March 29, 2024

Bhavana Tv

Its Your Channel

ಅಂಜುಮಾನ್ ಇಂಜಿನಿಯರಿoಗ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಒಂದು ದಿನದ ಕಾರ್ಯಾಗಾರ

ಭಟ್ಕಳ: ಭೂಮಿಯ ಮೇಲಿರುವ ಪ್ರತಿಯೊಂದು ವಸ್ತುವೂ ಕೂಡಾ ಇಂಜಿನಿಯರಿAಗ್‌ನ ಭಾಗವೇ ಆಗಿದೆ ಎಂದು ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಮೊಹಿದ್ದೀನ್ ರುಕ್ನುದ್ದೀನ್ ಹೇಳಿದರು.
ಅವರು ನಗರದ ಅಂಜುಮಾನ್ ಅಂಜುಮಾನ್ ಇಂಜಿನಿಯರಿoಗ್ ಟೆಕ್ನಾಲಜಿ ಮತ್ತು ಮೆನೇಜ್‌ಮೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಿಜ್ಞಾನ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ನಮ್ಮಲ್ಲಿ ಎರಡು ವಿಧವಿದೆ, ಒಂದು ತಿಳಿದವರು ಹಾಗೂ ತಿಳಿಯದವರು ತಿಳಿದವರೆಂದರೆ ಅವರಿಗೆ ವಿದ್ಯೆ, ಅರ್ಹತೆ, ಹುದ್ದೆ ಇದೆ, ಆದರೆ ತಿಳಿಯದವರು ಕೂಡಾ ಎಲ್ಲವನ್ನು ಕೇಳುತ್ತಾರೆ, ತಿಳಿಯುತ್ತಾರಾದರೂ ಅದರ ಪ್ರಾಮುಖ್ಯತೆ ಕುರಿತು ತಿಳಿಯುವುದಿಲ್ಲ. ಪ್ರಥಮವಾಗಿ ಆರಂಭವಾದ ಸಿವಿಲ್ ಇಂಜಿನಿಯರಿAಗ್ ಎಲ್ಲದಕ್ಕೂ ಮೂಲವಾಗಿದ್ದು ಸೂರ್ಯ, ಚಂದ್ರ ಸೇರಿದಂತೆ ಪ್ರಪಂಚವೇ ಇಂಜಿನಿಯರಿAಗ್ ಮೇಲೆ ನಿಂತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಮುಷ್ತಾಕ್ ಅಹಮ್ಮದ್ ಭಾವಿಕಟ್ಟಿ ಮಾತನಾಡಿ ಇಂಜಿನಿಯರಿAಗ್ ಕಲಿಯಲು ಇಚ್ಚೆಯುಳ್ಳವರು ಮೊದಲು ತಾವು ಕಲಿಯುವ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬೇಕು. ಕೋರ್ಸ ಆಯ್ಕೆ ಮಾಡಿಕೊಳ್ಳುವುದರಿಂದಲೇ ನಿಮ್ಮ ಮುಂದಿನ ಯಶಸ್ಸು ನಿಗದಿಯಾಗಿರುತ್ತದೆ. ಪ್ರತಿಯೋರ್ವರೂ ಕೂಡಾ ತಮ್ಮಿಚ್ಚೆಯ ಕೋರ್ಸನ್ನು ಆಯ್ಕೆ ಮಾಡಿಕೊಂಡಾಗ ಯಶಸ್ಸು ಸಾಧ್ಯ ಎಂದರು. ಪಿ.ಯು.ಸಿ. ವಿದ್ಯಾರ್ಥಿಗಳು ಸಿ.ಇ.ಟಿ. ಮುಗಿದು ಕಾಲೇಜು ಆಯ್ಕೆ ಮಾಡುವಾಗ ನಮ್ಮಲ್ಲಿ ಬಂದರೆ ಉಚಿತವಾಗಿ ಅವರಿಗೆ ಸಲಹೆ ನೀಡುವುದಲ್ಲದೇ ಕಾಲೇಜು ಆಯ್ಕೆಯಿಂದ ಅಗತ್ಯವಿರುವ ಎಲ್ಲಾ ಅಗತ್ಯ ಕಾರ್ಯಗಳನ್ನು ಮಾಡಿಕೊಡಲಾಗುವುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದ ಡಾ. ಅನಂತಮೂರ್ತಿ ಶಾಸ್ತಿçಯವರು ವಿದ್ಯಾರ್ಥಿಗಳಿಗೆ ಇಂಜಿನಿಯರಿAಗ್ ಆರಂಭ, ಇಂದು ಇಂಜಿನಿಯರಿAಗ್‌ನಲ್ಲಿರುವ ಶಾಖೆಗಳು, ಅದರ ವಿಸ್ತಾರ, ಕಲಿಕೆಯ ಅಗತ್ಯತೆ, ಮುಂದಿನ ಸಾಧ್ಯತೆಗಳ ಕುರಿತು ಸವಿಸ್ತಾರವಾಗಿ ವಿವರಿಸುತ್ತಾ ಇಂಜಿನಿಯರಿAಗ್‌ನಲ್ಲಿ ಮುಖ್ಯ ಶಾಖೆಗಳಿಗೆ ಇರುವ ಪ್ರಾಮುಖ್ಯತೆಯನ್ನು ಸಹ ವಿವರಿಸಿದರು.
ವೇದಿಕೆಯಲ್ಲಿ ಉಪಪ್ರಾಂಶುಪಾಲ ಪ್ರೊ. ಫಜ್ಲುರ್‌ರೆಹಮಾನ್, ಪ್ರೊ. ಟಿ.ಎಂ.ಟಿ.ರಾಜ್‌ಕುಮಾರ್, ಪ್ರೊ.ಅನ್ವರ್ ಸಾಧಿಕ್, ಪ್ರೊ. ಶ್ರೀಧರ ಯಲ್ಲೂರ್‌ಕರ್, ಝಾಹಿದ್ ಖರೂರಿ ಮಂತಾದವರು ಉಪಸ್ಥಿತರಿದ್ದರು. ಸಂಪೂರ್ಣ ಕಾರ್ಯಕ್ರಮದ ಸಂಘಟನೆಯನ್ನು ಪ್ರೊ. ಶ್ರೀಶೈಲ್ ಭಟ್ಟ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಹಾಜಿರಾ ಅರ್ಜೀಜ್ ಸ್ವಾಗತಿಸಿದರು. ಜುರಾಯಿಕ್ ನೂಹ್ ನಿರೂಪಿಸಿದರು. ಆದರ್ಶ ಪಾಳ್ ವಂದಿಸಿದರು

error: