April 25, 2024

Bhavana Tv

Its Your Channel

ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ನಿರಾಕರಣೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಭಟ್ಕಳ ಆಸರಕೇರಿ ನಿಚ್ಚಲಮಕ್ಕಿ ನಾಮಧಾರಿ ಅಭಿವೃದ್ಧಿ ಸಂಘದಿOದ ಮನವಿ

ಭಟ್ಕಳ: ಗಣರಾಜ್ಯೋತ್ಸವ ಪರೇಡಿನಲ್ಲಿ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿರುವುದನ್ನು ಪ್ರಶ್ನಿಸಿರುವ ಭಟ್ಕಳ ಆಸರಕೇರಿ ನಿಚ್ಚಲಮಕ್ಕಿ ನಾಮಧಾರಿ ಅಭಿವೃದ್ಧಿ ಸಂಘ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಭಟ್ಕಳ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ.
ಸ0ದರ್ಬದಲ್ಲಿ ಮಾತನಾಡಿದ ಇಲ್ಲಿನ ಅಸರಕೇರಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣ ನಾಯ್ಕ, ನಾರಾಯಣ ಗುರುಗಳು, ಜಗತ್ತಿನ ಮನುಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಂದೇ ಮತ, ಒಂದೇ ದೇವರು ಎಂದು ಬೋಧಿಸಿದ ದಾರ್ಶನಿಕರಾಗಿದ್ದಾರೆ.
ಅಸ್ಪ್ರಶ್ಯತೆಯನ್ನು ಹೋಗಲಾಡಿಸುವಲ್ಲಿ ನಾರಾಯಣ ಗುರುಗಳ ಶ್ರಮ ಸಾಕಷ್ಟಿದೆ. ಯಾವುದೇ ದ್ವಂದ್ವ, ಗೊಂದಲ, ಅಶಾಂತಿಯನ್ನು ಎಬ್ಬಿಸದೇ ವೇದ, ಉಪನಿಷತ್ತುಗಳ ಶಾಂತಿ ಮಂತ್ರದ ಸಿದ್ಧಾಂತದAತೆ ಸಮಾಜವನ್ನು ಪರಿವರ್ತಿಸಿದ್ದಾರೆ. ಅಂತಹ ಗುರುಗಳಿಗೆ ಇಂದು ವಿಶ್ವದ ಮೂಲೆ ಮೂಲೆಯಲ್ಲಿ ಪೂಜೆ ನಡೆಯುತ್ತಿದೆ. ಪ್ರತಿ ವರ್ಷವೂ ಗಣರಾಜ್ಯೋತ್ಸವದ ಪರೇಡ್ ಸಂದರ್ಭದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕ್ರಾಂತಿಕಾರರ ಸ್ತಬ್ಧ ಚಿತ್ರವನ್ನು ಪ್ರದರ್ಶಿಸುತ್ತ ಬರಲಾಗಿದೆ. ಈ ವರ್ಷವೂ ಕೇರಳ ಸರಕಾರ ಹಿಂದುಳಿದ ವರ್ಗದ ಜನರ ಮಹಾನ್ ಚೇತನ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕಳುಹಿಸಿಕೊಟ್ಟಿದ್ದು, ಕೇಂದ್ರ ಸರಕಾರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿದೆ. ಇದು ಖಂಡನೀಯವಾಗಿದ್ದು, ಯಾವುದೇ ಕಾರಣ ಇರಲಿ, ಸರಕಾರ ಕೂಡಲೇ ಎಚ್ಚೆತ್ತುಕೊಂಡು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲು ಅನುವು ಮಾಡಿಕೊಟ್ಟು ಶ್ರೀ ಗುರುಗಳಿಗೆ ಗೌರವ ಸೂಚಿಸಬೇಕು. ಇಲ್ಲದೇ ಇದ್ದರೆ ಸಮಸ್ತ ಹಿಂದುಳಿದ ವರ್ಗದ ಕೂಗಿನೊಂದಿಗೆ ಸರಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ಆಸರಕೇರಿ ಮನವಿ ಪತ್ರವನ್ನು ಓದಿ ಹೇಳಿದರು. ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಮನವಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ನಾಮಧಾರಿ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಮ್.ಜೆ.ನಾಯ್ಕ, ಕೆ.ಆರ್.ನಾಯ್ಕ, ವಿನಾಯಕ ನಾಯ್ಕ, ವೆಂಕಟೇಶ ನಾಯ್ಕ ತಲಗೋಡು, ವೆಂಕಟೇಶ ನಾಯ್ಕ ಆಸರಕೇರಿ, ಬಿಎಸ್‌ಎನ್‌ಡಿಪಿ ತಾಲೂಕು ಘಟಕದ ಅಧ್ಯಕ್ಷ ಮನಮೋಹನ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು

error: