April 26, 2024

Bhavana Tv

Its Your Channel

ದಿನಕರ ಮಂಗಳ ಗೊಂಡರವರಿಗೆ ಪೊಲೀಸ್ ಇಲಾಖೆ ಪ್ರಮಾಣ ಪತ್ರ ನೀಡಿ ಗೌರವ

ಭಟ್ಕಳ: ಕಳೆದ ಆ.೩೧ರಂದು ಭಟ್ಕಳ ತಾಲೂಕಿನ ಬಂದರ್ ರೋಡ್ ಎಕ್ಸಿಸ್ ಬ್ಯಾಂಕ್ ಎಟಿಮ್ ಅಸಮರ್ಪಕ ನಿರ್ವಹಣೆಯಿಂದಾಗಿ ಹಣ ಭರಣ ಸಾಧ್ಯವಾಗದೇ ಲಕ್ಷಾಂತರ ರುಪಾಯಿ ಹಣವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ವ್ಯಕ್ತಿಯೋರ್ವನಿಗೆ, ಮಷಿನ್‌ನಲ್ಲಿ ಸಿಲುಕಿಕೊಂಡಿದ್ದ ಹಣವನ್ನು ಪೊಲೀಸರ ಮೂಲಕ ವಾಪಸ್ಸು ನೀಡಿ ಪ್ರಾಮಾಣಿಕತೆ ಮರೆದ ತಾಲೂಕಿನ ಬೆಳಕೆ ನಿವಾಸಿ ದಿನಕರ ಮಂಗಳ ಗೊಂಡ ಇವರಿಗೆ ಪೊಲೀಸ್ ಇಲಾಖೆ ಪ್ರಮಾಣ ಪತ್ರ ನೀಡಿ ಗೌರವಿಸಿದೆ.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ ಇಲ್ಲಿನ ಡಿವಾಯ್‌ಎಸ್ಪಿ ಕಚೇರಿಯಲ್ಲಿ ಪ್ರಮಾಣ ಪತ್ರ ವಿತರಿಸಿದರು. ಡಿವಾಯ್ ಎಸ್ಪಿ ಕೆ.ಯು.ಬೆಳ್ಳಿಯಪ್ಪ, ಸಿಪಿಐ ದಿವಾಕರ, ಎಸೈ ಹನುಮಂತ ಕುಡಗುಂಟಿ ಉಪಸ್ಥಿತರಿದ್ದರು.
ಕಳೆದ ಆ.೩೧ರಂದು ತಾಲೂಕಿನ ನವಾಯತ್ ಕಾಲೋನಿಯ ಬಿಲಾಲ್ ಎಂಬಾತ ರು.೨ ಲಕ್ಷ ಹಣವನ್ನು ಗೊತ್ತಾದ ಖಾತೆಯೊಂದಕ್ಕೆ ಭರಣ ಮಾಡಲು ಇಲ್ಲಿನ ಎಕ್ಸಿಸ್ ಬ್ಯಾಂಕ್ ಎಟಿಎಮ್‌ಗೆ ತೆರಳಿದ್ದರು. ಆದರೆ ಕೇವಲ ರು.೨೪ ಸಾವಿರ ರುಪಾಯಿ ಖಾತೆಗೆ ಜಮೆಯಾಗಿದ್ದು, ಇದರಿಂದ ಬಿಲಾಲ್ ಹಣ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದರು. ಕೆಲವೇ ಹೊತ್ತಿನ ನಂತರ ತನ್ನ ಹಣ ವರ್ಗಾವಣೆ ಕೆಲಸ ಕಾರ್ಯದ ನಿಮಿತ್ತ ಎಟಿಎಮ್‌ಗೆ ಬಂದ ಇಲ್ಲಿನ ಬೆಳಕೆಯ ನಿವಾಸಿ ದಿನಕರ ಮಂಗಳ ಗೊಂಡ ಎಂಬ ಯುವಕ ಮಷಿನ್ ಒಳಗೆ ಹಣ ಸಿಲುಕಿಕೊಂಡಿದ್ದನ್ನು ಕಂಡು ಅದನ್ನು ಪೊಲೀಸರಿಗೆ ನೀಡಿದ್ದರು. ನಂತರ ಸಿಸಿಟಿವಿ ಮೂಲಕ ಹಣ ಕಳೆದುಕೊಂಡ ವ್ಯಕ್ತಿಯನ್ನು ಪತ್ತೆ ಹಚ್ಚಿ, ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಹಣಕಳೆದುಕೊಂಡ ಬಿಲಾಲ್‌ಗೆ ಹಸ್ತಾಂತರಿಸಲಾಗಿತ್ತು.

error: