April 25, 2024

Bhavana Tv

Its Your Channel

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿದ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ

ಭಟ್ಕಳ: ಐ.ಎ.ಎಸ್. ಐಪಿಎಸ್. ಪರೀಕ್ಷೆಯ ತರಬೇತಿ ಪಡೆಯಲು ದೂರದ ದೆಹಲಿಗೆ ಹೋಗಬೇಕಾಗಿಲ್ಲ ಇಂದು ಅಂತರ್ಜಾಲದ ಮೂಲಕ ನಮ್ಮ ಕೈಯಲ್ಲೆ ಎಲ್ಲ ಮಾಹಿತಿಗಳೂ ದೊರಕುತ್ತಿದ್ದು ಅದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಹೇಳಿದರು.


ಅವರು ನಗರದ ಬಂದರ್ ರಸ್ತೆಯಲ್ಲಿರುವ ಕಮಲಾವತಿ ಶಾನುಭಾಗ ಸಭಾಂಗಣದಲ್ಲಿ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಭಟ್ಕಳ, ರೋಟರಿ ಕ್ಲಬ್ ಹಾಗೂ ಇಂಡಿಯನ್ ೪ ಐಎಎಸ್ ಅಕಾಡೆಮಿ ಬೆಂಗಳೂರು, ಸಹಯೋಗದೊಂದಿಗೆ ಹಮ್ಮಿಕೊಂಡ ಉಚಿತ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಸಿ ಮಾತನಾಡಿದರು.
ಐ.ಎ.ಎಸ್. ಐ.ಪಿ.ಎಸ್ ಪರೀಕ್ಷೆಯ ತರಬೇತಿಯನ್ನು ಈ ಮೊದಲು ದೆಹಲಿ ಯಲ್ಲಿ ಪಡೆಯಬೇಕಿತ್ತು. ಬೆಂಗಳೂರಿನತಹ ದೊಡ್ಡ ದೊಡ್ಡ ನಗರದಲ್ಲಿರುವ ವಿದ್ಯಾರ್ಥಿಗಳೇ ತರಬೇತಿ ಪಡೆಯುತ್ತಿದ್ದು ಈಗ ಅದನ್ನು ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ತಿಳಿಸಿ ತರಬೇತಿ ನೀಡುತ್ತಿರುವ ಭಟ್ಕಳ ಸ್ಪಂದನ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು ಎಂದ ಅವರು ವಿದ್ಯಾರ್ಥಿಗಳು ನಿಖರವಾದ ಗುರಿ ಹೊಂದಿ ಸತತ ಕಠಿಣ ಪರಿಶ್ರಮದಿಂದ ಯಾವುದೇ ಸ್ಪರ್ದಾತ್ಮಕ ಪರೀಕ್ಷೆಯನ್ನು ಎದುರಿಸಿ ಉತ್ತಿರ್ಣರಾಗಬಹುದು. ಇಂದು ಭಟ್ಕಳದಂತಹ ಗ್ರಾಮೀಣ ಭಾಗದಲ್ಲಿ ಸ್ಪಂದನ ಸಂಸ್ಥೆ ಬೆಂಗಳೂರಿನ ಐ.ಎ.ಎಸ್. ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳನ್ನು ಇಲ್ಲಿಗೆ ಕರೆತಂದು ಸ್ಪರ್ದಾತ್ಮಕ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಪುಸ್ತಕದ ಶಿಕ್ಷಣದೊಂದಿಗೆ ತಮ್ಮ ಸುತ್ತ ಮುತ್ತ ಆಗು ಹೋಗುವ ಇತರ ಸಂಗತಿಗಳ ಬಗ್ಗೆಯೂ ಮಾಹಿತಿಯನ್ನು ಪಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೊದಲ ಸಲವೇ ಉತ್ತೀರ್ಣ ಹೊಂದಬೇಕು ಎಂಬ ಭಾವನೆ ಬಿಟ್ಟು ಆತ್ಮಸ್ಥೆöÊರ್ಯ ಪಡೆದುಕೊಂಡು ಸತತ ಪರಿಶ್ರಮ ಪಟ್ಟು ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣ ಹೊಂದಿ ಯಶಸ್ಸು ಕಾಣಬೇಕು ಎಂದರಲ್ಲದೆ ಮುಂದಿನ ದಿನ ಭಟ್ಕಳದಲ್ಲಿ ನಾನು ಸಹ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ ನೀಡಲು ಸಿದ್ದನಿದ್ದೇನೆ ಎಂದರು.
ವೇದಿಕೆಯಲ್ಲಿ ಉಪಸ್ಥಿತಿರದ್ದ ಸ್ಪಂದನ ವೇದಿಕೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಎಲ್ಲರನ್ನು ಸ್ವಾಗತಿಸಿ ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬೆಂಗಳೂರಿನ ಇಂಡಿಯಾ ಫಾರ್ ಐಎಎಸ್ ಸಂಸ್ಥೆಯ ಸೈಯದ್ ಸದತ್,ಮತ್ತು ಅಮನ್ ಜೈನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಮತಾದೇವಿ ಇವರನ್ನು ಸ್ಪಂದನ ಸಂಸ್ಥೆಯ ಪರವಾಗಿ ಸನ್ಮಾನಿಸ ಗೌರವಿಸಿದರು. ಸ್ಪಂದನೆ ಸಂಸ್ಥೆಯ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ ವಂದನಾರ್ಪಣೆ ಮಾಡಿದರು. ಶಿಕ್ಷಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ೩೦೦ ಕ್ಕೂ ಅಧಿಕ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಪಾಂಡುರಗ ನಾಯ್ಕ, ಭಾಸ್ಕರ ನಾಯ್ಕ, ಶಿವಾನಂದ ನಾಯ್ಕ, ರಾಜೇಶ ನಾಯ್ಕ, ಮಹೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

error: