April 25, 2024

Bhavana Tv

Its Your Channel

ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಕೋಣಗಳ ಸಾಗಾಟ: ಆರೋಪಿಗಳ ಬಂಧಿಸಿದ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರು

ಭಟ್ಕಳ: ಜಾನುವಾರುಗಳ ಅಕ್ರಮ ಸಾಗಾಟ ಜಾಲ ಮತ್ತೆ ತನ್ನ ಕಾರ್ಯ ಪ್ರಾರಂಭಿಸಿದAತಿದ್ದು, ನಿನ್ನೆ ದನದ
ಮಾಂಸವನ್ನು ಸಾಗಿಸುವಾಗ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಆರೋಪಿತರನ್ನು ಬಂಧಿಸಿದ ಘಟನೆ ವರದಿಯಾಗಿತ್ತು.ಇಂದೂ ಸಹ ಕೋಣಗಳ ಅಕ್ರಮ ಸಾಗಾಟ ಪ್ರಕರಣ ವರದಿಯಾಗಿದೆ.
ಬುಧವಾರ ಶಿರಾಲಿ ಚೆಕ್ ಪೋಸ್ಟ್ ನಲ್ಲಿ ಬೊಲೆರೊ ವಾಹನ ಒಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕೋಣಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೋಲಿಸರು ವಶಕ್ಕೆ ಪಡೆದು ಕೋಣಗಳನ್ನು ರಕ್ಷಿಸಿದ ಘಟನೆ ನಡೆದಿದೆ.
ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಸುಮಾರು ೨೭ ಸಾವಿರದ ಮೌಲ್ಯದ ೨ ಕಪ್ಪು ಬಣ್ಣದ ಕೋಣಗಳನ್ನು ಹಾಗೂ ಆಕಳು ಕರುವನ್ನು ಹಿಂಸಾತ್ಮಕವಾಗಿ ತುಂಬಿಕೊAಡು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಬೊಲೆರೊ ವಾಹಯಲ್ಲಿದ್ದವರನ್ನು ವಿಚಾರಿಸಿದಾಗ ಕೋಣಗಳನ್ನು ಸಾಗಾಟ ಮಾಡಲು ಯಾವುದೇ ಪರವಾನಿಗೆ ಇಲ್ಲದಿರುವುದು ತಿಳಿದು ಬಂದಿದ್ದು, ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಹಿಂಸ್ಮಾತಕವಾಗಿ ತುಂಬಿಸಿಕೊAಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಭಟ್ಕಳ ಬದ್ರಿಯಾ ಕಾಲೋನಿಯ ಅಬ್ದುಲ್ ಖಾದರ ಶಫಿ ಅಹ್ಮದ ಬೆಳಗಾಂ ಮತ್ತು ಹೆಬಳೆ ಪಿದೋಶ ನಗರದ ಅಬ್ದುಲ್ ಬಾಯಿಸ್ ಅಬ್ದುಲ್ ಬಾಂದ್ ಅಕ್ಟರ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದು ಕೋಣಗಳನ್ನು ರಕ್ಷಿಸಲಾಗಿದೆ.
ಈ ಕುರಿತು ಗ್ರಾಮೀಣ ಠಾಣೆಯ ಪಿ.ಎಸ್.ಐ ಭರತ ಕುಮಾರ್ ವಿ.ದೂರು ನೀಡಿದ್ದು ಹೆಡ್ ಕಾನ್‌ಸ್ಟೆಬಲ್ ಮಹೇಶ್ ಜೆ ಪಟಾಗಾರ  ಗೋ ಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡ ತನಿಖೆ ಕೈಗೊಂಡಿದ್ದಾರೆ.

error: