April 25, 2024

Bhavana Tv

Its Your Channel

ಭಟ್ಕಳದಲ್ಲಿ ಭಾಷಾ ಸಂಘರ್ಷ ಧರ್ಮದ ದಂಗಲ್; ಭಟ್ಕಳದಲ್ಲಿ ಶಾಂತಿ ಕದಡುತ್ತಿದೆ ಭಾಷೆ ಕಿಚ್ಚು

ಭಟ್ಕಳದಲ್ಲಿ ಭಾಷಾ ಸಂಘರ್ಷ ಧರ್ಮದ ದಂಗಲ್, ಪುರಸಭೆ ಉರ್ದು ನಾಮಫಲಕ ತೆಗೆದುಹಾಕಲು ಹಿಂದೂಪರ ,ಕನ್ನಡಪರ ಹೋರಾಟಗಾರರ ಬಿಗಿ ಪಟ್ಟು…ಉರ್ದು ನಾಮಫಲಕ ತೆಗೆಯದಂತೆ ಮುಸ್ಲೀಂ ಸಂಘಟನೆ ಪಟ್ಟು…ಭಟ್ಕಳದಲ್ಲಿ ಶಾಂತಿ ಕದಡುತ್ತಿದೆ ಭಾಷೆ ಕಿಚ್ಚು…

ಹೌದು ಒಂದೆಡೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಉರ್ದು ಫಲಕ ತೆಗೆದುಹಾಕದಂತೆ ಪ್ರತಿಭಟನೆ ನಡೆಸುತ್ತಿರುವ ಮುಸ್ಲೀಂ ಸಂಘಟನೆಯವರು. ಮತ್ತೊಂದೆಡೆ ಎಸಿ ಕಚೇರಿಗೆ ಮುತ್ತಿಗೆ ಹಾಕಿ ಕನ್ನಡ ಫಲಕ ಮಾತ್ರ ಹಾಕುವಂತೆ ಆಗ್ರಹಿಸುತ್ತಿರುವ ಕನ್ನಡ ಸಂಘಟನೆಗಳು ಹಾಗೂ ಹಿಂದೂಪರ ಸಂಘಟನೆ ಸದಸ್ಯರು. ಹೌದು ಭಟ್ಕಳದಲ್ಲಿ ಭಾಷೆ ಧರ್ಮದ ಸಂಘರ್ಷಕ್ಕೆ ತಿರುಗಿಕೊಂಡಿದೆ. ಹಿಂದೂಪರ ಮತ್ತು ಕನ್ನಡ ಸಂಘಟನೆ ಪುರಸಭೆ ಕಚೇರಿಗೆ ಉರ್ದು ಭಾಷೆ ಫಲಕ ಅಲವಡಿಸಿದ್ದನ್ನು ಕಿತ್ತುಹಾಕಬೇಕು ಎಂದು ಪಟ್ಟು ಹಿಡಿದರೆ ,ಮುಸ್ಲೀಂ ಸಂಘಟನೆ ಈ ಹಿಂದೆ ಉರ್ದುವಿನಲ್ಲೇ ಕಚೇರಿಯಲ್ಲಿ ಫಲಕ ಹಾಕಲಾಗಿದ್ದು ಈಗ ಹಾಕಿರುವುದನ್ನು ಕಿತ್ತುಹಾಕಬಾರದು, ಕಿತ್ತು ಹಾಕಿದರೇ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ್ದು ಎರಡು ಜನಾಂಗದ ಪ್ರತಿಷ್ಟೆ ಪುರಸಭೆ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇನ್ನು ಕನ್ನಡ ಸಂಘಟನೆ ಹಾಗೂ ಮುಸ್ಲೀಂ ಸಂಘಟನೆಯ ಈ ಸ್ವ ಪ್ರತಿಷ್ಟೆ ಧರ್ಮ ಸಂಘರ್ಷದತ್ತ ತಿರುಗಿದೆ. ಹೀಗಾಗಿ ಪ್ರತಿಭಟನೆಗಿಳಿದವರನ್ನು ಪೊಲೀಸರು ಮನಪರಿವರ್ತಿಸಲು ಹರಸಾಹಸ ಪಟ್ಟರು.
ಇನ್ನು ಅಹಿತಕರ ಘಟನೆ ನಡೆಯದಂತೆ ಭಟ್ಕಳ ನಗರದಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಪರ ವಿರೋಧದ ಎರಡು ಸಂಘಟನೆಗಳಿಗೂ ಉಪವಿಭಾಗಾಧಿಕಾರಿಗಳು ಎರಡು ದಿನದ ಕಾಲಾವಕಾಶ ಕೋರಿದ್ದು ಜಿಲ್ಲಾಧಿಕಾರಿ ಗಳ ಸೂಚನೆಯಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಸದ್ಯ ಪುರಸಭೆ ಕಚೇರಿ ನಾಮಫಲಕ ವಿವಾದ ಎರಡು ಧರ್ಮದ ಪ್ರತಿಷ್ಟೆಯಾಗಿ ಮಾರ್ಪಟ್ಟಿದ್ದು ಶಾಂತಿಯಿoದ ಇದ್ದ ಭಟ್ಕಳದಲ್ಲಿ ಈಗ ಭಾಷೆ ಸಂಘರ್ಷ ಬೂದಿ ಮುಚ್ಚಿದ ಕೆಂಡದoತಾಗಿದ್ದು ,ಜಿಲ್ಲಾಡಳಿತದ ಮುಂದಿನ ನಡೆಯಮೇಲೆ ಎಲ್ಲವೂ ನಿಂತಿದೆ.

error: