July 26, 2021

Bhavana Tv

Its Your Channel

ಬೆಂಗ್ರೆ ಗ್ರಾಮ ಪಂಚಾಯತನ ಘನತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ವನಮಹೋತ್ಸವ

ಭಟ್ಕಳ: ಬೆಂಗ್ರೆ ಗ್ರಾಮ ಪಂಚಾಯತನ ಘನತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗ್ರೆ ಗ್ರಾಮ ಪಂಚಾಯತ ಅಧ್ಯಕ್ಷೆ ಬೇಬಿ ಮಾರುತಿ ನಾಯ್ಕ ಪರಿಸರ ಸಂರಕ್ಷಣೆಯಿAದ ನಿಸರ್ಗದ ಸಂರಕ್ಷಣೆ ಸಾಧ್ಯ ಎಂದರು.
ಅರಣ್ಯ ಇಲಾಖೆ ವತಿಯಿಂದ ನೀಡಲಾದ ವಿವಿಧ ಜಾತಿಯ ಪೇರಲೆ, ಮಾವು, ಹಲಸು ಇತ್ಯಾದಿ ಗಿಡಗಳನ್ನು ನೆಡುವುದರೊಂದಿಗೆ ವನಮಹೋತ್ಸವ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಪ್ರಮೀಳಾ ಡಿಕೋಸ್ತಾ, ಪಿ.ಡಿ.ಓ. ಉದಯ ಬೊರಕರ, ಕಾರ್ಯದರ್ಶಿ ಮಂಜು ಎ.ಗೌಡ, ಗ್ರಾಮ ಪಂಚಾಯತ ಸಿಬ್ಬಂದಿಗಳು, ಸದಸ್ಯರು, ಕಂದಾಯ ಇಲಾಖೆ ಸಿಬ್ಬಂದಿಗಳು ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ (ಬೆಂಗ್ರೆ ವಲಯ ) ಹಾಗೂ ಸ್ನೇಹಬಂಧು ಸಂಜೀವಿನಿ ಗ್ರಾಮ ಪಂಚಾಯತ ಒಕ್ಕೂಟ ಸಂಘ, ತಾಲೂಕಾ ಪಂಚಾಯತ್ ಮಾಜಿ ಸದಸ್ಯ ವಿಷ್ಣು ದೇವಡಿಗ ಮುಂತಾದವರು ಉಪಸ್ಥಿತರಿದ್ದರು.

error: