April 24, 2024

Bhavana Tv

Its Your Channel

ಭಟ್ಕಳದ ಹೈಟೆಕ್ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಸ್ವಾಗತಿಸುತ್ತೆ ಕೆಸರು ಗದ್ದೆ

ಭಟ್ಕಳ: ಭಟ್ಕಳಕ್ಕೊಂದು ಸುಸಜ್ಜಿತ ಬಸ್ ನಿಲ್ದಾಣದ ಅವಶ್ಯಕತೆ ಅನುಗುಣವಾಗಿ ಸದ್ಯ ಸುಂದರ ಬಸ್ ನಿಲ್ದಾಣವೇನು ನಿರ್ಮಾಣಗೊಂಡಿದೆ. ಆದರೆ ಸುಂದರ ಬಸ್ ನಿಲ್ದಾಣದ ಎದುರಿಗೆ ಕೆಸರಿನ ಗದ್ದೆಯಂತಾದ ಪ್ರವೇಶ ದ್ವಾರದ ಸ್ಥಿತಿ ಸದ್ಯ ಪ್ರಯಾಣಿಕರಿಂದ ಹಿಡಿದು ಬಸ್ ಚಾಲಕರಿಗೂ ಕಿರಿಕಿರಿಯುಂಟು ಮಾಡಿದ್ದು ಈ ಪರಿಸ್ಥಿತಿ ಸರಿಪಡಿಸಲು ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಗಮನಹರಿಸುತ್ತಿಲ್ಲ, ಸಾರ್ವಜನಿಕರು ಇದರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಾಕ್ ಡೌನ ಮುಗಿದು ಅನ್ ಲಾಕ್ ಆಗಿ ಸದ್ಯ ಜನರು ಮನೆಯಿಂದ ಹೊರಗೆ ಬರಲು ಆರಂಭಿಸಿದ್ದೇನೋ ನಿಜ, ನಿಧಾನಗತಿಯಲ್ಲಿ ಭಟ್ಕಳದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬರುತ್ತಿದ್ದು ಜನಜೀವನ ಸಹಜಸ್ಥಿತಿಗೆ ಬರುತ್ತಲಿದೆ. ಆದರೆ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಪ್ರವೇಶ ದ್ವಾರದಲ್ಲಿನ ಕೆಸರು ತುಂಬಿ ಗದ್ದೆಯಂತಹ ಚಿತ್ರಣ ಮಾತ್ರ ತೀರಾ ಕಿರಿಕಿರಿ ಎನ್ನಿಸುವಂತಾಗಿದೆ. ಸುಂದರ ಬಸ್ ನಿಲ್ದಾಣಕ್ಕೆ ಪ್ರವೇಶ ದ್ವಾರ ಕೆಸರಿನಿಂದಾವ್ರತವಾಗಿರುವುದು ಅಸಹ್ಯ ಹುಟ್ಟಿಸುವಂತಿದೆ.

ಮಳೆ ಬಂತೆAದರೆ, ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೈಟೆಕ್ ಬಸ್ ನಿಲ್ದಾಣದ ಪ್ರವೇಶ ದ್ವಾರ ಕೆಸರು ಗದ್ದೆಯಾಗಿ ಮಾರ್ಪಡುತ್ತಿದೆ. ಇನ್ನು ಬಿಸಿಲು ಬಿದ್ದರೆ ನಿಲ್ದಾಣದಿಂದ ಹೊರಗೆ ಬರುವ ಬಸ್ಸಿನ ಚಕ್ರದಲ್ಲಿ ಸಿಲುಕಿದ ಮಣ್ಣಿನಿಂದ ಧೂಳು ಸರ್ವೇ ಸಾಮಾನ್ಯವಾಗಿದೆ. ಸದ್ಯ ಬ್ಯಾಂಕ್ ಉದ್ಯೋಗಿಗಳು, ಸರಕಾರಿ ಕಚೇರಿಗೆ ತೆರಳುವ ಉದ್ಯೋಗಿಗಳು, ಮಕ್ಕಳು, ಮಹಿಳೆಯರು, ವ್ರದ್ದರು ಬಸ್ ನಿಲ್ದಾಣದೊಳಗೆ ಹೊರಗೆ ಓಡಾಡಲು ಸಾಧ್ಯವಾಗದಂತಾಗಿದೆ. ಪ್ರಯಾಣಿಕರಿಗಷ್ಟೇ ಅಲ್ಲದೇ ಬಸ್ ಚಾಲಕರಿಗೂ ಇದು ಒಂದು ರೀತಿ ಕಿರಿಕಿರಿಯುಂಟಾಗುತ್ತಿದ್ದು, ನಿತ್ಯ ಭಟ್ಕಳ ಹೊನ್ನಾವರ, ಕುಂದಾಪುರ ಭಟ್ಕಳ ಓಡಾಟುವ ಬಸ್ ಗಳ ಚಾಲಕರು ಸಹ ಇದನ್ನ ದಾಟಿಯೇ ತೆರಳಬೇಕಾಗಿದ್ದು, ಬಸ್ ಗಳ ಸ್ವಚ್ಚತೆ ತಡೆಯುವುದು ಕಷ್ಟವಾಗಿದೆ ಎನ್ನುತ್ತಾರೆ ಚಾಲಕರು.

ಕಳೆದ ಒಂದು ವರ್ಷದ ಹಿಂದೆ ನಿರ್ಮಾಣಗೊಂಡ ಬಸ್ ನಿಲ್ದಾಣವು ಅಧಿಕ್ರತವಾಗಿ ಇನ್ನು ಉದ್ಟಾಟನೆಗೊಂಡಿಲ್ಲವಾಗಿದ್ದರು ಸಹ ಪ್ರಯಾಣಿಕರ ಅನೂಕೂಲಕ್ಕೆ ಸಂಸ್ಥೆಯ ಅಧಿಕಾರಿಗಳು ಪೂಜೆಯನ್ನು ನೆರವೆರಿಸಿ ಬಸ್ ನಿಲ್ದಾಣದಿಂದ ಸಂಚಾರ ಆರಂಭಗೊಳಿಸಲಾಯಿತು. ತುರ್ತಾಗಿ ಬಸ್ ಸಂಚಾರವೇನೋ ಆರಂಭಗೊAಡಿದೆ ಆದರೆ ಮಳೆಗಾಲದಲ್ಲಿ ಪ್ರಯಾಣಿಕರ ಅನೂಕೂಲಕ್ಕೆ ಪ್ರವೇಶ ದ್ವಾರದಲ್ಲಿನ ಹೊಂಡದಿAದ ಓಡಾಟ ಮಾಡಲು ಅಸಾಧ್ಯವಾದಂತಹ ಸ್ಥಿತಿ ಎದುರಾಗಿದೆ.

ರೂ ೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ಲಾಟ್‌ಫಾರಂ ನಿರ್ಮಾಣ ಮಾಡಿಲ್ಲ. ಬೇಸಿಗೆಯಲ್ಲಿ ಮೇಲೇಳುವ ದೂಳಿನ ನಡುವೆ ಪ್ರಯಾಣಿಕರು ಸಾಗಿದರೆ, ಮಳೆಗಾಲದಲ್ಲಿ ಕೆಸರಿನಲ್ಲಿ ಸಂಚರಿಸಬೇಕಾಗಿದೆ.
ಈ ಬಸ್ ನಿಲ್ದಾಣಕ್ಕೆ ನಿತ್ಯವೂ ಸಾವಿರಾರು ಪ್ರಯಾಣಿಕರು ಬರುತ್ತಲಿದ್ದು, ಬಸ್ ನಿಲ್ದಾಣದಲ್ಲಿ ಮಳಿಗೆಗಳಿದ್ದು, ವ್ಯಾಪಾರ ವಹಿವಾಟು ಸದಾ ನಡೆಯುತ್ತಿರುತ್ತದೆ. ಆದರೆ, ಕೆಸರು ನೀರು ನಿಂತಿರುವುದರಿAದ ಯಾರೂ ನಿಲ್ದಾಣದ ಒಳಗೆ ಹೋಗಲು ಮನಸ್ಸು ಮಾಡುತ್ತಿಲ್ಲ. ಒಂದುವೇಳೆ ಹೋದರೂ ಹಿಡಿಶಾಪ ಹಾಕುತ್ತಾ ತೆರಳುವಂತಹ ಚಿತ್ರಣ ಇದೆ.

ಸದ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಈ ಕೆಸರು ಗದ್ದೆಯಂತಾಗಿರುವುದರಿAದ ಪ್ರಯಾಣಿಕರು ಅದನ್ನು ದಾಟಿಕೊಂಡೇ ಹೋಗಬೇಕಾಗಿದೆ. ಅಷ್ಟರಲ್ಲಿ ಯಾವುದಾದರೂ ಬಸ್ ಬಂದರೆ ಮೈ ತುಂಬಾ ಕೆಸರು ಹಾರುತ್ತದೆ. ಇನ್ನು ಸದ್ಯ ರಸ್ತೆ ಅಗಲೀಕರಣ ಕಾಮಗಾರಿಯಿಂದಾಗಿ ಬಸ್ ನಿಲ್ದಾಣದ ಕಂಪೌAಡ ಕಾಮಗಾರಿ ಸಹ ಮಾಡಿಲ್ಲವಾಗಿದ್ದು ಬೇಲಿಯೇ ಇಲ್ಲದ ಮನೆಯಂತಾಗಿದೆ. ಬಸ್ ನಿಲ್ದಾಣದ ಎದುರಿಗೆ ಆಟೋ ರಿಕ್ಷಾ ನಿಲ್ದಾಣವಿದ್ದು ಅವರಿಗೂ ಸಹ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಕೆಸರಿನ ಗದ್ದೆಯಂತಾದ ಪ್ರವೇಶ ದ್ವಾರದಿಂದ ಸಮಸ್ಯೆ ಎದುರಿಸುವಂತಾಗಿದೆ.

ಈ ಬಗ್ಗೆ ಆನಂದ ವೈದ್ಯ- ಸಾಮಾಜಿಕ ಕಾರ್ಯಕರ್ತ ಮಾತನಾಡಿ ಇಷ್ಟಾದರು ಸಹ ಇಲ್ಲಿನ ಪರಿಸ್ಥಿತಿಗೆ ತಾತ್ಕಾಲಿಕ ಪರಿಹಾರ ನೀಡುವ ಬಗ್ಗೆಯೂ ಸಹ ಸಂಸ್ಥೆ ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ತೆಪೆ ಹಚ್ಚಿದಂತೆ ಕಲ್ಲುಗಳನ್ನು ತಂದು ಕೆಸರಿನ ಹೊಂಡಕ್ಕೆ ತುಂಬಿಸಿದ್ದು ಇದರಿಂದ ಸಂಚಾರ ಸುಗಮಕ್ಕಿಂತ ಇನ್ನಷ್ಟು ತೊಂದರೆ ಆಗಿದೆ ಎನ್ನುತ್ತಾರೆ ಸ್ಥಳೀಯ ಆಟೋ ರಿಕ್ಷಾ ಚಾಲಕರು.
ಅತೀ ಶೀಘ್ರವಾಗಿ ಬಸ್ ಓಡಾಟ ಕ್ಕೂ ಜನರು ನಡೆದಾಡಿಕೊಂಡು ಓಡಾಡಲು ಕೆಸರಿನಿಂದ ಗದ್ದೆಯಂತಾದ ಪ್ರವೇಶದ್ವಾರವನ್ನು ಸರಿಪಡಿಸಬೇಕೆಂಬ ಒತ್ತಾಯ ಸದ್ಯ ಸಾರ್ವಜನಿಕರದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕ್ ಉದ್ಯೋಗಿ ವೆಂಕಟೇಶ – ಮಾತನಾಡಿ ‘ಬಸ್ ನಿಲ್ದಾಣವನ್ನು ಕಟ್ಟಿದ್ದೇನೋ ಸರಿ ಆದರೆ ಪ್ರಯಾಣಿಕರ ಅನೂಕೂಲಕ್ಕಿಂತ ಅನಾನುಕೂಲವಾಗುವಂತೆ ಪ್ರವೇಶ ದ್ವಾರದ ಕೆಸರಿನ ಹೊಂಡ ಹಾಗೇ ಬಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ. ವ್ರದ್ಧರು, ಮಹಿಳೆಯರು, ಮಕ್ಕಳು ಈ ಕೆಸರಿನಲ್ಲಿ ಓಡಾಡುವುದು ಹೇಗೆ. ಇದಕ್ಕೆ ಜನಪ್ರತಿನಿಧಿಗಳು, ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಅಧಿಕಾರಿಗಳು ಗಮನಹರಿಸಬೇಕಿದೆ. ‘ಬಸ್ ನಿಲ್ದಾಣದ ಎದುರು ಕೆಸರು ನೀರು ನಿಂತರೂ ಅದನ್ನು ಸರಿ ಪಡಿಸಲು ಸಂಸ್ಥೆ ಕ್ರಮ ಕೈಗೊಂಡಿಲ್ಲ. ನಿತ್ಯವೂ ಈ ಕೆಸರನ್ನು ದಾಟಿ ನಾವು ಪ್ರಯಾಣಿಸಬೇಕು. ನಮ್ಮಿಂದ ಟಿಕೆಟ್ ದರ ಪಡೆಯುವ ಸಂಸ್ಥೆಯು, ನಿಲ್ದಾಣದಲ್ಲಿ ಮೂಲ ಸೌಕರ್ಯ ಸರಿಪಡಿಸುವತ್ತ ಕೂಡ ಗಮನ ಹರಿಸಬೇಕು ಎಂದರು.

error: