April 20, 2024

Bhavana Tv

Its Your Channel

ಪುನರಾರಂಭಗೊoಡ ಬಸ್ ಸೇವೆ, ಸ್ಥಳೀಯ ರೂಟ್‌ಗಳಿಗೆ ಬಸ್ ಬಿಡಲು ಆದೇಶ ಬಂದಿಲ್ಲ

ಭಟ್ಕಳ: ಕೆ.ಎಸ್.ಆರ್.ಟಿ.ಸಿ. ಮುಷ್ಕರ ಹಾಗೂ ತದನಂತರದ ಕೊರೊನಾ ಲಾಕ್‌ಡೌನ್‌ನಿಂದಾಗಿ ನಿಂತು ಹೋಗಿದ್ದು ಬಸ್ ಸಂಚಾರ ಇಂದಿನಿAದ ಪುನರಾರಂಭಗೊoಡಿದ್ದು ಹಂತ ಹಂತವಾಗಿ ಬಸ್ ಸೇವೆಯನ್ನು ಹೆಚ್ಚಿಸುವ ಗುರಿಯನ್ನು ಇಲಾಖೆ ಹೊಂದಿದೆ.
ಸೋಮವಾರ ಬೆಳಿಗ್ಗೆಯಿಂದಲೇ ಬಸ್ ಸಂಚಾರ ಆರಂಭವಾಗಿದ್ದು ಭಟ್ಕಳದಿಂದ ಹೊನ್ನಾವರ, ಕುಮಟಾ, ಕಾರವಾರ, ಶಿರಸಿ, ಯಲ್ಲಾಪುರ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ೧೮ ಟ್ರಿಪ್‌ಗಳನ್ನು ಮಾಡಲಾಗಿದೆ ಎಂದು ಡಿಪೋದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಅನ್‌ಲಾಕ್ ೨.o ಹಿನ್ನೆಲೆಯಲ್ಲಿ ಭಟ್ಕಳದಲ್ಲೂ ಬಸ್ ಸಂಚಾರ ಆರಂಭವಾಗಿದ್ದು ಕೆಲವೊಂದು ಬಸ್‌ಗಳು ಖಾಲಿಯಾಗಿದ್ದರೂ ಮುಂದಿನ ದಿನಗಳಲ್ಲಿ ಪ್ರಯಾಣಿಕರು ಬರುವ ಸಾಧ್ಯತೆ ಇದೆ. ಭಟ್ಕಳದಿಂದ ಹೊರಡುವ ಹೊನ್ನಾವರ-ಕುಮಟಾ ಲೋಕಲ್ ಬಸ್ಸಿನಲ್ಲಿ ಸಾಕಷ್ಟು ಪ್ರಯಾಣಿಕರಿದ್ದು ಸಂಜೆಯ ತನಕ ಬಸ್‌ಗಳು ಓಡಾಡಿದ್ದು ನಂತರ ಸ್ಥಗಿತಗೊಂಡವು. ಉಡುಪಿ, ಮಂಗಳೂರಿನಲ್ಲಿ ಲಾಕಡೌನ್ ಮುಂದುವರಿದಿರುವುದರಿAದ ಖಾಸಗಿ ಬಸ್ಸುಗಳು ಭಟ್ಕಳಕ್ಕೆ ಬಂದಿಲ್ಲ. ಕುಂದಾಪುರ ಭಟ್ಕಳ ಸರಕಾರಿ ಬಸ್ ಕೂಡಾ ಆರಂಭವಾಗಿಲ್ಲ.
ಡಿಪೋ ವ್ಯವಸ್ಥಾಪಕರಾದ ದಿವಾಕರ ಮಾತನಾಡಿ ಸ್ಥಳೀಯ ರೂಟ್‌ಗಳಿಗೆ ಬಸ್ ಬಿಡಲು ಆದೇಶ ಬಂದಿಲ್ಲ. ದೂರದ ಊರುಗಳಿಗೆ ಬಸ್‌ಗಳನ್ನು ಬಿಡಲಾಗಿದ್ದು ಪ್ರಯಾಣಿಕರ ಒತ್ತಡವಿದ್ದಲ್ಲಿ ಹೆಚ್ಚಿನ ಬಸ್‌ಗಳನ್ನ ಬಿಡಲಾಗುವುದು ಎಂದರು.

error: