April 23, 2024

Bhavana Tv

Its Your Channel

ಪಾಕಿಸ್ತಾನಿ ಮಹಿಳೆ, ಕೇಂದ್ರ ತನಿಖಾ ತಂಡ, ತನಿಖೆ ಪೂರ್ಣ

ಭಟ್ಕಳ ; ಅನಧಿಕೃತವಾಗಿ ಆರು ವರ್ಷಗಳಿಂದ ಭಟ್ಕಳದಲ್ಲಿ ವಾಸವಿದ್ದ ಪಾಕಿಸ್ತಾನಿ ಮಹಿಳೆಯನ್ನು ಬಂಧಿಸಿದ ಪೊಲೀಸರಿಂದ ಕೇಂದ್ರ ತನಿಖಾ ತಂಡ ಬುಧವಾರ ತನಿಖೆ ಪುರ್ಣಗೊಳಿಸಿದ್ದು ಪ್ರಮುಖ ಮಾಹಿತಿ ಕಲೇ ಹಾಕಿದ್ದಾರೆ ಎನ್ನಲಾಗಿದೆ.
ಇತ್ತೀಚಿಗೆ ಖತೀಜಾ ಮೆಹರಿನ್ ಎನ್ನುವ ಪಾಕಿಸ್ತಾನದ ರಾಷ್ಟ್ರೀಯತೆ ಹೊಂದಿರುವ ಮಹಿಳೆಯು ಭಟ್ಕಳ ತಾಲೂಕಿನ ನವಾಯತ ಕಾಲೋನಿ ಮನೆಯೊಂದರಲ್ಲಿ ಅಕ್ರಮವಾಗಿ ವಾಸ್ತವ್ಯ ಮಾಡುತ್ತಿರುವ ಬಗ್ಗೆ ಗುಪ್ತಚರ ಮಾಹಿತಿಯನ್ನಾಧರಿಸಿ ಭಟ್ಕಳ ನಗರ ಠಾಣಾ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದರು. ನಂತರ ಕೇಂದ್ರದ ತನಿಖಾ ತಂಡ ಮತ್ತು ಬೆಂಗಳೂರಿನ ಎಟಿಎಸ್ ತಂಡ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಭಟ್ಕಳ ಮತ್ತು ಕಾರವಾರದಲ್ಲೂ ತನಿಖೆ ನಡೆಸಲಾಗಿದ್ದು ಪ್ರಮುಖ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಭಟ್ಕಳದಲ್ಲಿ ಸಂಚಲನ ಉಂಟಾಗಿದ್ದು ಭಟ್ಕಳದಲ್ಲಿ ಇನ್ನಷ್ಟು ಪಾಕಿಸ್ತಾನಿ ಪ್ರಜೆಗಳು ಇದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರಲು ಆರಂಭವಾಗಿದೆ.
ಈಕೆ ಪಾಕಿಸ್ತಾನದ ರಾಷ್ಟ್ರೀಯತೆಯನ್ನು ಹೊಂದಿದ್ದು, ಸುಮಾರು ೮ ವರ್ಷಗಳ ಹಿಂದೆ ಭಟ್ಕಳದ ನವಾಯತ ಕಾಲೋನಿಯ ಜಾವೀದ್ ಮೊಹಿದ್ದೀನ್ ರುಕ್ಕುದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿ, ೨೦೧೪ರಲ್ಲಿ ೩ ತಿಂಗಳ ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದಳು. ಬಳಿಕ ವಾಪಸ್ಸಾಗಿ ೨೦೧೫ರ ಪ್ರಾರಂಭದಲ್ಲಿ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ನುಸುಳಿ ಬಂದು ತನ್ನ ಗಂಡನ ಮನೆಯಾದ ಭಟ್ಕಳದ ನವಾಯತ ಕಾಲೋನಿಯಲ್ಲಿ ತನ್ನ ೩ ಮಕ್ಕಳೊಂದಿಗೆ ಅಕ್ರಮವಾಗಿ ವಾಸವಾಗಿದ್ದಳು. ಪ್ರಮುಖ ಮಾಹಿತಿ ಕಲೆ ಹಾಕಿದ ವಿಚಾರಣ ತಂಡ ಗುರುವಾರ ಇಲ್ಲಿಂದ ತೆರಳಿದ್ದು ಮುಂದಿನ ಕ್ರಮಕ್ಕಾಗಿ ಯೋಜನೆ ರೂಪಿಸಿದೆ ಎನ್ನಲಾಗಿದೆ.

error: