September 27, 2021

Bhavana Tv

Its Your Channel

ಹಿರಿಯ ನಾಯಕ ಶ್ರೀ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿದ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೊಕ.

ಹೊನ್ನಾವರ ; ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮತ್ತು ಕೇಂದ್ರದ ಮಾಜಿ ಸಚಿವ ಶ್ರೀ ಆಸ್ಕರ್ ಫರ್ನಾಂಡಿಸ್ ರವರ ನಿಧನದ ಸುದ್ದಿ ತುಂಬಾ ದುಃಖವನ್ನುಂಟುಮಾಡಿದೆ. ಸರಳ ಸಜ್ಜನ ನಿಗರ್ವಿ ರಾಜಕಾರಣಿ ಆಗಿದ್ದ ಅವರು, ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ನಮ್ಮ ಕಾರ್ಯಾಲಯಕ್ಕೆ ಆಗಮಿಸಿ ಕೆಲ ಕಾಲ ಕುಳಿತು ಎಲ್ಲರನ್ನು ಹುರಿದುಂಬಿಸಿದ್ದು ತುಂಬಾ ಸಂತಸವನ್ನುAಟು ಮಾಡಿತ್ತು. ಒಮ್ಮೆ ನಮ್ಮ ಹಿರಿಯ ನಾಯಕ ಶ್ರೀ ಆರ್ ವಿ ದೇಶಪಾಂಡೆಯವರೊAದಿಗೆ ಪ್ರಯಾಣಿಸುತ್ತಿರುವಾಗ ಹೊನ್ನಾವರದಲ್ಲಿ ಸ್ವಾಗತಿಸಿದ್ದು ಈ ಸಂದರ್ಭದಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ ಎಂದು ಶಿವಾನಂದ ಹೆಗಡೆ ಕಡತೊಕ ಅವರನ್ನು ನೆನೆಸಿ ಕೊಂಡಿದ್ದಾರೆ. ಆಸ್ಕರ್ ಫರ್ನಾಂಡಿಸ್ ರವರ ನಿಧನದಿಂದ ಸಮಾಜಕ್ಕೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಹಿರಿಯ ನಾಯಕ ಶ್ರೀ ಆಸ್ಕರ್ ಫರ್ನಾಂಡಿಸ್ ರವರು ಇನ್ನು ನೆನಪು ಮಾತ್ರ. ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸಿದ್ದಾರೆ.

error: