March 29, 2024

Bhavana Tv

Its Your Channel

ಸಂಕ್ರಾತಿಯ ನಂತರ ಭಟ್ಕಳ ತಾಲೂಕಿನಲ್ಲಿ ನಡೆಯುವ ಎರಡನೇ ಜಾತ್ರೆ ಕೋಕ್ತಿ ಮಹಾಸತಿ ಜಾತ್ರೆ

ಭಟ್ಕಳ: ಸಂಕ್ರಾತಿಯ ನಂತರ ಭಟ್ಕಳ ತಾಲೂಕಿನಲ್ಲಿ ನಡೆಯುವ ಎರಡನೇ ಜಾತ್ರೆ ಕೋಕ್ತಿ ಮಹಾಸತಿ ಜಾತ್ರೆಯು ಕೋವಿಡ್ ಹಿನ್ನೆಲೆ ಸರ್ಕಾರದ ನಿಯಮಾನುಸಾರ ನಡೆಯಿತು

ಸಂಕ್ರಾತಿಯ ನಂತರ ಭಟ್ಕಳ ತಾಲೂಕಿನಲ್ಲಿ ನಡೆಯುವ ಎರಡನೇ ಜಾತ್ರೆ ಕೋಕ್ತಿ ಮಹಾಸತಿ ಜಾತ್ರೆ. ಪಟ್ಟಣದ ಮಧ್ಯದಲ್ಲಿದ್ದರು ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಬ್ಬನ್ನು ಖರೀದಿಸುವುದೇ ಈ ಜಾತ್ರೆಯ ವಿಶೇಷವಾಗಿದೆ. ಗೊಂಡ ಸಮಾಜದ ಜಾನಪದ ಶೈಲಿಯಲ್ಲಿ ಜಾತ್ರಾ ವಿಶೇಷಗಳನ್ನು ಕಾಣಬಹುದು. ದೇವಸ್ಥಾನವೂ ಪ್ರಮುಖವಾಗಿ ಗೊಂಡ ಸಮಾಜದವರೇ ನಂಬಿಕೊAಡು ಬಂದ ಸ್ಥಳವಾಗಿದೆ. ಇಲ್ಲಿಯ ವಿಶೇಷಗಳಲ್ಲಿ ಕಬ್ಬನ್ನು ಖರೀದಿಸುವುದು ಒಂದು. ಸುಗ್ಗಿಯ ಸಂಭ್ರಮದಲ್ಲಿರುವ ರೈತಾಪಿ ಜನರು ತಮ್ಮ ಬಿಡುವಿನ ವೇಳೆಯಲ್ಲಿ ಜಾತ್ರೆಯಲ್ಲಿ ಬಂದು ಮನೆ ಮನೆಗೆ ಕಬ್ಬಿನ ಕುಡಿ ಕೊಂಡೊಯ್ಯಲಿ, ಆ ಕುಡಿಯು ಸಹಸ್ರ ಕುಡಿಯಾಗಿ ಮನೆ ಯಜಮಾನನ ಸಂಪತ್ತು ವೃದ್ಧಿಯಾಗಲಿ ಎನ್ನುವ ವಾಡಿಕೆಯಿದೆ. ಇನ್ನೊಂದು ಪ್ರತೀತಿಯೆಂದರೆ ಜಾತ್ರೆಯ ನಂತರ ಮುಂದಿನ ಜಾತ್ರೆಯ ತನಕ ಮದುವೆಯಾಗಿರುವ ಗೊಂಡ ಸಮಾಜದ ನೂತನ ವಧು-ವರರು ಜಾತ್ರೆಗೆ ಬಂದು ಇಲ್ಲಿನ ಕೋಕ್ತಿಯ ಕೆರೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ಮನೆಗೆ ಹೋಗುವಾಗ ಕಬ್ಬಿನ ಕುಡಿ ತೆಗೆದುಕೊಂಡು ಹೋದರೆ ಅವರ ಕುಟುಂಬದ ಕುಡಿ ಮುಂದುವರೆಯುವುದು ಎಂಬ ಅಗಾಧವಾದ ನಂಬಿಕೆ.ಇಲ್ಲಿ ಮಹಾಸತಿ ದೇವರ ಪೂಜೆ,ಹಾಗೂ ಆಸರಕೇರಿ ಕೊಲ್ಲಿ ಮನೆ ಕುಟುಂಬದವರಿAದ ಶೇಡಿ ಮರಕ್ಕೆ ಹೊ ಕಟ್ಟಿ ಪೂಜಿಸಲಾಗುತ್ತಿತ್ತು .

ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸಂಪ್ರದಾಯದ ಬದ್ಧವಾಗಿ ಜನಜಂಗುಳಿ ಇಲ್ಲದೆ ಸರಳವಾಗಿ ನಡೆಯಿತು.


.

error: