January 25, 2022

Bhavana Tv

Its Your Channel

ಜ.೨೦ರಂದು ಮುರುಡೇಶ್ವರದ ಬ್ರಹ್ಮರಥೋತ್ಸವವೂ ಇರುವುದಿಲ್ಲ – ಉಪವಿಭಾಗಾಧಿಕಾರಿ ಮಮತಾದೇವಿ, ಜಿ.ಎಸ್.

ಭಟ್ಕಳ: ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ವಯ ಮಾತೋಬಾರ ಮುರುಡೇಶ್ವರದ ಜಾತ್ರೆಯಂದು ದೇವಸ್ಥಾನದ ದೇವರ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳಿಗೆ ಒಳಾಂಗಣದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿದೆ.

ಹೊರಾಂಗಣದಲ್ಲಿ ಯಾವುದೇ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮ ಇತ್ಯಾದಿಗಳನ್ನು ಆಚರಿಸಲು ನಿರ್ಬಂಧವಿರುವ ಕಾರಣ ಜ.೨೦ರಂದು ಬ್ರಹ್ಮರಥೋತ್ಸವವೂ ಇರುವುದಿಲ್ಲ ಎಂದು ಉಪವಿಭಾಗಾಧಿಕಾರಿ ಮಮತಾದೇವಿ.ಜಿ.ಎಸ್. ತಿಳಿಸಿದ್ದಾರೆ. ಇಲ್ಲಿನ ಮಿನಿ ವಿಧಾನಸೌಧದಲ್ಲಿ ಕುರಿತು ವಿಶೇಷ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವುದರಿಂದ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕಾಲ ಮಾರ್ಗಸೂಚಿ ಕಾಲಕ್ಕೆ ಪರಿಷ್ಕೃತ ಹೊರಡಿಸುತ್ತದೆ. ಅದರಂತೆ ಜ.೧೧ ಮತ್ತು ೧೨ರಂದು ಹೊಸ ಮಾರ್ಗಸೂಚಿ ಹೊರಡಿಸಿರುವ ಸರಕಾರ, ದೇವಾಲಯಗಳ ಒಳಾಂಗಣದಲ್ಲಿ ದೈನಂದಿನ ಪೂಜಾ ಕಾರ್ಯಗಳಿಗೆ ಮಾತ್ರ ಅವಕಾಶ ನೀಡಿದೆ. ಒಳಾಂಗಣದಲ್ಲಿ ಒಂದು ಬಾರಿಗೆ ಪೂರ್ಣ ಪಡೆದ ಲಸಿಕೆ ಪ್ರಮಾ ಪತ್ರ ಹಾಗೂ ೪೮ ಗಂಟೆಯೊಳಗಿನ ಅವಧಿಯ ಗಂಟಲು ದ್ರವ ಪರೀಕ್ಷೆಯಲ್ಲಿ ವರದಿಯೊಂದಿಗೆ ಮಾತ್ರ ದೇವರ ದರ್ಶನಕ್ಕೆ
ಅವಕಾಶವಿದೆ. ಈ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಎಂದು ಅನುಷ್ಠಾನಗೊಳಿಸಬೇಕಿದ ಅಧಿಕಾರಿಗಳಿಗೆ ಸೂಚಿಸಿದರು.
ಜ.೧೩ರಂದು ಜಿಲ್ಲಾಧಿಕಾರಿಗಳು ನಡೆಸಿದ ವಿಡಿಯೋ ಸಂವಾದದಲ್ಲೂ ಈ ಬಗ್ಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದ್ದಾರೆ. ಈ ಹಿಂದಿನ ಸಭೆಯಲ್ಲಿ ಹಿಂದಿನ ಮಾರ್ಗಸೂಚಿ ಯನುಸಾರವಾಗಿ ಸರಳವಾಗಿ ಮುರುಡೇಶ್ವರ ಜಾತ್ರಾ ಕಾರ್ಯಕ್ರಮವನ್ನು ದೇವಸ್ಥಾನದ ಧಾರ್ಮಿಕ ವಿಧಿ ವಿಧಾನಗಳಂತೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಬದಲಾದ ಮಾರ್ಗಸೂಚಿಯಿಂದ ಕೇವಲ ಒಳಾಂಗಣದಲ್ಲಿ ಜಾತ್ರೆಯ ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ಸರಳವಾಗಿ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು. ಅದೇ ರೀತಿ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳು ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಯಾಗದಂತೆ . ಸಹಕರಿಸಬೇಕೆಂದು ತಿಳಿಸಿದರು. ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸುವವರ ವಿರುದ್ಧ ಕಾನೂನೂ ಕ್ರಮ ಕೈಗೊಳ್ಳಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಸರಳ ಹಾಗೂ ಶಾಂತಿಯುತವಾಗಿ ಆಚರಿಸಲು ಪೋಲಿಸ್ ಇಲಾಖೆಗೆ ಸೂಚಿಸಿದರು.
ಮಾವಳ್ಳಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಮಾರ ನಾಯ್ಕ ಮಾತನಾಡಿ, ಬೆಳಿಗ್ಗೆ ಪಂಚಾಯತಿಯಲ್ಲಿ ಜಾತ್ರೆ ಪ್ರಯುಕ್ತ ವಿಶೇಷ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಜಾತ್ರೆ ಕುರಿತು ಪಂಚಾಯತಿಯಿAದ ಯಾವುದೇ ಹಣಕಾಸಿನ ನೆರವು ನೀಡಲಾಗುವುದಿಲ್ಲ ಹಾಗೂ ಪಂಚಾಯತಿನಲ್ಲಿ ಅನುದಾನದ ಕೊರತೆ ಇರುವುದರಿಂದ ಯಾವುದೇ ಮೂಲಭೂತ ಸೌಕರ್ಯ ಸಹ ಕಲ್ಪಿಸಲು ಸಾಧ್ಯವಿರುವುದಿಲ್ಲ
ಎಂದು ತೀರ್ಮಾನಿಸಲಾಗಿದೆ. ಜಾತ್ರೆ ಪ್ರಯುಕ್ತ ಸದಸ್ಯರವಾರು ಜಾತ್ರೆ ಅಂಗಡಿ ತೆರೆಯುವುದಾಗಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಇದಕ್ಕೆ ಉಪವಿಭಾಗಾಧಿಕಾರಿ, ಕೋವಿಡ್ ಮಾರ್ಗಸೂಚಿಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಲು ಅವಕಾಶವಿಲ್ಲ. ಹೆಚ್ಚುವರಿ ಅಂಗಡಿ ಮಳಿಗೆಗಳನ್ನು ತೆರೆಯಲು ಸಹ ಅವಕಾಶವಿಲ್ಲ. ಇದರ ಉಲ್ಲಂಘನೆ ಆಗಿದ್ದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕ್ರಮ ಕೊಳ್ಳುವಂತೆ ಪೋಲಿಸ್ ಇಲಾಖೆ ಸೂಚಿಸಿದರು. ಪಂಚಾಯತಿ ಸಭೆಯ ತೀರ್ಮಾನದ ಕುರಿತು ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಾಗೂ ಮೇಲಾಧಿಕಾರಿಗಳಿಗೆ ತಿಳಿಸಿ ಯಾವುದೇ ಕೋವಿಡ್ ನಿಯಮಗಳ ಉಲ್ಲಂಘನೆಯಾಗದAತೆ ಕ್ರಮ ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್. ರವಿಚಂದ್ರ, ಸಿಪಿಐ ಮಹಾಬಲೇಶ್ವರ ನಾಯ್ಕ, ಪಿಎಸೈ ರವೀಂದ್ರ ಬಿರಾದಾರ್, ಮುರುಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ತಾಲೂಕಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಮಾವಳ್ಳಿ ಕಂದಾಯ ನಿರೀಕ್ಷಕ ಇದ್ದರು.

error: