April 24, 2024

Bhavana Tv

Its Your Channel

ಪುರಸಭೆಯ ಅವೈಜ್ಞಾನಿಕ ಚರಂಡಿ ನಿರ್ವಹಣೆಯ ಪರಿಣಾಮ ; ರಘುನಾಥ ದೇವಸ್ಥಾನಕ್ಕೆ ನುಗ್ಗಿದ ಮಳೆ ನೀರು

ಭಟ್ಕಳ: ಪುರಸಭೆಯ ಅವೈಜ್ಞಾನಿಕ ಚರಂಡಿ ನಿರ್ವಹಣೆಯ ಪರಿಣಾಮ ನಿರಂತರ ಸುರಿದ ಮಳೆಗೆ ಭಟ್ಕಳದ ರಘುನಾಥ ರಸ್ತೆಯಲ್ಲಿರುವ ರಘುನಾಥ ದೇವಸ್ಥಾನಕ್ಕೆ ಮಳೆಯ ನೀರು ನುಗ್ಗಿದ್ದು ಧಾರ್ಮಿಕ ವಿಧಿವಿಧಾನಕ್ಕೆ ಅಡಚಣೆ ಉಂಟಾಗಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಭಟ್ಕಳ ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ರಘುನಾಥ ದೇವಸ್ಥಾನ ಅತಿ ಪುರಾತನ ದೇವಸ್ಥಾನಗಳಲ್ಲಿ ಒಂದು. ಇದಕ್ಕೆ 400ಕ್ಕೂ ಅಧಿಕ ವರ್ಷಗಳ ಇತಿಹಾಸ ಇದೆ. ಪ್ರತಿ ಬಾರಿ ಮಳೆಗಾಲದಲ್ಲಿ ಈ ದೇವಸ್ಥಾನಕ್ಕೆ ಮಳೆಯ ನೀರು ನುಗ್ಗುತ್ತಿದೆ. ಇದರಿಂದ ಧಾರ್ಮಿಕ ಅನುಷ್ಠಾನಗಳಿಗೆ ಅಡ್ಡಿಯಾಗುತ್ತಿದೆ. ದೇವಸ್ಥಾನದ ಗರ್ಭ ಗುಡಿಯ ಕೊನೆಯ ಮೆಟ್ಟಿಲವರೆಗೂ ನೀರು ಬರುವದು ಇಲ್ಲಿನ ಅರ್ಚಕರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಹಲವಾರು ಬಾರಿ ಪುರಸಭೆ ಹಾಗೂ ಪುರಾತತ್ವ ಇಲಾಖೆಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ನೀರಿನ ಪಂಪ್ ಬಳಸಿ ನೀರು ಹೊರಹಾಕುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಭಕ್ತರ ಧಾರ್ಮಿಕ ಭಾವನಗೆಳಿಗೂ ಧಕ್ಕೆ ಯಾಗಿದೆ. ದೇವಸ್ಥಾನದ ಸೂತ್ತಲೂ ಸಮರ್ಪಕವಾಗಿ ಚರಂಡಿ ನೀರು ಹರಿದು ಹೋದರೆ ಮಲೀನ ನೀರು ದೇವಸ್ಥಾನದ ಒಳಗೆ ಬರುವದಿಲ್ಲ. ಈ ಬಾರಿ ಚರಂಡಿಯ ಹೂಳು ಕೂಡ ಎತ್ತಲಿಲ್ಲ ಆರಂಭದಲ್ಲೆ ಈ ಸ್ಥಿತಿ ಇದ್ದು ಬಾರಿ ಮಳೆಗೆ ನಮ್ಮ ಸ್ಥಿತಿ ಇನ್ನಷ್ಟು ಕಠೀನವಾಗಲಿದೆ ಎಂದು ಇಲ್ಲಿನ ವೆ.ಮೂ. ರಾಮಚಂದ್ರ ಭಟ್ಟ ತಮ್ಮ ಅಳಲು ತೋಡಿಕೊಂಡಿದ್ದಾರೆ.

error: