April 26, 2024

Bhavana Tv

Its Your Channel

ಭಟ್ಕಳ ಪುರಸಭೆಗೆ ನಾಮಫಲಕ ಅಳವಡಿಕೆಗೆ ಸಂಬoಧಪಟ್ಟoತೆ ಗೊಂದಲ, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಮುಖ್ಯಾಧಿಕಾರಿಗಳೊಂದಿಗೆ ಚರ್ಚೆ

ಭಟ್ಕಳ: ಭಟ್ಕಳ ಪುರಸಭೆಗೆ ನಾಮಫಲಕ ಅಳವಡಿಕೆಗೆ ಸಂಬAಧಪಟ್ಟAತೆ ಉಂಟಾಗಿರುವ ಗೊಂದಲ ಮುಂದುವರಿದಿದ್ದು ಮಂಗಳವಾರ ಸಂಜೆ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ಭೇಟಿ ನೀಡಿ ಪುರಸಭಾ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಾಧಿಕಾರಿಗಳೊಂದಿಗೆ ಕೆಲ ಕಾಲ ಚರ್ಚಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು ಪುರಸಭೆಯ ನಾಮಫಲಕದಲ್ಲಿ ಉರ್ದು ಭಾಷೆಯು ಕಳೆದ ಹಲವಾರು ವರ್ಷಗಳಿಂದ ಹಾಕಿಕೊಂಡು ಬರಲಾಗಿದೆ. ಉರ್ದು ಭಾಷೆಯಲ್ಲಿ ನಾಮಫಲಕವನ್ನು ಬರೆಯಿಸುವಂತೆ ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಲಾಗಿದ್ದು ಅದರಂತೆ ಬರೆಯಿಸಲಾಗಿದೆ. ಸರಕಾರದ ನಿಯಮಾವಳಿಯಂತೆ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಕನ್ನಡ ಪರ ಸಂಘಟನೆಗಳು ವಿವಾದವನ್ನುಂಟು ಮಾಡಿದ್ದರಿಂದ ಇನ್ನೊಮ್ಮೆ ಸಾಮಾನ್ಯ ಸಭೆಯನ್ನು ಕರೆದು ಸಭೆಯಲ್ಲಿ ಚರ್ಚಿಸಿ ಸರಕಾರ ನಿಯಮಾವಳಿಯಂತೆ ನಡೆದುಕೊಳ್ಳಲು ಪುರಸಭಾ ಆಡಳಿತ ಮಂಡಳಿ ಬದ್ಧರಾಗಿದ್ದೇವೆ ಎಂದು ಹೇಳಿದರೆನ್ನಲಾಗಿದೆ. ಒಂದಾನುವೇಳೆ ನಿಯಮಾವಳಿಯಂತೆ ಪುರಸಭಾ ಆಡಳಿತ ಮಂಡಳಿ ನಡೆದುಕೊಳ್ಳದೇ ಇದ್ದಲ್ಲಿ ಜಿಲ್ಲಾಡಳಿತ ಮುಂದಿನ ಕ್ರಮ ಜರುಗಿಸಲು ಬರುವುದು ಎಂತಲೂ ಕೂಡಾ ಒಪ್ಪಿದ್ದಾರೆನ್ನಲಾಗಿದೆ. ಸಧ್ಯಕ್ಕೆ ಪುರಸಭೆಯಲ್ಲಿ ಅಳವಡಿಸಲಾಗಿರುವ ಕನ್ನಡ, ಇಂಗ್ಲೀಷ್ ಹಾಗೂ ಉರ್ದು ನಾಮಫಲಕ ಹಾಗೆಯೇ ಮುಂದುವರಿಯಲಿದ್ದು ಮುಂದಿನ ಪುರಸಭಾ ಸಾಮಾನ್ಯ ಸಭೆಯ ನಂತರವೇ ನಿರ್ಣಯವಾಗಬೇಕಿದೆ ಎನ್ನಲಾಗಿದೆ.
ಪುರಸಭಾ ನಾಮಫಲಕಕ್ಕೆ ಸಂಬoಧಪಟ್ಟoತೆ ಕನ್ನಡ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು ಈ ಬಗ್ಗೆ ಪುರಸಭಾ ಆಡಳಿತದೊಂದಿಗೆ ಸೂಕ್ತ ಚರ್ಚೆ ನಡೆಸಿದ್ದೇನೆ. ಸಾಮಾನ್ಯ ಸಭೆಯ ನಂತರ ಮುಂದಿನ ಕ್ರಮ ಜರುಗಿಸಲಾಗುವುದು. ಅಲ್ಲಿಯ ತನಕ ಯಥಾ ಸ್ಥಿತಿಯನ್ನು ಕಾಪಾಡಲು ಸೂಚನೆ ನೀಡಲಾಗಿದ್ದು ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ ವದಗಿಸಲಾಗಿದೆ ಎಂದು ಮಮತಾದೇವಿ ಜಿ.ಎಸ್., ಸಹಾಯಕ ಆಯುಕ್ತರು ತಿಳಿಸಿದ್ದಾರೆ.

error: