July 26, 2021

Bhavana Tv

Its Your Channel

ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿತ:ಇಬ್ಬರು ಆರೋಪಿಗಳ ಬಂಧನ

ಭಟ್ಕಳ: ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದು ಗಾಯಪಡಿಸಿದ್ದಲ್ಲದೇ, ಜಾತಿ ಹೆಸರನ್ನು ಹೇಳಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿರುವ ಬಗ್ಗೆ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ತಾಲೂಕಿನ ಹೆಬಳೆ ಗಾಂಧಿನಗರದ ಜಗದೀಶ ವಾಸು ಮೊಗೇರ ಹಾಗೂ ಇಲ್ಲಿನ ಹುರುಳಿಸಾಲ ನಿವಾಸಿ ಈಶ್ವರ ಯಾನೆ ಸಣ್ಣತಮ್ಮ ರಾಮಾ ನಾಯ್ಕ ಎಂದು ಗುರುತಿಸಲಾಗಿದೆ. ಇವರು ದಿನೇಶ ಗೊಂಡ ಹಾಗೂ ಮಾದೇವ ಗೊಂಡ ಇವರುಗಳಿಗೆ ಹೊಡೆದಿದ್ದಲ್ಲದೇ, ದಿನೇಶ ರಾಮಾ ಗೊಂಡ ಈತನ ಬೆನ್ನಿಗೆ ಆರೋಪಿ ಈಶ್ವರ ಯಾನೆ ಸಣ್ಣತಮ್ಮ ರಾಮಾ ನಾಯ್ಕ ಈತನು ಚಾಕುವಿನಿಂದ ಜೋರಾಗಿ ಇರಿದು ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಎಸೈ ಭರತ್ ತನಿಖೆ ಕೈಗೊಂಡಿದ್ದಾರೆ.

error: