April 19, 2024

Bhavana Tv

Its Your Channel

ಶ್ರೀವಲಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ನಾಯ್ಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ

ಭಟ್ಕಳ: ಶ್ರೀವಲಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪವಿತ್ರಾ ಜಯಕರ ನಾಯ್ಕ ದಿಶಾ ಭಾರತ ಸಂಸ್ಥೆ ಹಾಗೂ ಈಸ್ಟ್ ವೆಸ್ಟ್ ಇನ್ಸಸ್ಟಿಟ್ಯೂ ಆಫ್ ಟೆಕ್ನಾಲಜಿ ಸಂಸ್ಥೆ ಜಂಟಿಯಾಗಿ ಸ್ವಾತಂತ್ರ‍್ಯಾ ನಂತರದ ಭಾರತ ಎನ್ನುವ ವಿಷಯದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಪವಿತ್ರಾ ನಾಯ್ಕ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.
ಭಾರತ ದೇಶವ ೭೫ನೇ ಸ್ವಾತಂತ್ರ‍್ಯ ವರ್ಷಾಚರಣೆಯಲ್ಲಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಸಂಸ್ಥೆ ಕಾಲೇಜು, ಪಿ.ಯು.ಸಿ. ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಕನ್ನಡ, ಇಂಗ್ಲೀÀ್ಷನಲ್ಲಿ ಆನ್‌ಲೈನ್ ಸ್ಪರ್ಧೆಯನ್ನು ಏರ್ಪಡಿಸಿತ್ತು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪವಿತ್ರಾ ಜಯಕರ ನಾಯ್ಕ ಈಕೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಕೀರ್ತಿ ತಂದಿದ್ದಾಳೆ. ಬಹುಮಾನ ವಿತರಣಾ ಕಾರ್ಯಕ್ರಮವು ಅ.೩೦ರಂದು ಬೆಳಿಗ್ಗೆ ಬೆಂಗಳೂರಿನ ಈಸ್ಟ್ ವೆಸ್ಟ್ ಇನ್ಸಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಈಕೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ, ಬೋದಕ ವರ್ಗ ಅಭಿನಂದಿಸಿದ್ದಾರೆ.

error: