March 26, 2024

Bhavana Tv

Its Your Channel

ಮುರ್ಡೇಶ್ವರ ಶಿವನ ಪ್ರತಿಮೆ ವಿರೂಪಗೊಳಿಸಿದ ಚಿತ್ರವನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಡಿವೈಎಸ್‌ಪಿ ಕೆ. ಯು. ಬೆಳ್ಳಿಯಪ್ಪಯವರಿಗೆ ಮನವಿ

ಭಟ್ಕಳ: ವಿಶ್ವ ಪ್ರಸಿದ್ಧ ಮುರ್ಡೇಶ್ವರ ಶಿವನ ಪ್ರತಿಮೆಯ ತಲೆಯ ಭಾಗವನ್ನು ಕತ್ತರಿಸಿ ಐಸಿಸ್ ಧ್ವಜವನ್ನು ಅಳವಡಿಸಿ ಚಿತ್ರವನ್ನು ವಿರೂಪಗೊಳಿಸಿದ್ದನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಭಟ್ಕಳ ಘಟಕದಿಂದ ಗುರುವಾರದಂದು ಮುರ್ಡೇಶ್ವರ ದೇವಸ್ಥಾನ ಆವರಣದಲ್ಲಿ ಭಟ್ಕಳ ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ. ಯು. ಬೆಳ್ಳಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ರಾಜ್ಯದ ಪ್ರಸಿದ್ದ ಪ್ರಾವಾಸಿತಾಣ ಮುರ್ಡೇಶ್ವರ ಶಿವನ ಪ್ರತಿಮೆಯ ತಲೆಯ ಭಾಗವನ್ನು ಕತ್ತರಿಸಿ ಐಸಿಸ್ ಧ್ವಜ ಹೋಲುವ ಧ್ವಜವನ್ನು ಅಳವಡಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಂತದ್ದೊAದು ಶಂಕೆ ಮೂಡುವಂತೆ ಮಾಡಿದೆ. ಐಸಿಸ್ ಮುಖ ವಾಣಿ ‘ದಿ ವಾಯ್ಸ ಆಪ್ ಹಿಂದ್’ಎAಬ ತಲೆಬರಹದಡಿ ಈ ಪೋಟೊ ಪ್ರಕಟವಾಗಿದೆ. ಕೆಳಗಡೆ ‘ಇಟ್ಸ ಟೈಮ್ ಟು ಕಮ್ ಬ್ರೇಕ್ ಫಾಲ್ಸ ಗಾಡ್ಸ, ಸುಳ್ಳು ದೇವರನ್ನು ಒಡೆಯುವ ಸಮಯ ಬಂದಿದೆ ಅಂತ ಬರೆಯಲಾಗಿದ್ದು ಖಂಡನಾರ್ಹ.

ಇದಕ್ಕೆ ಕಾರಣ ಐಸಿಸ್ ಸಂಘಟನೆಯಲ್ಲಿ ಭಟ್ಕಳ ಮತ್ತು ಮುರ್ಡೇಶ್ವರ ಮೂಲದ ಕೆಲವು ಅನ್ಯಕೋಮಿನ ಕಿಡಿಗೇಡಿಗಳು ಸೇರಿಕೊಂಡಿರುವ ಬಗ್ಗೆ ಜಗತ್ತಜಾಹಿರಾಗಿರುವ ವಿಚಾರ ಎಲ್ಲರಿಗೂ ತಿಳಿದಿರುವಂತದ್ದಾಗಿದೆ.

ಹಲವು ಬಾರಿ ಗುಪ್ತಚರ ದಳ ಹಾಗೂ ಐ.ಬಿ ಇದನ್ನು ವರದಿ ಮಾಡಿದ್ದವು. ಕೆಲವು ಭಟ್ಕಳ ತಾಲೂಕಿನ ಅನ್ಯಕೋಮಿನ ಯುವಕರು ಐಸಿಸ್ ಸಂಘಟನೆಯಲ್ಲಿ ನೇರವಾಗಿ ಸಂಬoಧವನ್ನು ಹೊಂದಿದ್ದಾರೆ ಮತ್ತು ಬ್ರಹದಾಕಾರದ ಶಿವನ ವಿಗ್ರಹದ ಹತ್ತಿರ ಬುರ್ಕಾದಾರಿ ಪ್ರವಾಸಿಗರು ದಿನನಿತ್ಯ ಶಿವನ ವಿಗ್ರಹದ ಹತ್ತಿರ ಮತ್ತು ಉಳಿದ ಸ್ಥಳದಲ್ಲಿ ಸುತ್ತಾಡಿ ಬರುತ್ತಿರುವುದನ್ನು ನಿರ್ಬಂದಿಸಬೇಕು ಮತ್ತು ಅದರ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುರ್ಡೇಶ್ವರ ಇಂದು ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದ್ದು, ಸರಿಯಾದ ಭದ್ರತಾ ವ್ಯವಸ್ಥೆ ಪೋಲಿಸ್ ಇಲಾಖೆಯು ಮಾಡದೇ ಇರುವುದು ಈ ಕುರಿತು ಪ್ರಕಟಣೆ ನೀಡಲು ಸಹಕಾರಿಯಾಗಿದೆ.

ಈ ಕೂಡಲೇ ಉಪ ಪೋಲೀಸ್ ವರಿಷ್ಠಾಧಿಕಾರಿಗಳು ಮುರ್ಡೇಶ್ವರ ದೇವಸ್ಥಾನ ಮತ್ತು ರಾಜಗೋಪರ ಹಾಗೂ ಶಿವನ ಪ್ರತಿಮೆಗೆ ಭದ್ರತೆ ಒದಗಿಸಬೇಕು. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಫೋಟೊ ಸಮಗ್ರವಾಗಿ ಆದಷ್ಟು ಬೇಗ ತನಿಕೆಯ ಮಾಡಿ ಉಗ್ರಗಾಮಿಗಳನ್ನು ಬಂಧಿಸುವ ಕೆಲಸ ಮಾಡಬೇಕು ಇಲ್ಲವಾದಾಗ ಹಿಂದೂ ಜಾಗರಣ ವೇದಿಕೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ಮನವಿಯನ್ನು ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ಅವರು ಸ್ವೀಕರಿಸಿದರು. ಇದಕ್ಕೂ ಪೂರ್ವದಲ್ಲಿ ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರು ಮುರುಡೇಶ್ವರ ದೇವನಿಗೆ ವಿಶೇಷ ಸಂಕಲ್ಪಿತ ಪೂಜೆಯನ್ನು ನೀಡಿದರು.
ಜಿಲ್ಲಾ ಕಾರ್ಯದರ್ಶಿ ದಿನೇಶ ಗವಾಳಿ ಮಾತನಾಡಿ ‘ ತಪ್ಪಿತಸ್ಥರು ಯಾರೇ ಆಗಿರಲಿ ಅವರ ಮೇಲೆ ಶೀಘ್ರವಾದ ಕ್ರಮ ಆಗಬೇಕು. ಪೋಲಿಸ್ ಇಲಾಖೆ ತನಿಖೆಯನ್ನು ಚುರುಕುಗೊಳಿಸಿ ಎಲ್ಲಾ ಆಯಾಮದಿಂದ ಪ್ರಕರಣದ ರೂವಾರಿಯನ್ನು ಕಂಡು ಹಿಡಿಯಬೇಕು ಇಲ್ಲವಾದಲ್ಲಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಹಿಂದು ಜಾಗರಣಾ ವೇದಿಕೆ ಈ ಕುರಿತು ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆಯನ್ನು ನೀಡಿದರು.

ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಮಾತನಾಡಿ ‘ ಶಿವನಮೂರ್ತಿಯ ಶಿರಚ್ಛೇದನ ಮಾಡಿ ವ್ಯಂಗ್ಯ ಮಾಡಿದ ಐಸಿಸ್ ಕ್ರತ್ಯವೂ ಹಿಂದು ಸಮಾಜಕ್ಕೆ ಮಾಡಿದ ಅವಮಾನ. ಇಲಾಖೆಯು ಮೌನ ತಾಳದೇ ಕಾನೂನು ಕ್ರಮಕ್ಕೆ ಮುಂದಾಗಬೇಕು ಮತ್ತು ಶೀಘ್ರವಾಗಿ ಮುರುಡೇಶ್ವರಕ್ಕೆ ಗ್ರಹ ಸಚಿವರು ಭೇಟಿ ನೀಡಿ ಪೋಲಿಸ್ ಬಂದೋಬಸ್ತ ವೀಕ್ಷಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕೂ ಅಧ್ಯಕ್ಷ ವಾಸು ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ದಿನೇಶ ಚೌಥನಿ, ಶಂಕರ ಚೌಥನಿ, ನಾಗೇಶ ಚೌಥನಿ, ಗಣೇಶ್ ಹೇರಾಡಿ, ವಿಷ್ಣು ಹೇರಾಡಿ, ಮಂಜು, ಈರಪ್ಪ ಮಠದಹಿತ್ಲು, ಉದಯ ನಾಯ್ಕ, ಸುಬ್ರಹ್ಮಣ್ಯ ನಾಯ್ಕ ವೇದಿಕೆಯ ಪ್ರಮುಖರು ಇದ್ದರು.

error: