮ ಸಾರ್ಥಕವಾಗಿದೆಯೆಂದರು.
ಅತ್ಯಂತ ಯಶಸ್ವಿಯಾದ ಶಿಬಿರದಲ್ಲಿ 462 ಕ್ಕೂ ಹೆಚ್ಚು ಜನರು ಆರೋಗ್ಯ ಕಾರ್ಡ್ ಪಡೆಯಲು ನೋಂದಾಯಿಸಿಕೊoಡರು. 222 ಜನರಿಗೆ ಶಿಬಿರದಲ್ಲಿ ತಕ್ಷಣ ಆರೋಗ್ಯ ಕಾಡ್ ðನ್ನು ವಿತರಿಸಲಾಯಿತು. ಕಾರವಾರದ ಆಸ್ಪತ್ರೆಯ ಇ-ಕ್ಲಿನಿಕ್ ನ ತಾಂತ್ರಿಕ ವಿಭಾಗದ ಮುಖ್ಯಸ್ಥ ಸಂತೋಷ ಹಾಗೂ ಕಾರವಾರ, ಅಂಕೋಲಾ, ಯಲ್ಲಾಪುರದಿಂದ ಬಂದ ತಾಂತ್ರಿಕ ಸಿಬ್ಬಂದಿಗಳು ಶಿಬಿರದಲ್ಲಿ ಭಾಗವಹಿಸಿ ಕಾರ್ಡ್ ವಿತರಣೆಯಲ್ಲಿ ಸಹಕರಿಸಿದರು.

ಲಾ.ಗಣಪತಿ ತಾಂಡೇಲ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಉದ್ಘಾಟನಾ ಸಮಾರಂಭದಲ್ಲಿ ಲಾಯನ್ಸ್ ವಲಯಾಧ್ಯಕ್ಷ ಮಹಾಂತೇಶ ರೇವಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿ ವರ್ಷದುದ್ದಕ್ಕೂ ಹಮ್ಮಿಕೊಂಡ ಸಾಮಾಜಿಕ ಕಾರ್ಯಕ್ರಮಗಳ ವಿವರಗಳನ್ನು ನೀಡಿ, ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಲಾಯನ್ ಕಾರ್ಯದರ್ಶಿ ಸದಾನಂದ ರಾಮಯ್ಯ ಶೆಟ್ಟಿ ವಂದಿಸಿದರು. ಲಾ. ಹಸನ್ ಶೇಖ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲಾಯನ್ಸ್ ಸದಸ್ಯರಾದ ಸಂಜಯ ಅರುಂಧೇಕರ, ಎಸ್.ಆರ್.ಉಡುಪಿ. ಗಣಪತಿ ನಾಯಕ, ಗಿರಿಧರ ಆಚಾರ್ಯ, ಶ್ರೀನಿವಾಸ ನಾಯಕ, ಓಂ ಪ್ರಕಾಶ ಪಟೇಲ, ಸತೀಶ ನಾಯ್ಕ, ಚೈನಸಿಂಗ್, ಚಂದನಸಿAಗ್, ಗಣೇಶ ಶೆಟ್ಟಿ, ಮಹೇಶ ನಾಯ್ಕ, ಕೇಶವಾನಂದ ನಾಯಕ, ಶಂಕರ ಹುಲಸ್ವಾರ ಉಪಸ್ಥಿತರಿದ್ದರು.

error: