April 24, 2024

Bhavana Tv

Its Your Channel

ಭಟ್ಕಳದಲ್ಲಿ ಕೋವಿಡ್ ಲಸಿಕಾಕರಣ ಮೇಗಾಮೇಳ.

ಭಟ್ಕಳ : ಜಿಲ್ಲಾಧಿಕಾರಿಗಳ ಸೂಚನೆಯಂತೆ ಭಟ್ಕಳ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ/ ಸಮುದಾಯ ಆರೋಗ್ಯ ಕೆಂದ್ರ/ ಉಪ ಕೇಂದ್ರ/ಖಾಸಗಿ ಕೇಂದ್ರಗಳಲ್ಲಿ ಲಸಿಕಾಕರಣ ಮೇಗಾ ಮೇಳವನ್ನು ಜೂನ್ ೨೧ ಸೋಮವಾರದಿಂದ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೪-೩೦ ರ ವರೆಗೆ ಹಮ್ಮಿಕೊಳ್ಳಲಾಗಿದೆ. ೧೮ ವರ್ಷ ಮೇಲ್ಪಟ್ಟ ಆಧ್ಯತೆ ಗುಂಪುಗಳಾದ ಅಂಗಡಿಕಾರರು, ಹೊಟೇಲ್ ಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರು, ಕಟ್ಟಡಕಾರ್ಮಿಕರು, ಟೇಲಿಕಾಂ ಮತ್ತು ಇಂಟರ್ನೇಟ್ ಸೇವೆ ಒದಗಿಸುವ ಕಾರ್ಮಿಕರು, ಕೇಬಲ್ ಆಪರೇಟರ್, ಬ್ಯಾಂಕ್ ಮತ್ತು ಇನ್ಸುರೆನ್ಸ ಕಂಪನಿ ಸಿಬ್ಬಂದಿ, ಕೆ.ಎಂ.ಎಫ್, ಹಾಲು ಮಾರಾಟಗಾರರು, ಗಾರ್ಮೆಂಟ್ಸ ಕಂಪನಿ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ, ಆರ್.ಎಸ್.ಕೆ. ಸಿಬ್ಬಂದಿ, ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು ಹಾಗೂ ನೌಕರಿಗಾಗಿ ವಿದೇಶಕ್ಕೆ ತೆರಳುವವರು, ಅಂತರ ರಾಷ್ಟ್ರೀಯ ಮಟ್ಟದ ಓಲಂಪಿಕ್ಸಗಾಗಿ ಟೋಕಿಯೋಗೆ ತೆರಳುವ ಆಟಗಾರರು, ಅಗ್ನಿಶಾಮಕ ದಳ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಪಂಚಾಯತ ಹಾಗೂ ಪುರಸಭೆ/ ಪಟ್ಟಣ ಪಂಚಾಯತ ಸಿಬ್ಬಂದಿಗಳು ಕೋಮಾಬ್ರಿಡ್ ರೋಗಲಕ್ಷಣ ಹೊಂದಿರುವ ಜನರು, ವಾರ್ತಾಪತ್ರಿಕೆ ಏಜನ್ಸಿಸ್ ಮತ್ತು ಮಾರಾಟಗಾರರು, ಖಾಸಗಿ ಆಸ್ಪತ್ರೆ ಮೆಡಿಕಲ್ ಅಂಗಡಿಗಳ ಸಿಬ್ಬಂದಿಗಳು, ಪೆಟ್ರೋಲ್ ಬಂಕ್ ಕಾರ್ಮಿಕರು, ವಕೀಲರು, ರೇಲ್ವೆ ಸಿಬ್ಬಂದಿ, ಎ.ಪಿ.ಎಂ.ಸಿ. ಸಿಬ್ಬಂದಿಗಳು, ಇಲೆಕ್ಟ್ರೀಷಿಯನ್ನ, ಪ್ಲಂಬರ್ಸ, ಅಂಗವಿಕಲರು, ತೃತೀಯ ಲಿಂಗದ ಗುಂಪು, ಆಟೋ ಚಾಲಕರು, ಆರೋಗ್ಯ ಇಲಾಖೆ ( ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು) ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರು ಹಾಗೂ ಇತರೇ ಆಧ್ಯತೆ ಗುಂಪುಗಳ ಉಳಿಕೆ ಜನರು ಹಾಗೂ ೪೫ ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೆ ಲಸಿಕಾಕರಣವನ್ನು ಹಮ್ಮಿಕೊಂಳ್ಳಲಾಗಿದೆ
ತಾಲೂಕಿನ ಹಡೀನ್ ಪದವಿ ಪೂರ್ವ ಕಾಲೇಜು, ಬೆಳಕೆ ಪ್ರಾಥಮಿಕ ಆರೋಗ್ಯ ಕೇಂದ್ರ , ಮುಂಡಳ್ಳಿಯ ಗ್ರಾಮ ಪಂಚಾಯತ ಹಾಲ್, ಕೋಟಖಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಣಾರ ಪಂಚಾಯತ ವ್ಯಾಪ್ತಿಯ ಮಾರುಕೇರಿಯ ಸರಕಾರಿ ಕಿರಿಯ ಪ್ರಾತಮಿಕ ಶಾಲೆ , ಜಾಲಿಯ ಆಯುರ್ವೇದಿಕ ಆಸ್ಪತ್ರೆ ಕೆಂದ್ರ, ಶಿರಾಲಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಮಾವಿನಕುರ್ವೆಯ ಉಪಕೇಂದ್ರದ ಕಟ್ಟಡ, ಹೆಬಳೆಯ ಉಪಕೇಂದ್ರ ಕಟ್ಟಡ, ಅಳ್ವೇಕೋಡಿಯ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ,

ಮುರುಡೇಶ್ವರದ ಪ್ರಾಥಮಿಕ ಆರೊಗ್ಯ ಕೇಂದ್ರ, ಮಾವಳ್ಳಿ ೨ ಭಾಗದ ಹಿಂದುಳಿದ ವರ್ಗಗಳ ವಸತಿ ಕೇಂದ್ರ, ಕೆರೆಕಟ್ಟೆ ಓಲಗಾ ಮಂಟಪ, ಬೈಲೂರು ಗಣೇಶೋತ್ಸವದ ಹಾಲ್, ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಭಟ್ಕಳದ ನಗರದ ತಂಜೀಮ್ ಸಮಾಜ ಕೇಂದ್ರ, ರಬಿತಾ ಹಾಲ್ , ಭಟ್ಕಳದ ತಾಲೂಕು ಆಸ್ಪತ್ರೆ, ಭಟ್ಕಳದ ಹಿಂದುಳಿದ ವರ್ಗಗಳ ವಸತಿ ಕೆಂದ್ರ ಮುಂತಾದ ಕಡೆಗಳಲ್ಲಿ ಲಸಿಕಾಕರಣ ಮೇಗಾ ಮೇಳ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ಭಟ್ಕಳ ತಾಲೂಕಿನ ಜನತೆ ಪಡೆದುಕೋಳ್ಳಬೇಕೆಂದು ತಹಸೀಲ್ದಾರ ರವಿಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: