March 29, 2024

Bhavana Tv

Its Your Channel

ಭಟ್ಕಳದ ತೆಂಗಿನಗುoಡಿ ಜಟ್ಟಿಗೆ ಬಂದರು ಸಚಿವ ಎಸ್. ಅಂಗಾರ ಭೇಟಿ

ಭಟ್ಕಳ ತಾಲ್ಲೂಕಿನ ತೆಂಗಿನಗುAಡಿಯಲ್ಲಿ ಜಟ್ಟಿ ತಂಗುದಾಣ ಕುಸಿತದಿಂದ ಆಗಿರುವ ಹಾನಿ, ಲೋಪ ದೋಷಗಳ ಕುರಿತು ಚರ್ಚಿಸಲು ಬುಧವಾರ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ ಎಂದು ಮೀನುಗಾರಿಕಾ ಹಾಗೂ ಬಂದರು ಸಚಿವ ಎಸ್. ಅಂಗಾರ ಹೇಳಿದರು.

ಅವರು ಕಾರವಾರದಿಂದ ಮಂಗಳೂರಿನಗೆ ತೆರಳುವ ಮಾರ್ಗದಲ್ಲಿ ತೆಂಗಿನಗುAಡಿ ಬಂದರು ಕಾಮಗಾರಿ ವೀಕ್ಷಿಸಿದ ಅವರು ಕುಸಿದಿರುವ ತಂಗುದಾಣದ ಪ್ರದೇಶವನ್ನು ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಹೇಳಿದರು.
ತೆಂಗಿನಗುAಡಿ ಬಂದರಿನಲ್ಲಿ ಅಭಿವೃದ್ಧಿ ಕಾಮಗಾರಿಯಾಗುತ್ತಿದ್ದು ಅಭಿವೃದ್ಧಿ ಕಾಮಗಾರಿಯ ಭಾಗವಾಗಿರುವ ತಂಗುದಾಣದ ಸ್ಲಾಬ್ ಕುಸಿತ ಉಂಟಾಗಿರುವುದನ್ನು ವೀಕ್ಷಿಸಿದ ಅವರು ತಾನು ಯಾವುದೇ ತಾಂತ್ರಿಕ ಪರಿಣಿತಿಯನ್ನು ಹೊಂದಿಲ್ಲ. ಕುಸಿತಕ್ಕೆ ಕಾರಣ ಏನು ಎನ್ನುವ ಕುರಿತು ತಾಂತ್ರಿಕ ತಜ್ಞರಿಂದ ಮಾಹಿತಿ ಪಡೆಯುತ್ತೇನೆ. ಮೀನುಗಾರಿಕಾ ಇಲಾಖೆಯ ತಾಂತ್ರಿಕ ತಜ್ಞರನ್ನು ಹೊರತುಪಡಿಸಿ, ಬೇರೆಯವರಿಂದಲೂ ಕೂಡಾ ಕುಸಿತಕ್ಕೆ ಕಾರಣ ಹಾಗೂ ತಾಂತ್ರಿಕ ಮಾಹಿತಿಯನ್ನು ಪಡೆದು ಮುಂದೆ ಕೈಗೊಳ್ಳಬೇಕಾದ ಕ್ರಮದ ಕುರಿತು ನಿರ್ಧಾರ ಮಾಡುತ್ತೇನೆ ಎಂದೂ ಅವರು ಹೇಳಿದರು.
ಎಷ್ಟು ಸಮಯದಲ್ಲಿ ಇದಕ್ಕೆ ಪರಿಹಾರ ಮಾಡುತ್ತೀರಿ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ, ತಾಂತ್ರಿಕ ತಜ್ಞರಿಂದ ವರದಿಯನ್ನು ತರಿಸಿಕೊಂಡು ಯಾವರೀತಿಯಲ್ಲಿ ಕಾಮಗಾರಿ ಮಾಡಬೇಕು ಎನ್ನುವುದನ್ನು ತಿಳಿದುಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದರು.
ತೆಂಗಿನಗುoಡಿ ಬಂದರಿನಲ್ಲಿ ತಂಗುದಾಣಕ್ಕೆ ಹಾಕಿರುವ ಸ್ಲಾಬ್‌ಗೆ ಕಬ್ಬಿಣದ ರಾಡ್ ಬಳಸಿಯೇ ಇಲ್ಲ, ಇದು ಎಸ್ಟಿಮೆಬ್ಟ್ನಲ್ಲಿ ಇಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೂ ಅವರು ಪರಿಶೀಲಿಸುತ್ತೇನೆ ಎಂದಷ್ಟೇ ಹೇಳಿ ಜಾರಿಕೊಂಡರು.
ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ, ಮೀನುಗಾರರ ಪ್ರಮುಖರಾದ ನಾರಾಯಣ ಮೊಗೇರ, ಅಣ್ಣಪ್ಪ ಮೊಗೇರ, ಜಟ್ಗ ಮೊಗೇರ, ಪುಂಡಲೀಕ ಹೆಬಳೆ, ಸುಬ್ರಾಯ ದೇವಡಿಗ ಮುಂತಾದವರು ಉಪಸ್ಥಿತರಿದ್ದರು.

error: