April 19, 2024

Bhavana Tv

Its Your Channel

ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳದವರಿಂದ ಆಶಾಕಾರ್ಯಕರ್ತೆಯರಿಗೆ ಗುಣಮಟ್ಟದ ಬ್ಯಾಗ್ ವಿತರಣೆ

ಭಟ್ಕಳ; ಭಟ್ಕಳದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳವು ಕೋವಿಡ್ ವಾರಿಯರ್ಸ್ಗಳಲ್ಲಿ ಪ್ರಮುಖ ಗುಂಪುಗಳಲ್ಲೊoದಾದ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಭಟ್ಕಳ ತಾಲೂಕಿನ ಎಲ್ಲಾ ಆಶಾಕಾರ್ಯಕರ್ತೆಯರಿಗೆ ಗುಣಮಟ್ಟದ ಬ್ಯಾಗುಗಳನ್ನು ನೀಡಿ ಸಮಾಜಮುಖಿ ಸಂಘಟನೆಯಾಗಿ ನಿಂತಿರುವುದು ಎಲ್ಲರೂ ಹೆಮ್ಮೆಪಡುವ ವಿಚಾರವಾಗಿದೆ.ಈ ಕಾರ್ಯವು ತಾಲೂಕಿನ ಸಮಸ್ತ ಸರಕಾರಿ ನೌಕರರ ಘನತೆಯನ್ನು ಹೆಚ್ಚಿಸಿದೆ.
ಶತಮಾನದ ಇತಿಹಾಸವನ್ನುಹೊಂದಿರುವ ನೌಕರರ ಹೆಮ್ಮೆಯ ಸರಕಾರಿ ನೌಕರರ ಸಂಘ,ಬೆAಗಳೂರು, ಇದರ ಭಟ್ಕಳ ತಾಲೂಕು ಘಟಕವು ನೌಕರರ ಹಿತಾಸಕ್ತಿಯ ಜೊತೆ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.

ಮಿನಿ ವಿಧಾನ ಸೌಧದ ಆವರಣದಲ್ಲಿ ಭಟ್ಕಳ ಸರಕಾರಿ ನೌಕರರ ಸಂಘವು ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಬ್ಯಾಗ್ ವಿತರಣೆ ಮಾಡುವ ಸರಳ ಹಾಗೂ ಶಿಸ್ತುಬದ್ಧ ಕಾರ್ಯಕ್ರಮವನ್ನು ಕೋವಿಡ್ ನಿಯಮ ಪಾಲನೆಯೊಂದಿಗೆ ಹಮ್ಮಿಕೊಂಡಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷರಾದ ಮೋಹನ ನಾಯ್ಕ ರವರು ಮಾತನಾಡಿ ನಮ್ಮ ಸಂಘವು ನೌಕರರ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನೀಲ್ ಬಿ ನಾಯ್ಕ ರವರು ಸಾಂಕೇತಿಕವಾಗಿ ಆಶಾ ಕಾರ್ಯಕರ್ತೆಯರಿಗೆ ಬ್ಯಾಗ್ ವಿತರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕಿನ ನೌಕರರ ಸಂಘವು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ, ಇಂತಹ ಕಾರ್ಯಗಳಿಗೆ ನಾನು ಸದಾ ಬೆಂಬಲ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಭಟ್ಕಳದ ಮಾನ್ಯ ಸಹಾಯಕ ಆಯುಕ್ತರಾದ ಮಮತಾ ದೇವಿಯವರು ಮಾತನಾಡಿ ಇಂತಹ ಉತ್ತಮ ಕಾರ್ಯವನ್ನು ಸದಾ ಬೆಂಬಲಿಸುವುದಾಗಿ ತಿಳಿಸಿದರು. ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಯವರಾದ ಸವಿತಾ ಕಾಮತ್ ಮಾತನಾಡಿ ಕೋವಿಡ್ ಸಂಕಷ್ಟದ ಸಮಯದಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆ ಯವರನ್ನು ಗುರುತಿಸುವ ಕಾರ್ಯ ಅತ್ಯಂತ ಶ್ಲಾಘನೀಯ ವಿಚಾರವಾಗಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ಪರವಾಗಿ ಮಾತನಾಡಿದ ಆಶಾ ಕಾರ್ಯಕರ್ತೆ ಗೀತಾ ಗಣಪತಿ ನಾಯ್ಕ ಶಿರಾಲಿ, ಕೋವಿಡ್ ಸಮಯದಲ್ಲಿ ಮಾಡಿದ ಕೆಲಸ ನೋಡಿ ನಮ್ಮಲ್ಲರಿಗೂ ಬ್ಯಾಗ್ ವಿತರಿಸಿರುವುದು ಸಂತಸವಾಗಿದೆ.ಆರೋಗ್ಯ ಸಮೀಕ್ಷೆ ಸಮಯದಲ್ಲಿ ಸರಿಯಾದ ಮಾಹಿತಿ ನೀಡದೆ ಬೈದು ವಾಪಸ್ ಕಳುಹಿಸಿ ಅವಮಾನಿಸಿರುವವರ ಮಧ್ಯೆ ಸಮಾಜದ ಹಿತಕ್ಕಾಗಿ ಸೇವೆ ಮಾಡುತ್ತಿರುವ ವಿಚಾರ ಗಮನದಲ್ಲಿಟ್ಟುಕೊಂಡು ಯಾವುದೇ ಬೇಸರವಿಲ್ಲದೆ ಕೆಲಸ ಮಾಡುತ್ತಾ ಬಂದಿದ್ದೇವೆ.ನಮ್ಮಿAದಾಗುವ ಕೆಲಸಕ್ಕೆ ತಕ್ಕಂತೆ ಸಂಬಳ ಸಿಗದಿರುವುದು ಬೇಸರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ಪಕ್ಷದ್ದಾಗಿದ್ದು, ನಮ್ಮ ಬಗ್ಗೆ ಗಮನ ನೀಡಿ ಸೇವಾ ಭದ್ರತೆ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಗಣೇಶ ಹೆಗಡೆ, ಖಜಾಂಚಿ ಶ್ರೀಮತಿ ವಿದ್ಯಾ ಹೆಗಡೆ, ರಾಜ್ಯ ಪರಿಷತ್ ಸದಸ್ಯರಾದ ಪ್ರಕಾಶ ಶಿರಾಲಿ, ಉಪಾಧ್ಯಕ್ಷರಾದ ಶ್ರೀಮತಿ ಭಾಗೀರಥಿ ನಾಯ್ಕ, ಆಂತರಿಕ ಲೆಕ್ಕ ಪರಿಶೋಧಕರಾದ ಮಂಜುನಾಥ ನಾಯ್ಕ, ಸದಸ್ಯರಾದ ಶಂಶುದ್ದೀನ್, ವಾಸುದೇವ ಮೊಗೇರ, ಸುನೀಲ್ ಕೊಚರೀಕರ್, ಶ್ರೀಮತಿ ರಜನಿ ದೇವಾಡಿಗ,ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಭಟ್ಕಳದ ಅಧ್ಯಕ್ಷರಾದ ಉಲ್ಲಾಸ ನಾಯ್ಕ ಹಾಜರಿದ್ದರು.ಕಾರ್ಯದರ್ಶಿಯವರಾದ ಗಣೇಶ ಹೆಗಡೆ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.

error: