April 24, 2024

Bhavana Tv

Its Your Channel

ಅಕ್ರಮ ಗಣಿಗಾರಿಗೆ ಮೇಲೆ ಅಧಿಕಾರಿಗಳ ದಾಳಿ

ಭಟ್ಕಳ ತಾಲೂಕಿನ ಮಾರುಕೇರಿ ಪಂಚಾಯಿತಿ ವ್ಯಾಪ್ತಿಯ ಕೋಟಖಂಡದಲ್ಲಿ ಅನಧಿಕೃತವಾಗಿ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ, ಭಟ್ಕಳ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದ ಪ್ರಕರಣ ಗುರುವಾರ ನಡೆದಿದೆ.

 ಭಟ್ಕಳ ತಾಲೂಕಿನ ಮಾರುಕೇರಿ  ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಕುರಿತು ಗಣಿ ಇಲಾಖೆಗೆ ದೂರು ಬಂದಿತ್ತು. ಈ ಹಿನ್ನಲೆಯಲ್ಲಿ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ, ಭಟ್ಕಳ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿದೆ. ಸರ್ವೆ ನಂ ೧೬೯ರಲ್ಲಿ ಇಬ್ಬರು ಗಣಿಗಾರಿಕೆ ನಡೆಸುತ್ತಿರುವದು ಕಂಡು ಬಂದಿದೆ. ಅದರಲ್ಲಿ  ಮಂಜಪ್ಪ ನಾಯ್ಕ ಪರವಾನಿಗೆಯನ್ನು ನವೀಕರಣ ಮಾಡದೆ ಗಣಿಗಾರಿಕೆಯಲ್ಲಿ ನಿರತರಾಗಿದ್ದರೆ, ವಸಂತ ನಾಯ್ಕ ಅನಧಿಕೃತವಾಗಿ ಗಣಿಗಾರಿಕೆ ನಡೆಸುತ್ತಿದ್ದರು.  ದಾಳಿ ನಡೆಸಿದ ಅಧಿಕಾರಿಗಳು ಸ್ಥಳದಲ್ಲಿದ್ದ ೨ಟ್ರಿಲರ್ ಮೇಷಿನ್, ಕಲ್ಲು ಸಾಗಾಟ ಮಾಡುತ್ತಿದ್ದ ೩ ಮಿನಿ ಲಾರಿಗಳನ್ನು ವಶಕ್ಕೆ ಪಡೆದಿದೆ. ಆರೋಪಿಗಳ ವಿರುದ್ದ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ನಿಯಮದ ಅನುಸಾರ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಅಧಿಕರಿಗಳು ತಿಳಿಸಿದ್ದಾರೆ.  ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಲಾಖೆಯ ಭೂ ವಿಜ್ಞಾನಿ ಜಯರಾಮ ನಾಯ್ಕ, ಭಟ್ಕಳ ಆರ್‌ಐ ಕೆ. ಶಂಭು, ಗ್ರಾಮ ಲೆಕ್ಕಾಧಿಕಾರಿಗಳಾದ ವಿಶ್ವನಾಥ ಗಾಂವಕರ್, ಚಾಂದಪಾಸಾ ಸ್ಥಳದಲ್ಲಿ ಇದ್ದರು. ವಶಕ್ಕೆ ಪಡೆದ ವಾಹನಗಳನ್ನು ಭಟ್ಕಳ ಗ್ರಾಮೀಣ ಠಾಣೆಯ ವಶಕ್ಕೆ ನೀಡಲಾಗಿದೆ.
error: