July 26, 2021

Bhavana Tv

Its Your Channel

ಭಟ್ಕಳ ಸಿದ್ಧಾರ್ಥ ಪಿಯು ಕಾಲೇಜಿನಲ್ಲಿ 253 ವಿದ್ಯಾರ್ಥಿಗಳು ಉತ್ತೀರ್ಣ

ಟ್ಕಳ : ಸಿದ್ಧಾರ್ಥ ಪಿಯು ಕಾಲೇಜು, ಭಟ್ಕಳ ಇದರ ದ್ವಿತೀಯ ಪಿಯುಸಿ ೨೦೨೧ ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟೂ ೨೫೩ ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೇಧಾ ಜಿ. ಹೆಗಡೆ, ಉಷಾ ಎ ನಾಯ್ಕ, ವಿನುತಾ ಎಸ್. ಭಟ್, ಶುಷ್ಮೀತಾ ವಿ. ನಾಯ್ಕ, ಪ್ರತೀಕ್ ಪಿ. ಶಾನಭಾಗ್, ವಿವೇಕಾನಂದ ಎಮ್. ನಾಯ್ಕ, (ವಿಜ್ಞಾನ ವಿಭಾಗ) ಹಾಗೂ ಅಮೂಲ್ಯ ಪಿ. ಶೆಟ್ಟಿ (ವಾಣಿಜ್ಯ ವಿಭಾಗ) ದಲ್ಲಿ ೬೦೦ ಕ್ಕೆ ೬೦೦ ಅಂಕ ಪಡೆದಿದ್ದಾರೆ. ೨೦ ವಿದ್ಯಾರ್ಥಿಗಳು ೬೦೦ ಅಂಕಗಳಿಗೆ ೫೯೦ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಹಾಗೂ ೧೩೦ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

error: