April 19, 2024

Bhavana Tv

Its Your Channel

ಮುರ್ಡೇಶ್ವರ ಮನೆ ಕಳ್ಳತನ ಮಾಡಿದ ಚಾಲಕಿ ಮಹಿಳೆಯನ್ನು ಬಂಧಿಸಿದ ಪೋಲಿಸರು

ಭಟ್ಕಳ: ಮುರ್ಡೇಶ್ವರ ಠಾಣಾ ವ್ಯಾಪ್ತಿಯ ಮಠದಹಿತ್ಲುವಿನಲ್ಲಿ ಕಳೆದ ಎ.25ರಂದು ಸಂಭವಿಸಿದ ಕಳುವಿನ ಪ್ರಕರಣಕ್ಕೆ ಸಂಬoಧಿಸಿದoತೆ ಮಹಿಳೆಯೋರ್ವಳನ್ನು ಬಂಧಿಸಲಾಗಿದೆ.


ಕಳೆದ ಎ.26ರಂದು ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದ ಮಠದಹಿತ್ಲುವಿನ ಮಹಿಳೆ ದುರ್ಗಮ್ಮ ಜಟ್ಟಾ ಮೊಗೇರ ಇವರು ಎ25ರ ರಾತ್ರಿಯಿಂದ ಎ.26ರ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಮೇಲ್ಚಾವಣಿಯಿಂದ ಮನೆಯೊಳಕ್ಕೆ ಬಂದು ಗೋದ್ರಜ್ ಕಪಾಟನ್ನು ತೆರೆದು ಅದರಲ್ಲಿದ್ದ ಅಜಮಾಸ 47 ಗ್ರಾಮ್ ತೂಕದ ಚಿನ್ನಾಭರಣ, ನಗದು ರೂ.25,000/- ಸೇರಿ ಅಜಮಾಸ್ ರೂ.1,42,500/- ರಷ್ಟು ಕಳುವಾಗಿರುವುದಾಗಿ ತಿಳಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡು ಮುರ್ಡೇಶ್ವರ ಪೊಲೀಸರು ತನಿಖೆಯನ್ನು ಕೈಗೊಂಡಿದ್ದರು. ಖಚಿತ ಮಾಹಿತಿಯ ಮೇರೆಗೆ ಮುರ್ಡೇಶ್ವರವರೇ ಆದ ಮಹಿಳೆ ಕುಸುಮಾ ವೆಂಕಟ್ರಮಣ ಮೊಗೇರ ಈಕೆಯನ್ನು ಬಂಧಿಸಲಾಗಿದ್ದು ಈಕೆಯಿಂದ ಕಳುವು ಮಾಡಲಾಗಿದ್ದ ಚಿನ್ನದ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನದ ಒಡವೆಗಳನ್ನು ಈಕೆಯು ಬ್ಯಾಂಕಿನಲ್ಲಿ ಒತ್ತೆ ಇಟ್ಟು ಸಾಲ ಪಡೆದಿದ್ದರಿಂದ ಎಲ್ಲಾ ಚಿನ್ನಾಭರಣಗಳು ದೊರೆಯಲು ಕಾರಣ ಎನ್ನಲಾಗಿದೆ. ನಗದು ಹಣವನ್ನು ತಾನು ಬಳಸಿಕೊಂಡಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದು ತನಿಖೆ ನಡೆದಿದೆ. ಕಳ್ಳತನದ ಆರೋಪಿಯನ್ನು ಪತ್ತೆ ಹಚ್ಚಲು ಎಸ್.ಪಿ. ಸುಮನ್ ಪೆನ್ನೇಕರ್, ಹೆಚ್ಚುವರಿ ಎಸ್.ಪಿ. ಬದರೀನಾತ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಸಿ.ಪಿ.ಐ. ಮಹಾಬಲೇಶ್ವರ ನಾಯ್ಕ ಮುರ್ಡೇಶ್ವರ ಸಬ್ ಇನ್ಸಪೆಕ್ಟರ್ ಪರಮಾನಂದ ಕೊಣ್ಣೂರ, ತನಿಖಾಧಿಕಾರಿ ದೇವರಾಜ ಬೀರಾದಾರ ಹಾಗೂ ಸಿಬ್ಬಂದಿಗಳು ಕಾರವಾರದ ಸಿ.ಡಿ.ಆರ್. ಸೆಕ್ಷನ್ ಅವರ ಸಹಕಾರದಿಂದ ಕಾರ್ಯಾಚರಣೆ ಕೈಗೊಂಡಿದ್ದರು.

error: