April 25, 2024

Bhavana Tv

Its Your Channel

ಪೊಲೀಸ್ ಬಂದೋಬಸ್ತ್ ನಲ್ಲಿ ಭಟ್ಕಳ ಪುರಸಭೆ ಅಂಗಡಿಗಳು ಬಾಡಿಗೆಗೆ ಹರಾಜು

ಭಟ್ಕಳ:ಇಲ್ಲಿನ ಪುರಸಭೆಯ ೨೭ ಖಾಲಿ ಇರುವ ಹಳೇ ಅಂಗಡಿಗಳ ಪೈಕಿ ಅಂಗಡಿಗಳ ಹರಾಜು ೮ ಪ್ರಕ್ರಿಯೆಯನ್ನು ಸಹಾಯಕ ಆಯುಕ್ತ ಮಮತಾದೇವಿ ಸಮ್ಮುಖದಲ್ಲಿ ಬಿಗು ಪೊಲೀಸ್ ಬಂದೋಬಸ್ತನೊoದಿಗೆ ಪುರಸಭಾ ಸಭಾಭವನದಲ್ಲಿ ನಡೆಸಲಾಯಿತು.


ಹರಾಜು ೮ ಅಂಗಡಿಗಳು ನಿಗದಿಪಡಿಸಲಾದ ಸರ್ಕಾರಿ ದರಕ್ಕಿಂತ ಅತಿ ಹೆಚ್ಚು ಬಾಡಿಗೆಗೆ ಹೋಗಿರುವುದು ಉಪಸ್ಥಿತರಿದ್ದ ಅಧಿಕಾರಿಗಳ ಮತ್ತು ಪುರಸಭೆ ಆಡಳಿತದ ಹುಬ್ಬೇರುವಂತೆ ಮಾಡಿತು, ಅಂಗಡಿ ನಂ. ೪೮೧/೬ರ ೮೧ ಚ, ಅಡಿ ಅಂಗಡಿಗೆ ನಿಗದಿಪಡಿಸಿದ್ದು ೭ ೨೧೦೩ ಅವರ ಹರಾಜಿನಲ್ಲಿ ಈ ೧೪ ಸಾವಿರಕ್ಕೆ ತೆಗೆದುಕೊಳ್ಳಲಾಯಿತು ಅದರಂತೆ ಅಂಗಡಿ ನಂ. ೪೮೧/೫ರ ೧೩೩ ಚ. ಅಡಿ ಅಂಗಡಿಗೆ ನಿಗದಿಪಡಿಸಿದ್ದು ೨ ೨೮೩೮. ಆದರೆ, ಹರಾಜಿನಲ್ಲಿ ಬಾಡಿಗೆ ದಕ್ಕಿದ್ದು ? ೨೧ ಸಾವಿರ, ೪೮೮ ನಂಬರಿನ ೨೪೧ ಚ.ಅಡಿ ಅಂಗಡಿಗೆ ನಿಗದಿಪಡಿಸಿದ್ದು ೫ ೩೮೮೪, ಹರಾಜಿನಲ್ಲಿ ಕೆ ೧೬೧೦೦. ೮೯ ಚ.ಅಡಿಯುಳ್ಳ ೬ನೇ ನಂಬರಿನ ಅಂಗಡಿಗೆ ನಿಗದಿಪಡಿಸಿದ್ದು ಕ ೧೭೫೪, ಆದರೆ ಹರಾಜು ಆಗಿರುವುದು ಈ ೪೭೦೦, ೨೪೮ ಚ. ಅಡಿಯುಳ್ಳ ೪೭೦/೧ನೇ ಅಂಗಡಿ ನಿಗದಿತ ಬಾಡಿಗೆ ೭ ೩೯೬೫ ಆದರೆ ಹರಾಜಿನಲ್ಲಿ ೨ ೧೨,೧೦೦ ಹೋಗಿದೆ, ೧೯೮ ಚ. ಅಡಿ ಇರುವ ೪೯೦ ನಂ. ಅಂಗಡಿಯ ನಿಗದಿತ ಬಾಡಿಗೆ ೩೫೭೪ ಇದ್ದರೆ, ಹರಾಜಿನಲ್ಲಿ ೧೧,೬೦೦ ದಕ್ಕಿತು. ೬೭ ಚ. ಅಡಿಯುಳ್ಳ ೪೯೦/೧ ಅಂಗಡಿಗೆ ನಿಗದಿತ ಬಾಡಿಗೆ ೨ ೯೩೧ ಹರಾಜಿನಲ್ಲಿ ಕೆ ೧೦೫೦೦ ಬಾಡಿಗೆ ದಕ್ಕಿತು. ೧೯೨೫ ಚ. ಅಡಿಯುಳ್ಳ ಹಳೆ ಪುರಸಭೆಯ ಮೊದಲನೇ ಮಹಡಿಯ ಹಾಲ್‌ಗೆ ಆಯಿತು. ಕ: ೧೮೩೩೦ ಬಾಡಿಗೆ ನಿಗದಿ ಪಡಿಸಲಾಗಿದ್ದು, ಹರಾಜಿನಲ್ಲಿ ಪಾಲ್ಗೊಂಡ ಇಬ್ಬರೂ ವ್ಯಕ್ತಿಗೂ ಅಷ್ಟೊಂದು ಬಾಡಿಗೆಗೆ ಹಾಲ್ ಬೇಡ. ಬಾಡಿಗೆ ಕಡಿಮೆ ಮಾಡಿದರೆ ಮಾತ್ರ ಹಾಲ್ ಬಾಡಿಗೆ ಪಡೆಯುತ್ತೇವೆಂದು ಹೇಳಿ ಎದ್ದುಹೋದ ಘಟನೆಯೂ ನಡೆಯಿತು.
ಎರಡು ಅಂಗಡಿಗಳಿಗೆ ತಲಾ ಒಬ್ಬರೇ ಅರ್ಜಿ ಸಲ್ಲಿಸಿದ್ದರಿಂದ ಹರಾಜು ಮುಂದೂಡಲಾಯಿತು. ೧೬ ಅಂಗಡಿಗಳಿಗೆ ಯಾರೂ ಅರ್ಜಿ ಸಲ್ಲಿಸಿರಲಿಲ್ಲ. ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಿಟ್ಟ ಅಂಗಡಿ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಹರಾಜಿನಲ್ಲಿ ಪಾಲ್ಗೊಂಡ ವ್ಯಕ್ತಿಯೊಬ್ಬರು ಸರಿಯಾಗಿ ಪ್ರಮಾಣ ಪತ್ರ ಪರಿಶೀಲಿಸದೇ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ನೈಜ ಪರಿಶಿಷ್ಟರಿಗೆ ಅನ್ಯಾಯವಾಗಲಿದೆ ಎಂದಾಗ, ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಮಜಿ ಅವರು ಅಂಗ ಕಾಗದ ಪತ್ರ ಮಾಡಿಕೊಡುವಾಗ ಎಲ್ಲವನ್ನೂ ಪರಿಶೀಲಿಸಲಾಗುತ್ತದೆ. ಈಗ ನಿಮ್ಮ ಆಕ್ಷೇಪ ಸರಿಯಲ್ಲ ಎಂದಾಗ ಮಾತಿನ ವಾಗ್ವಾದ ನಡೆಯಿತು.
ಪುರಸಭೆ ಮಾಜಿ ಸದಸ್ಯ ಮತ್ತು ಅಂಗಡಿ ಹರಾಜಿನಲ್ಲಿ ಪಾಲ್ಗೊಂಡ ವೆಂಕಟೇಶ ನಾಯ್ಕ ಅವರು, ಹಳೇ ಪುರಸಭೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು ಈಗ ಅದೇ ಕಟ್ಟಡದಲ್ಲಿರುವ ಅಂಗಡಿ ಮಳಿಗೆ ಮತ್ತು ಹಾಲನ್ನು ಹರಾಜು ಕರೆದಿದ್ದೀರಿ. ಮುಂದೆ ಕಟ್ಟಡಕ್ಕೆ ತೊಂದರೆಯಾದರೆ ಹರಾಜಿನಲ್ಲಿ ಪಡೆದುಕೊಂಡವರಿಗೆ ಬೇರೆ ಅಂಗಡಿ ವ್ಯವಸ್ಥೆ ಮಾಡಿಕೊಡುತ್ತೀರಾ?’ ಎಂದು ಪ್ರಶ್ನಿಸಿದರು.
ಹರಾಜು ಪ್ರಕ್ರಿಯೆಯಲ್ಲಿ ಪುರಸಭೆಯ ಅಧ್ಯಕ್ಷ ಪರ್ವೇಜ್ ಕಾಶೀಮಜಿ, ತಹಸೀಲ್ದಾರ ರವಿಚಂದ್ರ, ಪುರಸಭೆ ಮುಖ್ಯಾಧಿಕಾರಿ ರಾಧಿಕಾ, ಸ್ಥಾಯಿ ಸಮಿತಿಯ ಅಧ್ಯಕ್ಷ ಫಯ್ಯಾಚ್ ಮುಲ್ಲಾ ಸೇರಿದಂತೆ ಪುರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ದಿವಾಕರ, ಸಬ್ ಇನ್ಸಪೆಕ್ಟರ್‌ಗಳಾದ ಸುಮಾ, ಎಚ್.ಬಿ. ಕುಡಕುಂಟಿ, ಭರತ್, ರವೀಂದ್ರ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

error: