April 20, 2024

Bhavana Tv

Its Your Channel

ನಿರ್ಲಕ್ಷತನದ ಚಾಲನೆ, ಆರೋಪಿತನಿಗೆ ೮ ತಿಂಗಳು ಸಜೆ ಹಾಗೂ ೩೫೦೦ ರೂಪಾಯಿಗಳ ದಂಢ

ಭಟ್ಕಳ: ಖಾಸಗೀ ಶಾಲಾ ವಾಹನವೊಂದರ ಚಾಲಕ ನಿರ್ಲಕ್ಷತನದಿಂದ ಚಾಲನೆ ಮಾಡಿ ೨೦೧೫ರಲ್ಲಿ ಬಂದರ ರಸ್ತೆಯಲ್ಲಿ ಅಪಘಾತಪಡಿಸಿ ಓರ್ವರ ಸಾವಿಗೆ ಕಾರಣನಾಗಿದ್ದಲ್ಲದೇ ದ್ವಿಚಕ್ರ ವಾಹನ, ರಿಕ್ಷಾ ಮತ್ತು ಕಾರುಗಳಿಗೆ ಹಾನಿಯುಂಟು ಮಾಡಿದ್ದ ಪ್ರಕರಣವನ್ನು ತನಿಖೆ ನಡೆಸಿದ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶ ಫವಾಜ್ ಪಿ.ಎ. ಅವರು ಆರೋಪಿತನಿಗೆ ೮ ತಿಂಗಳು ಸಜೆ ಹಾಗೂ ೩೫೦೦ ರೂಪಾಯಿಗಳ ದಂಢ ವಿಧಿಸಿ ತೀರ್ಪು ನೀಡಿದ್ದಾರೆ.

೨೦೧೫ರ ಜೂನ್ ೧೮ರಂದು ಮಧ್ಯಾಹ್ನದ ಸಮಯ ಬಂದರ ರಸ್ತಯಿಂದ ಶಂಶುದ್ದೀನ್ ಸರ್ಕಲ್ ಕಡೆಗೆ ಬರುತ್ತಿದ್ದ ಶಾಲಾ ಟೆಂಪೋ ಚಾಲಕ ಸೈಫುಲ್ಲಾ ಮೊಹಿನುದ್ದೀನ್ ಕೊಜಾಪು ಶಾಬಂದ್ರಿ ಈತನು ಟೆಂಪೋವನ್ನು ಬೈಕ್ ನಿಲ್ಲಿಸಿಕೊಂಡು ಕಾಯುತ್ತಿದ್ದ ವ್ಯಕ್ತಿಯೋರ್ವರಿಗೆ ಡಿಕ್ಕಿ ಹೊಡೆದು ಅವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದರೆ ನಂತರ ಒಂದು ಬೈಕು, ಒಂದು ಅಟೋ ರಿಕ್ಷಾ, ಎರಡು ಮಾರುತಿ ವ್ಯಾನ್, ಒಂದು ಕಾರಿಗೆ ಜಖಂ ಗೊಳಿಸಿದ್ದಲ್ಲದೇ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಸಿ ಹಾನಿಗೊಳಿಸಿದ್ದು ದೇವಸ್ಥಾನವೊಂದರ ಕಂಪೌAಡ್ ಕೂಡಾ ಹಾನಿಯಾಗಿತ್ತು. ನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ತನಿಖೆಯನ್ನು ನಡೆಸಿದ ನ್ಯಾಯಾಲಯ ಆರೋಪಿತನಿಗೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಒಟ್ಟೂ ೮ ತಿಂಗಳು ಸಜೆ ಹಾಗೂ ರೂ.೩,೫೦೦-೦೦ ದಂಡ ವಿಧಿಸಿ ತೀರ್ಪು ನೀಡಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ವಿವೇಕ ಆರ್. ನಾಯ್ಕ ಅವರು ವಾದಿಸಿದ್ದರು.

error: