April 24, 2024

Bhavana Tv

Its Your Channel

ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ವತಿಯಿಂದ ಅಭಿನಂದನೆ

ಭಟ್ಕಳ: ಕೋವಿಡ್-೧೯ ಲಾಕ್‌ಡೌನ್ ಸಂದರ್ಭದಲ್ಲಿ ಭಟ್ಕಳ ಮುಸ್ಲಿಂ ಯುತ್ ಫೆಡರೇಶೆನ್ ಸಲ್ಲಿಸಿದ ಉತ್ತಮ ಸೇವೆಗಾಗಿ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ವತಿಯಿಂದ ಅಭಿನಂದಿಸಲಾಯಿತು.
ತಂಝೀಮ್ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ೧೯೯೩ರಲ್ಲಿ ಸ್ಥಾಪಿತವಾದ ಭಟ್ಕಳದ ವಿವಿಧ ಭಾಗಗಳಲ್ಲಿನ ಕ್ರೀಡಾ ಸಂಘಟನೆಗಳ ಒಕ್ಕೂಟವಾಗಿರುವ ಭಟ್ಕಳ ಮುಸ್ಲಿಂ ಯುತ್ ಫೆಡರೇಷನ್ ಕೋವಿಡ್ ಸಂದರ್ಭದಲ್ಲಿ ಭಟ್ಕಳ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜನರ ಸೇವೆಗಾಗಿ ತನ್ನನ್ನು ತೊಡಗಿಸಿಕೊಂಡಿತ್ತು.
ಜನರು ಲಾಕ್‌ಡೌನ್‌ನಿಂದ ಮನೆಗಳಿಂದ ಹೊರ ಬರುವುದು ಕಷ್ಟವಾಗಿದ್ದಾಗ ಒಕ್ಕೂಟದ ಯುವಕರು ಅಗತ್ಯವಿರುವವರಿಗೆ ಸೂಕ್ತ ಸಹಕಾರ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪಡಿತರ ಕಿಟ್‌ಗಳನ್ನು ಮನೆ ಮನೆಗೆ ತಲುಪಿಸುವುದು ಸೇರಿದಂತೆ ಜನರಲ್ಲಿ ಜಾಗೃತಿ ಮೂಡಿಸುವುದು, ಮೊಬೈಲ್ ಕ್ಲಿನಿಕ್ ಮೂಲಕ ಮನೆ-ಮನೆಗೆ ತೆರಳಿ ಚಿಕಿತ್ಸೆ ನೀಡುವುದು ಇತ್ಯಾದಿಗಳನ್ನು ಮಾಡಿ ಜನರಿಗೆ ಅತೀ ಹೆಚ್ಚಿನ ಸಹಾಯ ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯ ಪಡಲಾಯಿತು.
ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಸೈಯದ್ ಪರ್ವೇಜ್ ಎಸ್.ಎಂ., ಉಪಾಧ್ಯಕ್ಷ ಮೊಹ್ತೆಶಮ್, ಬರ್ನಿ ಜಾಫರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ನದ್ವಿ, ಮಾಜಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಮುಹಿದ್ದೀನ್ ಖರೂರಿ, ಇನಾಯತುಲ್ಲಾ ಶಾಬಂದ್ರಿ, ಜಿಲಾನಿ ಶಾಬಂದ್ರಿ, ಮೌಲ್ವಿ ಯಾಸಿರ್ ಬರ್ಮವರ್ ನದ್ವಿ, ಮೊಹ್ತೆಶಮ್ ಜಾನ್ ಅಬ್ದುಲ್ ರೆಹಮಾನ್, ಎಸ್.ಜೆ. ಸೈಯದ್ ಹಾಶಿಮ್, ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ಅಧ್ಯಕ್ಷ ಅಝೀಝರ‍್ರಹ್ಮಾನ್ ರುಕ್ನುದ್ದೀನ್ ನದ್ವಿ, ಪ್ರಧಾನ ಕಾರ್ಯದರ್ಶಿ ಉಮೈರ್ ರುಕ್ನುದ್ದೀನ್, ಉಪಾಧ್ಯಕ್ಷ ಮೌಲ್ವಿ ಅಂಜುಮ್ ಗಂಗಾವಳಿ ನದ್ವಿ ಮತ್ತು ಇತರ ಪದಾಧಿಕಾರಿಗಳು ಆಬಿನಂದನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: