April 23, 2024

Bhavana Tv

Its Your Channel

25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಡವಿನಕಟ್ಟೆ ದೇವಸ್ಥಾನದ ಮಹಾದ್ವಾರ ಶಾಸಕ ಸುನೀಲ ರಿಂದ ಲೋಕಾರ್ಪಣೆ

ಭಟ್ಕಳ ತಾಲೂಕಿನ ಕಡವಿನಕಟ್ಟಾ ದುರ್ಗಾಪರಮೇಶ್ವರಿ ದೇವಸ್ಥಾನದ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮಹಾದ್ವಾರ ಲೋಕಾರ್ಪಣೆಯನ್ನು ಶಾಸಕ ಸುನೀಲ ನಾಯ್ಕ ನೆರವೇರಿಸಿದರು.

ನಂತರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ ಓರ್ವ ದೇವಿಯ ಭಕ್ತನಾಗಿ ಈ ಅಪರೂಪದ ಕ್ಷಣದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದ್ದು ಜೊತೆಗೆ ಮಹಾದ್ವಾರದ ಅಡಿಗಲ್ಲು ಕಾರ್ಯ ಹಾಗೂ ಈಗ ಮಹಾದ್ವಾರದ ಲೋಕಾರ್ಪಣೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಹಾಗೂ ಸೌಭಾಗ್ಯವೇ ಸರಿ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಅಪಾರ ಸಂಖ್ಯೆಯ ಭಕ್ತರನ್ನು ಈ ದೇವಿ ಪಡೆದಿದ್ದಾಳೆ. ಮನಸ್ಸಿನಲ್ಲಿ ಸಂಕಲ್ಪಿಸಿದ ಕೆಲಸ ದೇವಿ ನಡೆಸಿಕೊಡುತ್ತಾಳೆ. ಇದರ ಜೊತೆಗೆ ವರ್ಷದಿಂದ ವರ್ಷಕ್ಕೆ ದೇವಿಯ ಮಹಿಮೆ, ಶಕ್ತಿ ವ್ರದ್ದಿಯಾಗುತ್ತಿದ್ದು ಇದಕ್ಕೆ ಇಲ್ಲಿನ ಆಡಳಿತ ಕಮಿಟಿ, ಅರ್ಚಕ ವ್ರಂದದಿAದ ನಡೆಯುವ ನಿತ್ಯ ಸೇವಾ ಕಾರ್ಯಕ್ರಮವೂ ಕಾರಣವಾಗಿದೆ. ಸಾಕಷ್ಟು ದೇವಸ್ಥಾನದ ಆಡಳಿತ ಕಮಿಟಿಯಲ್ಲಿ ಕಡವಿನಕಟ್ಟೆ ದೇವಸ್ಥಾನದ ಕಮಿಟಿಯ ಶ್ರಮ ಅವರಲ್ಲಿನ ಭಕ್ತಿ ವಿಶೇಷ ಎನ್ನಿಸುತ್ತದೆ ಎಂದ ಅವರು ನಮ್ಮಲ್ಲಿನ ದೇವರ ಸಂಖ್ಯೆಯAತೆ ಭಕ್ತಿ ಶ್ರದ್ದೆಯು ಹೆಚ್ಚಾಗಬೇಕು ಆಗ ಮಾತ್ರ ಸನಾತನ ಧರ್ಮದ ಉದ್ದೇಶ ಫಲಪ್ರದವಾಗಲಿದೆ. ದೇವರ ಆಶೀರ್ವಾದದಿಂದ ಶಾಸಕನಾದ ಮೇಲೆ ಮೊದಲು ದೇವಸ್ಥಾನದ ಮೂಲಭೂತ ಸೌಕರ್ಯಗಳನ್ನು ನೀಡುವಂತಹ ಕೆಲಸವನ್ನು ಶುರು ಮಾಡಿದ್ದು ಅದು ಇಂದಿಗು ಸಹ ಮುಂದುವರೆದಿದೆ ಎಂದರು.

ಕಡವಿನಕಟ್ಟೆ ದೇವಸ್ಥಾನದ ಅಭಿವೃದ್ಧಿಗೂ ಸಹ ಸರಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುವಲ್ಲಿ ನನ್ನ ಪ್ರಯತ್ನ ಸದಾ ಇರಲಿದೆ. ಹಾಗೂ ಈ ಹಿಂದೆ ಇನ್ಯಾವುದೋ ಸಮಾಜವನ್ನು ಒಲೈಸುವ ನಿಟ್ಟಿನಲ್ಲಿ ದೇವಸ್ಥಾನವನ್ನು ಸರಕಾರದ ಸುಪರ್ಧಿಗೆ ನೀಡಿ ಅದಕ್ಕೊಂದು ಆಡಳಿತ ಅಧಿಕಾರಿ ನೇಮಿಸಿರುವ ಕ್ರಮದ ಬಗ್ಗೆ ನಮ್ಮ ಇಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸರಕಾರ ವಿನೂತನ ಸಂಕಲ್ಪ ಮಾಡಿಕೊಂಡಿದ್ದು ನಮ್ಮ ದೇವಸ್ಥಾನ ನಮಗೆ ಸೇರಬೇಕೆಂಬ ಚಿಂತನೆಗಳು ನಡೆಯುತ್ತಿದೆ. ಸ್ಥಳೀಯವಾಗಿ ದೇವಸ್ಥಾನದ ಅಭಿವೃದ್ಧಿ, ಕಾರ್ಯಕ್ರಮವನ್ನು ಅಲ್ಲಿನ ಭಕ್ತರು ಸಂಘಟಿತರಾಗಿ ಮಾಡಲಿದ್ದು ಆದರೆ ಅದಕ್ಕೊಂದು ಅಧಿಕಾರಿಗಳ ನೇಮಕ ನಮಗೆ ಒಪ್ಪಿಗೆ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದರು.

ಮಹಾದ್ವಾರದ ವಾಸ್ತುಶಿಲ್ಪ ವಾಸುದೇವ ಶೇಟ್ ಮಾತನಾಡಿ ‘ ಈ ದೇವಿಯ ಆರಾಧನೆಯು ನಮ್ಮ ಪರಂಪರಾಗತವಾಗಿ ತಲೆ ತಲೆಮಾರುಗಳಿಂದ ನಡೆದುಕೊಂಡು ಬಂದಿದ್ದು ಇಂದಿಗೂ ಇದನ್ನು ಮುಂದುವರಿಸಿಕೊAಡು ಬಂದಿದ್ದೇವೆ. ನಮ್ಮ ಕುಟುಂಬದ ಇಷ್ಟ ದೇವತೆ ಕಡವಿನಕಟ್ಟೆ ದುರ್ಗಾಪರಮೇಶ್ವರಿ ದೇವಿ ಆಗಿದ್ದಾಳೆ. ಭಕ್ತರ ಶ್ರಮದ ಜೊತೆಗೆ ಸರಕಾರಕ್ಕೆ ಕೊಂಡಿ ಆಗಿರುವ ಶಾಸಕರು ಇನ್ನು ಮುಂದಿನ ದಿನದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿ ಶ್ರಮಿಸಿ ಇದನ್ನು ಶಕ್ತಿ ಸ್ಥಳದ ಜೊತೆಗೆ ವಿಶಾಲ ಕ್ಷೇತ್ರವನ್ನಾಗಿಸಬೇಕು ಹಾಗೂ ಇದೊಂದು ಪ್ರೇಕ್ಷಣೀಯ ಸ್ಥಳವನ್ನಾಗಿಯು ಅಭಿವೃದ್ಧಿ ಪಡಿಸಿದಲ್ಲಿ ಭಟ್ಕಳದ ಹೆಸರು ಎಲ್ಲೆಡೆ ಪಸರಿಸಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ವಾಸ್ತುಶಿಲ್ಪ ವಾಸುದೇವ ಶೇಟ್, ದ್ವಾರ ರಚನೆಯ ಇಂಜಿನಿಯರ್ ರವಿ. ವಿ.ಎಮ್., ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ ಭಟ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯಿAದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ವಿಜಯಪುರ ಕೆ.ವಿ.ಜಿ. ಬ್ಯಾಂಕ್ ಸೀನಿಯರ್ ಮ್ಯಾನೇಜರ್ ವಿಜಯಕುಮಾರ ಕನ್ಮಡಿ, ಜಾಲಿ ಪಟ್ಟಣ ಪಂಚಾಯತ ನೂತನ ಸದಸ್ಯರು, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರಕಾಶ ಭಟ್ ಮುಂತಾದವರು ಇದ್ದರು.

ಪ್ರಾಸ್ತಾವಿಕವಾಗಿ ಕಾರ್ಯದರ್ಶಿ ಪ್ರಕಾಶ ಭಟ್ ಮಾತನಾಡಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಅಶೋಕ ಕಾಮತ ಸ್ವಾಗತಿಸಿ ವಂದಿಸಿದರು. ಗಂಗಾಧರ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

error: