April 19, 2024

Bhavana Tv

Its Your Channel

ಕಲ್ಲೇಶ್ವರದ ಕೇಂದ್ರ ಶಾಲೆಯಲ್ಲಿ ಯಶಸ್ವಿಯಾದ ಪ್ರತಿಭಾ ಕಾರಂಜಿ

ವರದಿ: ವೇಣುಗೋಪಾಲ ಮದ್ಗುಣಿ

ಅಂಕೋಲಾ : ಕರೋನಾ ಮಹಾಮಾರಿಯಿಂದ ಎರಡು ವರ್ಷ ಸ್ಥಗಿತಗೊಂಡಿದ್ದ ಮಕ್ಕಳ ಪ್ರತಿಭೆಗಳ ಪ್ರತಿಭಾ ಕಾರಂಜಿ ಕಲ್ಲೇಶ್ವರದ ಕೇಂದ್ರ ಶಾಲೆಯಲ್ಲಿ ಜರುಗಿತು.
ಡೋಂಗ್ರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡೋಂಗ್ರಿ ಪಂಚಾಯತ ಅಧ್ಯಕ್ಷರಾದ ಲತಾ ನಾಯ್ಕ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಇದು ಅತ್ಯುತ್ತಮ ವೇದಿಕೆ ಎಂದು ಹೇಳಿದರು.
ಪಂಚಾಯತ್ ಉಪಾಧ್ಯಕ್ಷರಾದ ವಿನೋದ ಭಟ್ಟರವರು ಮಾತನಾಡಿ ಮಕ್ಕಳ ಪ್ರತಿಭೆಗೆ ಸೂಕ್ತವಾದ ನಿರ್ಣಯವನ್ನು ನೀಡಿವುದರ ಮುಖಾಂತರ ಸೂಕ್ತವಾದ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಎಂದು ಹೇಳಿದರು.
ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷರಾದ ಶಿವರಾಮ ಗಾಂವ್ಕರ್ ಅವರು ಮಾತನಾಡಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವುದರ ಕಡೆ ಹೆಚ್ಚಿನ ಗಮನ ಕೊಡಿ ಅಂತ ವಿದ್ಯಾರ್ಥಿಗಳಿಗೆ ತಿಳಿ ಮಾತು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಯ ಅಧ್ಯಕ್ಷರಾದ ನಾರಾಯಣ ಹೆಗಡೆಯವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕವಾಗಿಯೂ ಬೆಳಯಬೇಕು. ನಮ್ಮ ದೇಶವು ವಿಶೇಷವಾದ ಸಾಂಸ್ಕೃತಿಕ ಪರಂಪರೆಯಿAದಲೇ ವಿಶ್ವದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ ಅಂತ ಹೇಳಿದರು. ಸಭೆಯಲ್ಲಿ ಪಂಚಾಯತ್ ಸದಸ್ಯರಾದ ನಾರಾಯಣ ಭಟ್ಟ, ಮೋಹನ್ ಪಟಗಾರ, ಮಾಜಿ ಅಧ್ಯಕ್ಷರಾದ ವಿ ಎಸ್ ಭಟ್ಟ, ಎಮ್ ಎನ್ ಭಟ್ಟ, ಬಿ ಆರ್ ಪಿ ಮಂಜುನಾಥ ನಾಯ್ಕ, ಸಿ ಆರ್ ಪಿ ಶ್ರೀನಿವಾಸ ನಾಯ್ಕ, ವಿನಾಯಕ ನಾಯ್ಕ, ಕಲ್ಪತರು ಸಂಘದ ಅಧ್ಯಕ್ಷರಾದ ಶ್ರೀಕೃಷ್ಣ ಗುಡ್ಡೆ, ಮುಖ್ಯೋಪಾಧ್ಯಾಯರಾದ ಪಾರ್ವತಿ ನಾಯ್ಕ, ಗೋಪಾಲಕೃಷ್ಣ ವೈದ್ಯ, ಶೇಖರ ಗಾಂವ್ಕರ, ಪ್ರಭಾಕರ ಕೋಟೆಮನೆ, ಗಣಪತಿ ಹೆಗಡೆ, ರಾಘು ಹೆಗಡೆ, ಗೋವಿಂದ ಪಟಗಾರ, ರಾಮಚಂದ್ರ ಪಟಗಾರ, ದಿನಕರ ಗೌಡ, ಬೀರ ಗೌಡ, ಲಲಿತಾ ಕೂರ್ಸೆ ಉಪಸ್ಥಿತರಿದ್ದರು.
ಡೋಂಗ್ರಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಹುಮಾನಗಳ ಜೊತೆಗೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ರೂಪದಲ್ಲಿ ಪುಸ್ತಕ ನೀಡಿದ್ದು
ಹಾಗೂ ಈ ಸಮಯದಲ್ಲಿ ಆಗಮಿಸಿ, ನಿಷ್ಪಕ್ಷಪಾತಿಯ ನಿರ್ಣಯವನ್ನು ನೀಡಿದ ಎಲ್ಲ ನಿರ್ಣಾಯಕರನ್ನು ಸಮಿತಿಯ ಪರವಾಗಿ ಶಾಲು ಹೊದೆಸಿ ಗೌರವಿಸಿದ್ದು
ವಿಶೇಷವಾಗಿತ್ತು
ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಅತ್ಯುತ್ತಮವಾದ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನೂ ಸಮೂಹ ಸಂಪನ್ಮೂಲ ವ್ಯಕ್ತಗಳಾದ ಕೆ. ಎಮ್. ಗೌಡರವರು ಸ್ವಾಗತಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಅಬ್ದುಲ್ ಶೇಖ ರವರು ನಿರೂಇಸಿದರು. ಶ್ರೀಮತಿ ಅಕ್ಷಯಾ ಗುನಗಾರವರು ವಂದಿಸಿದರು.ಈ ಪ್ರತಿಭಾ ಕಾರಂಜಿ, ಮುಖ್ಯೋದ್ಯಾಪಕರು ಹಾಗೂ ಶಿಕ್ಷಕ ಬಳಗ ,ಎಸ್ ಡಿ ಎಂ ಸಿ ಯ ಸದಸ್ಯರುಗಳು,
ಪ್ರೌಢಶಾಲಾ ಶಿಕ್ಷಕರ ಬಳಗ, ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಿಕ್ಷಕರು, , ಗೋಪಾಲಕೃಷ್ಣ ಯುವಕ ಮಂಡಳ ಮತ್ತು ಶಾರದಾಂಬಾ ಯುವತಿ ಮಂಡಳ ಕಲ್ಲೇಶ್ವರ, ಪಾಲಕ ಪೋಷಕರು, ವಿದ್ಯಾರ್ಥಿ ಸಮುದಾಯ, ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ್ದು ಯಶಸ್ವಿಗೆ ಕಾರಣವಾಯಿತು.ವಿಜೇತರಿಗೆ ಅಭಿನಂದನೆಗಳನ್ನು ಎಸ್ಡಿ.ಎಂ.ಸಿ ಅಧ್ಯಕ್ಷರಾದ ಕಲ್ಲೇಶ್ವರದ ನಾರಾಯಣ ಹೆಗಡೆ ತಿಳಿಸಿದ್ದಾರೆ.

error: