April 20, 2024

Bhavana Tv

Its Your Channel

ಐ.ಆರ್.ಬಿ ಅವೈಜ್ಞಾನಿಕ ಕಾಮಗಾರಿ ಭಟ್ಕಳ ಸಂಶುದ್ದೀನ್ ವೃತ್ತಕ್ಕೆ ನುಗ್ಗಿದ ನೀರು; ಹೆದ್ದಾರಿ ಜಲಾವೃತ

ಭಟ್ಕಳ: ಶನಿವಾರ ತಡರಾತ್ರಿಯಿಂದ ಧಾರಾಕಾರ ಮಳೆ ಸುರಿದ ಹಿನ್ನಲೆ ಹೆದ್ದಾರಿ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಹೊಳೆಯಂತಾದ ಘಟನೆ ಭಟ್ಕಳ ಪಟ್ಟಣದಲ್ಲಿ ನಡೆದಿದೆ.

ಭಟ್ಕಳ ಪಟ್ಟಣದ ಸಂಶುದ್ದೀನ್ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರ ಮೇಲೆ ಮಳೆಯ ನೀರು ಸಂಗ್ರಹಗೊoಡಿದ್ದು ಹೆದ್ದಾರಿ ಸವಾರರು ಪರದಾಡುವಂತಾಗಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಐಆರ್‌ಬಿ ವತಿಯಿಂದ ಕೈಗೊಳ್ಳಲಾಗಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯವನ್ನ ಅವೈಜ್ಞಾನಿಕ ರೀತಿಯಲ್ಲಿ ನಡೆಸಿರುವುದರಿಂದಲೇ ನೀರು ನಿಲ್ಲುವಂತಾಗಿದೆ.
ಸoಶುದ್ದೀನ್ ಸರ್ಕಲ್, ರಂಗಿನಕಟ್ಟಾ ಹೆದ್ದಾರಿ ಪ್ರದೇಶಗಳೆಲ್ಲವೂ ಸಂಪೂರ್ಣ ನೀರಿನಿಂದಾವ್ರತಗೊoಡಿದ್ದು, ವಾಹನ ಸವಾರರು ಇದರಿಂದ ಭಾರೀ ಸಮಸ್ಯೆ ಅನುಭವಿಸುವಂತಾಯಿತು. ಇದರಿಂದಾಗಿ ಗಂಟೆಗಟ್ಟಲೇ ಸಂಚಾರ ದಟ್ಟಣೆ ಕೂಡ ಉಂಟಾಗಿದ್ದು, ಹಾಗೋ ಹಿಗೋ ಸಾಹಸಪಟ್ಟು ನೀರಿನಲ್ಲಿಯೇ ವಾಹನ ಚಲಾಯಿಸಿಕೊಂಡು ಸವಾರರು ಚಲಿಸಬೇಕಾಯಿತು.
ಸಂಶುದ್ದೀನ್ ಸರ್ಕಲ್ ಬಳಿಯಲ್ಲಿನ ಒಳ ಚರಂಡಿ ಹಾಗೂ ಮಳೆ ನೀರು ಹರಿಯಲು ಮಾಡಲಾದ ಚರಂಡಿಯಲ್ಲಿ ಪುರಸಭೆಯ ನಿಷ್ಕಾಳಜಿಯ ಕಾರಣದಿಂದ ಹೂಳು ತುಂಬಿಕೊoಡಿದ್ದು, ಗಂಟೆಗಟ್ಟಲೇ ಒಂದೇ ಸಮನೆ ರಾತ್ರಿಯಿಂದ ಸುರಿದ ಮಳೆಗೆ ಚರಂಡಿಯಲ್ಲಿ ತುಂಬಿದ ನೀರು ರಸ್ತೆಯ ತುಂಬೆಲ್ಲ ಹರಿದ ಪರಿಣಾಮ ಸಂಶುದ್ದೀನ್ ಸರ್ಕಲ್ ಜಲಾವೃತಗೊಂಡಿತ್ತು.
ಇನ್ನು ರಂಗಿನಕಟ್ಟೆ ಪ್ರದೇಶವೂ ಸಹ ಇದೇ ರೀತಿಯ ಅವ್ಯವಸ್ಥೆಯಿಂದ ಕೂಡಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆಯ ನೀರು ರಸ್ತೆಗೆ ಬರುತ್ತಿದೆ. ಇನ್ನು ಹೆದ್ದಾರಿ ಅಕ್ಕ ಪಕ್ಕದ ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದ್ದು, ಇದು ಪ್ರತಿ ವರ್ಷದ ಪುನರಾವರ್ತಿತವಾಗಿದೆಯೋ ಹೊರತು ಜನಪ್ರತಿನಿಧಿಗಳಾಗಲಿ, ಇಲಾಖೆಯಾಗಲಿ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

error: