April 20, 2024

Bhavana Tv

Its Your Channel

ಕೊರೋನ ನಡುವೆ ಗಗನಕ್ಕೇರಿದ ಅಣಬೆ ಬೆಲೆ ಜನಸಾಮಾನ್ಯನ ಕೈಗೆಟುಕದ ಅಣಬೆ

ಭಟ್ಕಳ : ಭಟ್ಕಳ ಮಲ್ಲಿಗೆ ಬೆಳೆಯ ಜೊತೆಗೆ ಇಲ್ಲಿನ ಕಾಡಿನಲ್ಲಿ ಬೆಳೆಯುವ ವಿಶೇಷ ಕಾಡು ಅಣಬೆಗೆ ಅಷ್ಟೇ ಬೇಡಿಕೆ ಇದ್ದು, ಕೊರೊನಾ ಇಳಿತದ ನಡುವೆ ಜನರು ಕಾಡು ಅಣಬೆ ಖರೀದಿಗೆ ಮುಗಿಬಿದ್ದಿದ್ದಾರೆ. ಭಟ್ಕಳದ ಸುತ್ತಲು ಸ್ಥಳೀಯವಾಗಿ ಹೆಗ್ಗಲಿ ಎಂದು ಕರೆಯಲಾಗುವ ರುಚಿಕಟ್ಟಾದ ಅಣಬೆಗಳಿಗೆ ವಿಶೇಷ ಕಿಮ್ಮತ್ತಿದೆ.ಒಂದೆಡೆ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಇಳಿಕೆ ಕಾಣುತ್ತಿದ್ದು, ಆದರೆ ಅಣಬೆ ಖರೀದಿಗೆ ಯಾವುದರ ಭಯವೂ ಜನರಲ್ಲಿ ಇಲ್ಲದಂತಾಗಿದೆ. ಅಲ್ಲಿನ ಸ್ಥಳೀಯರು ಮಳೆಗಾಲದಲ್ಲಿ ಕಾಡಿನಲ್ಲಿ ಬೆಳೆಯುವ ಹೆಗ್ಗಲಿಗಳನ್ನು, ಬೆಳಗ್ಗಿನ ಜಾವ ಕಿತ್ತು ತರುತ್ತಾರೆ. ಅಲ್ಲಿನ ಅಣಬೆಗಳು ಭಟ್ಕಳ ಪೇಟೆಗೆ ಬಂದರೆ ಎಲ್ಲಿಲ್ಲದ ಬೇಡಿಕೆ ಪಡೆದುಕೊಳ್ಳುತ್ತದೆ. ಈ ಬಾರಿ ದರದಲ್ಲಿಯೂ ಸಹ ಏರಿಕೆಯಿದ್ದು, ಜನರು ಹಣದ ಮುಖ ನೋಡದೇ ಖರೀದಿಗೆ ಮುಗಿಬೀಳುತ್ತಿರುವುದು ವಿಶೇಷವಾಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರು ಮನೆಯಿಂದ ನಗರಕ್ಕೆ ಬರಲು ಭಯಪಡುತ್ತಿದ್ದ ದಿನಗಳಿದ್ದು, ಆದರೆ ಈಗ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಿಂದ ನಾಲ್ಕು ಕಾಸು ಸಂಪಾದನೆ ಮಾಡುವ ಹಿನ್ನೆಲೆ ಕಾಡು ಅಣಬೆಯ ಮಾರಾಟಕ್ಕಿಳಿದಿದ್ದಾರೆ. ಪೌಷ್ಠಿಕಾಂಶದ ಕಾರಣದಿಂದಾಗಿ ಇದರ ಮಹತ್ವ ಇನ್ನಷ್ಟು ಹೆಚ್ಚಿದೆ.ಮಸಾಲಾ, ಫ್ರೈ, ಬಿರಿಯಾನಿಗೂ ಅಣಬೆ ಸೈ ಎನ್ನಿಸಿಕೊಳ್ಳುತ್ತದೆ. ಭಾರತೀಯ ಆಹಾರ ಪದಾರ್ಥಗಳಿಗಷ್ಟೇ ಅಲ್ಲದೇ ಚೈನಿಸ್ ಖಾದ್ಯದ ಜೊತೆಗೆ ಒಗ್ಗಿಕೊಂಡಿದೆ.ಕೊರೊನಾ ನಡುವೆಯೂ ಕಾಡು ಅಣಬೆ ಖರೀದಿಗೆ ಮುಗಿ ಬಿದ್ದ ಜನರುವಿಶೇಷವಾಗಿ ಭಟ್ಕಳದ ನವಾಯತ ಸಮುದಾಯದ ಜನರು ಪ್ರತಿ ವರ್ಷ ಜುಲೈ ಸಂದರ್ಭದಲ್ಲಿ ಬರುವ ಹೆಗ್ಗಲಿಗಾಗಿ ಮುಗಿಬೀಳುತ್ತಿದ್ದಾರೆ,

error: